ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಳಯವಾದರೂ ಅತೃಪ್ತರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ: ಸಿದ್ದರಾಮಯ್ಯ

|
Google Oneindia Kannada News

Recommended Video

ಅತೃಪ್ತರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ: ಸಿದ್ದರಾಮಯ್ಯ | Siddaramaiah

ಬೆಂಗಳೂರು, ಜುಲೈ 23: ಪಕ್ಷಕ್ಕೆ ಕೈಕೊಟ್ಟು ಸರ್ಕಾರ ಉರುಳುವಂತೆ ಮಾಡಿದ ಶಾಸಕರ ಬಗ್ಗೆ ಕಠಿಣ ನಿಲುವು ತಳೆದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಕಾರಣಕ್ಕೂ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿವೆ.

ಈ ಬಗ್ಗೆ ಸದನದಲ್ಲಿಯೇ ಸ್ಪಷ್ಟನೆ ಕೊಟ್ಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರುಗಳು, ಕೈ ಕೊಟ್ಟ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಅತೃಪ್ತರ ಶಾಸಕರನ್ನು ಜೊತೆಗೆ ಕರೆದುಕೊಳ್ಳುತ್ತೇವೆ: ಮಾಧುಸ್ವಾಮಿಅತೃಪ್ತರ ಶಾಸಕರನ್ನು ಜೊತೆಗೆ ಕರೆದುಕೊಳ್ಳುತ್ತೇವೆ: ಮಾಧುಸ್ವಾಮಿ

ಕುಮಾರಸ್ವಾಮಿ ಅವರು ಮಾತನಾಡುವಾಗ ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರೇ ಈ ವಿಷಯವನ್ನು ಪ್ರಸ್ತಾಪಿಸಿದರು. ಅವರು (ಅತೃಪ್ತರು) ವಾಪಸ್ ಬಂದರೆ ಏನು ಮಾಡುತ್ತೀರಿ ಎಂದು ಕೇಳಿದರು.

We would not allow them into congress party: Siddaramaiah to dissident MLAs


ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಅವರು ವಾಪಸ್ ಬಂದರೆ ಖಂಡಿತವಾಗಿಯೂ ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಸದನದಲ್ಲಿ ಹೇಳಿದರು. ಜೆಡಿಎಸ್‌ನ ಮೂರು ಶಾಸಕರು ರಾಜೀನಾಮೆ ನೀಡಿ ಮುಂಬೈನಲ್ಲಿ ತಂಗಿದ್ದಾರೆ.

ಯುದ್ದಗೆದ್ದ ಸಂಭ್ರಮದಲ್ಲಿ ಯಡಿಯೂರಪ್ಪ: ಮುಂದಿನ ನಡೆಯೇನು?ಯುದ್ದಗೆದ್ದ ಸಂಭ್ರಮದಲ್ಲಿ ಯಡಿಯೂರಪ್ಪ: ಮುಂದಿನ ನಡೆಯೇನು?

ಸಿದ್ದರಾಮಯ್ಯ ಅವರು ಸಹ ಎದ್ದು ನಿಂತು, 'ರಾಜ್ಯದ ಜನರಿಗೆ ಇದು ಗೊತ್ತಾಗಬೇಕು ಹಾಗಾಗಿ ಸದನದಲ್ಲಿಯೇ ನಾನು ಘೋಷಣೆ ಮಾಡುತಿದ್ದೇನೆ, ಪ್ರಳಯವಾದರೂ ಸಹ ಬಿಜೆಪಿಯ ಆಮೀಷಗಳಿಗೆ ಬಲಿಯಾಗಿ ಪಕ್ಷಕ್ಕೆ ಕೈಕೊಟ್ಟ ಶಾಸಕರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

English summary
We won't allow them to come to our party again ever said Siddaramaiah about dissident MLAs. Also JDS leader Kumaraswamy also said that we did not allow them to come our party ever again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X