ಕರ್ನಾಟಕದ ವಿವಿಧೆಡೆ ಕಳೆದ ವಾರ ಸುರಿದ ಮಳೆ ಪ್ರಮಾಣವೆಷ್ಟು?
ಕರ್ನಾಟಕದ ಮಲೆನಾಡು, ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 6ರ ನಂತರ ಮಳೆಯ ಅಬ್ಬರ ಕಾಣಬಹುದಾಗಿದೆ. ಮಿಕ್ಕಂತೆ ಮುಂದಿನ ಶುಕ್ರವಾರದ ತನಕ ರಾಜ್ಯದ ಬಹುತೇಕ ಎಲ್ಲೆಡೆ ಬಿರು ಬಿಸಿಲಿನ ತಾಪಮಾನ ಕಾಡಲಿದೆ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ. ಈ ನಡುವೆ ಕರ್ನಾಟಕದ ವಿವಿಧೆಡೆ ಕಳೆದ ಸುರಿದ ಮಳೆ ಪ್ರಮಾಣವೆಷ್ಟು? ಎಂಬ ವರದಿ ಇಲ್ಲಿದೆ.
ಉತ್ತರ ಒಳನಾಡು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ವಾರ ಅಕಾಲಿಕ ಮಳೆ ಸುರಿದು, ರೈತರು ಬೆಳೆದಿದ್ದ ಗೋಧಿ, ತರಕಾರಿ, ಹತ್ತಿ ನಾಶವಾಯಿತು.
ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ, ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾರದಲ್ಲಿ ಒಂದೆರಡು ದಿನ ಮಾತ್ರ ಒಂದು ಸುತ್ತಿನ ಮಳೆ ಕಾಣಲಾಯ್ತು. ಮಿಕ್ಕಂತೆ ರಾಜ್ಯದೆಲ್ಲೆಡೆ ಸುಡುವ ಬಿಸಿಲು ಕಾಡಲಿದೆ.
ಬೆಂಗಳೂರಿನ ನಗರ ಪ್ರದೇಶದಲ್ಲಿ ಏಪ್ರಿಲ್ ಮೊದಲ ವಾರ ಒಂದೆರಡು ಕಡೆ ಸಾಧಾರಣ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಉಸ್ತುವಾರಿ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ. ರಾಜ್ಯದ ಯಾವ ಜಿಲ್ಲೆಯಲ್ಲಿ ಮಳೆ ಎಷ್ಟಿದೆ? ಎಂಬುದರ ವರದಿ ಮುಂದಿದೆ..

ಎಲ್ಲೆಲ್ಲಿ ಮಳೆ ಸುರಿದಿದೆ
ಅತಿ ಹೆಚ್ಚು ಮಳೆ: ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ.
ಅತ್ಯಧಿಕ: ಹಾವೇರಿ
ಸಾಧಾರಣ: ಚಿಕ್ಕಮಗಳೂರು
ಮಳೆ ಕ್ಷೀಣ: ಧಾರವಾಡ, ಬಳ್ಳಾರಿ
ಅತ್ಯಂತ ಕ್ಷೀಣವಾಗಿ ಮಳೆ: ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಕೊಡಗು, ಮೈಸೂರು
ಮಳೆಯೇ ಇಲ್ಲ: ಬಾಗಲಕೋಟೆ, ಗದಗ, ಬೆಂಗಳೂರುಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ತುಮಕೂರು,ಚಿತ್ರದುರ್ಗ, ಹಾಸನ,ಕೋಲಾರ

ಯಾವ ದಿನ ಎಲ್ಲಿ ಹೆಚ್ಚು ಮಳೆ(ಸೆಂ. ಮೀ)
ಮಾರ್ಚ್ 25: ಪುತ್ತೂರು (ದಕ್ಷಿಣ ಕನ್ನಡ), ಮುಂಡಗೋಡ, ಮಂಚಿಕೆರೆ, ಕಾರವಾಡ (ಉತ್ತರ ಕನ್ನಡ) ತಲಾ 2, ಕದ್ರ, ಸುಬ್ರಹ್ಮಣ್ಯ(ದಕ್ಷಿಣ ಕನ್ನಡ) ತಲಾ 1.
ಮಾರ್ಚ್ 28: ಮಾಣಿ (ದಕ್ಷಿಣ ಕನ್ನಡ) 1 ಸೆಂ. ಮೀ
ಮಾರ್ಚ್ 29: ಹಿರೇಕೆರೂರು (ಹಾವೇರಿ) 4, ಹುಂಚದಕಟ್ಟೆ(ಶಿವಮೊಗ್ಗ) 3, ಮೂಡುಬಿದ್ರೆ(ದಕ್ಷಿಣ ಕನ್ನಡ) 3, ಹೊಸ ನಗರ(ಶಿವಮೊಗ್ಗ) 2, ದಾವಣಗೆರೆ 2, ಯಲ್ಲಾಪುರ (ಉತ್ತರ ಕನ್ನಡ) 2, ಮುಂಡಗೋಡ (ಉತ್ತರ ಕನ್ನಡ), ಕಲಘಟಗಿ (ಧಾರವಾಡ), ಶೃಂಗೇರಿ(ಚಿಕ್ಕಮಗಳೂರು) ತಲಾ 1.

ಮಾರ್ಚ್ 30 ರಿಂದ ಏಪ್ರಿಲ್ ಮೊದಲ ವಾರ
ಮಾರ್ಚ್ 30: ಮಂಗಳೂರು(ದಕ್ಷಿಣ ಕನ್ನಡ) 3, ಕಿರವಟ್ಟಿ(ಉತ್ತರ ಕನ್ನಡ), ಶಿರಸಿ(ಉತ್ತರಕನ್ನಡ) , ಕಳಸ (ಚಿಕ್ಕಮಗಳೂರು) ತಲಾ 2, ಕಾರ್ಕಳ, ಕುಂದಾಪುರ(ಉಡುಪಿ), ಪಣಂಬೂರು, ಮಂಗಳೂರು, ಉಪ್ಪಿನಂಗಡಿ, ವಿಟ್ಲ (ದಕ್ಷಿಣ ಕನ್ನಡ), ಹಳಿಯಾಳ, ಯಲ್ಲಾಪುರ, ಸಿದ್ದಾಪುರ (ಉತ್ತರ ಕನ್ನಡ) ತಾಳಗುಪ್ಪ (ಶಿವಮೊಗ್ಗ) ತಲಾ 1 ಸೆಂ.ಮೀ ಮಳೆ.
ಏಪ್ರಿಲ್ 2ರ ತನಕ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಿದೆ. ನಂತರ ಏಪ್ರಿಲ್ 6 ರ ತನಕ ರಾಜ್ಯದೆಲ್ಲೆಡೆ ಒಣಹವೆ ಮುಂದುವರೆಯಲಿದೆ.

ರಾಜ್ಯದ ಹಲವೆಡೆ ಒಣಹವೆ
ಬೆಂಗಳೂರಲ್ಲಿ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮಾರ್ಚ್ನಲ್ಲಿ ನಾಲ್ಕನೇ ಬಾರಿ 35 ಪ್ಲಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಏಪ್ರಿಲ್ 7ರ ತನಕ ಇದೇ ರೀತಿ ಬಿಸಿಲು ಮುಂದುವರೆಯಲಿದೆ. ವಿಮಾನ ನಿಲ್ದಾಣ ಬಳಿ ಮುಂಜಾನೆ ಮಂಜು ಕವಿದ ವಾತಾವರಣ ಇದ್ದರೂ 35.5ಡಿಗ್ರಿ ಸೆಲ್ಸಿಯಸ್ ಇರಲಿದೆ.