• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಚಿವ ಸುಧಾಕರ ಏಕಪತ್ನಿ ವ್ರತಸ್ಥ ಹೇಳಿಕೆಗೆ ವೆಲ್ಫೇರ್ ಪಾರ್ಟಿ ಖಂಡನೆ

|

ಬೆಂಗಳೂರು, ಮಾರ್ಚ್ 25: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ವಲಯದಲ್ಲಿ ವಾಗ್ವಾದ ಮುಂದುವರಿದಿದೆ. ಈ ಮಧ್ಯೆ 'ಏಕಪತ್ನಿ ವ್ರತಸ್ಥರು ಯಾರಿದ್ದಾರೆ' ಎಂದು ಸವಾಲು ಹಾಕಿರುವ ವೈದ್ಯಕೀಯ ಸಚಿವ ಡಾ.ಸುಧಾಕರ್ ವಿರುದ್ದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆ ಅವರ‌ ಮನಸ್ಥಿತಿಯನ್ನು ತೋರಿಸುತ್ತದೆ. ಬಹುಶ ಅರೋಗ್ಯ ಸಚಿವರ ಮಾನಸಿಕ ಅರೋಗ್ಯ ದಲ್ಲಿ ವ್ಯತ್ಯಾಸ ಆಗಿರಬಹುದು, ಯಾರೋ ಮಾಡಿದ ತಪ್ಪು ಸಮರ್ಥನೆ ಮಾಡಿಕೊಳ್ಳಲು ಮತ್ಯಾರನ್ನೋ ಎಳೆದು ತರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಸಂಸ್ಕಾರ ಇದ್ದವರು ಈ ರೀತಿಯಲ್ಲಿ ಮಾತನಾಡುತ್ತಿರಲಿಲ್ಲ ಎಂದು ಅವರು ಅಸಮಾಧಾನ ತೋರಿದರು.

ಎಲ್ಲವನ್ನೂ ಬೀದಿ ರಂಪ‌ ಮಾಡಿ ಸದನದ ಗೌರವ ಘನತೆ ಹರಾಜು ಹಾಕಿರುವುದು ಅಲ್ಲದೆ ಶಾಸಕರಲ್ಲಿ ಮಹಿಳೆಯರು ಇದ್ದರೆ, ಈ ರೀತಿಯ ಹೇಳಿಕೆ ಇಂದ ಮಹಿಳೆಯರ ಅವಮಾನ ವಾಗುತ್ತದೆ ಎಂಬ ಪರಿಜ್ಞಾನವು ಸಚಿವರಿಗೆ ಇಲ್ಲ. ಇವರ ಈ ಬೇಜವಾಬ್ದಾರಿ ಹೇಳಿಕೆಯಿಂದ ಒಳ್ಳೆಯ ವ್ಯಕ್ತಿತ್ವ ಇರುವ ರಾಜಕಾರಣಿ ಗಳ ಮೇಲೆ ಜನ ಅನುಮಾನ ಪಡುವಂಥ ವಾತಾವರಣ ನಿರ್ಮಾಣ ವಾಗಿದೆ, ಸಚಿವರು ತಮ್ಮ ಈ ಹೇಳಿಕೆಗೆ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ವೆಲ್ಫೇರ್ ಪಾರ್ಟಿ ಅಗ್ರಹಿಸಿದೆ.

   ವ್ಯಂಗ್ಯ ಭರಿತ ಕಿರು ನಾಟಕ ಪ್ರದರ್ಶಿಸಿ ಆರೋಗ್ಯ ಸಚಿವರ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ | Oneindia Kannada

   '224 ಶಾಸಕರಿಗೆ ಚಾಲೆಂಜ್ ಹಾಕಿರುವ ಸುಧಾಕರ್ ಅವರ ಹೇಳಿಕೆ ಆಕ್ಷೇಪಾರ್ಹವಾದದ್ದು. ಇದು ಎಲ್ಲರಿಗಾದ ಅವಮಾನ' ಎಂದು ವೆಲ್ಫೇರ್ ಪಾರ್ಟಿ ಹೇಳಿದರು.

   English summary
   Welfare party India has condemned minister Sudhakar One Husband statement.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X