ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ರಚನೆ : ಸದಾನಂದ ಗೌಡರು ಕೊಟ್ಟರು ಬ್ರೇಕಿಂಗ್ ನ್ಯೂಸ್

|
Google Oneindia Kannada News

ಬೆಂಗಳೂರು, ಜನವರಿ 15 : 'ಮಾಧ್ಯಮಗಳು ಕೇಳಿದಾಗ ಬ್ರೇಕಿಂಗ್ ನ್ಯೂಸ್ ಕೊಡಲು ಆಗುವುದಿಲ್ಲ. ನಾವು ಕೊಟ್ಟಾಗ ಅದು ಬ್ರೇಕಿಂಗ್ ನ್ಯೂಸ್ ಆಗುತ್ತದೆ. 104 ಶಾಸಕರಿರುವ ಪಕ್ಷ ಸರ್ಕಾರ ರಚನೆ ಮಾಡಬಾರದೇ?' ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಪ್ರಶ್ನಿಸಿದರು.

ಮಂಗಳವಾರ ನೆಲಮಂಗಲದಲ್ಲಿ ಮಾತನಾಡಿದ ಡಿ.ವಿ.ಸದಾನಂದ ಗೌಡ ಅವರು, 'ನಮಗೆ ಯಾವುದೇ ಖಾಯಿಲೆ ಇಲ್ಲ. ಆದ್ದರಿಂದ, ಆಪರೇಷನ್ ಅಗತ್ಯವಿಲ್ಲ. ಖಾಯಿಲೆ ಇರುವುದು ಕಾಂಗ್ರೆಸ್‌-ಜೆಡಿಎಸ್‌ಗೆ ಅವರಿಗೆ ಆಪರೇಷನ್ ಅಗತ್ಯವಿದೆ' ಎಂದರು.

ಎಚ್.ಡಿ.ಕುಮಾರಸ್ವಾಮಿ ಸಂಪುಟದ ನಾಲ್ವರು ಸಚಿವರ ರಾಜೀನಾಮೆ?ಎಚ್.ಡಿ.ಕುಮಾರಸ್ವಾಮಿ ಸಂಪುಟದ ನಾಲ್ವರು ಸಚಿವರ ರಾಜೀನಾಮೆ?

'37 ಸೀಟುಗಳನ್ನು ಹೊಂದಿರುವ ಅವರು ಸರ್ಕಾರ ಮಾಡುವುದಾದದರೆ 104 ಸ್ಥಾನಗಳನ್ನು ಹೊಂದಿರುವ ನಾವು ಏಕೆ ಸರ್ಕಾರ ಮಾಡಬಾರದು. ನೀವು ಕೇಳಿದಾಗ ಬ್ರೇಕಿಂಗ್ ನ್ಯೂಸ್ ಕೊಡಲು ಆಗುವುದಿಲ್ಲ, ನಾವು ಕೊಟ್ಟಾಗ ಅದು ಬ್ರೇಕಿಂಗ್ ನ್ಯೂಸ್ ಆಗುತ್ತದೆ' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

'ಕೈ' ತಪ್ಪಿರುವ ಶಾಸಕರ ವಾಪಸ್ ಕರೆತರಲು ಸೇನಾಪತಿ ಡಿ.ಕೆ.ಶಿವಕುಮಾರ್ ಮುಂಬೈಗೆ'ಕೈ' ತಪ್ಪಿರುವ ಶಾಸಕರ ವಾಪಸ್ ಕರೆತರಲು ಸೇನಾಪತಿ ಡಿ.ಕೆ.ಶಿವಕುಮಾರ್ ಮುಂಬೈಗೆ

We dont need operation DV Sadanada Gowda

'ಶಾಸಕರು ರೆಸಾರ್ಟ್‌ನಲ್ಲಿ ಏನು ಮಾಡುತ್ತಾರೆ, ಎಲ್ಲಾ ಶಾಸಕರು ಏಕೆ ಒಂದೇ ಸ್ಥಳದಲ್ಲಿ ಇದ್ದಾರೆ ಎಂಬುದೆಲ್ಲಾ ಪಕ್ಷದ ವಿಚಾರಗಳು ಅದನ್ನು ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ. ಹಾಗೆ ಹೇಳಿದರೆ ಪಕ್ಷದ ತಂತ್ರಗಳು ಬಯಲಾಗುತ್ತವೆ' ಎಂದು ಸದಾನಂದ ಗೌಡರು ಹೇಳಿದರು.

ಆಪರೇಷನ್ ಕಮಲ : ಬೆಂಗಳೂರಿಗೆ ಆಗಮಿಸಿದ ಕೆ.ಸಿ.ವೇಣುಗೋಪಾಲ್ಆಪರೇಷನ್ ಕಮಲ : ಬೆಂಗಳೂರಿಗೆ ಆಗಮಿಸಿದ ಕೆ.ಸಿ.ವೇಣುಗೋಪಾಲ್

'ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ನಾವು ಸರ್ಕಾರವನ್ನು ಬೀಳಿಸುವುದಿಲ್ಲ. ಅವರ ಪಕ್ಷದ ನಾಯಕರಿಂದಾಗಿಯೇ ಸರ್ಕಾರ ಪತನಗೊಂಡರೆ ನಾವು ಮುಂದಿನ ಕಾರ್ಯತಂತ್ರದ ಕುರಿತು ಆಲೋಚನೆ ನಡೆಸುತ್ತೇವೆ' ಎಂದು ಸದಾನಂದ ಗೌಡರು ಸ್ಪಷ್ಟಪಡಿಸಿದರು.

English summary
Union Minister D.V.Sadananda Gowda said that we don't need operation. If Congress-JD(S) alliance government lost the majority we will think about next step.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X