ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧನುರ್ಮಾಸದಲ್ಲಿ ಸಂಪುಟ ವಿಸ್ತರಣೆ ಮಾಡುವುದಿಲ್ಲ: ಜೆಡಿಎಸ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 22: ಕಾಂಗ್ರೆಸ್ ಪಕ್ಷವು ಹೊಸದಾಗಿ ಸಂಪುಟ ಸೇರುವ ಏಳು ಜನ ಶಾಸಕರ ಪಟ್ಟಿಯನ್ನು ಈಗಾಗಲೇ ರಾಜ್ಯಪಾಲರ ಕೈಗಿಟ್ಟು ಸಂಪುಟ ವಿಸ್ತರಣೆಗೆ ಸರ್ವ ಸಿದ್ಧತೆ ಮಾಡಿದೆ. ಆದರೆ ಮಿತ್ರ ಪಕ್ಷ ಜೆಡಿಎಸ್‌ ಮಾತ್ರ ಈ ಬಗ್ಗೆ ಮೌನವಾಗಿಯೇ ಇದೆ.

ಹೊಸದಾಗಿ ಸಚಿವ ಸಂಪುಟ ಸೇರುತ್ತಿರುವ ಕಾಂಗ್ರೆಸ್‌ ಶಾಸಕರ ಪಟ್ಟಿ ಹೊಸದಾಗಿ ಸಚಿವ ಸಂಪುಟ ಸೇರುತ್ತಿರುವ ಕಾಂಗ್ರೆಸ್‌ ಶಾಸಕರ ಪಟ್ಟಿ

ಆದರೆ ಜೆಡಿಎಸ್‌ನ ಮೌನಕ್ಕೆ ಕಾರಣ ಹೊರ ಬಿದ್ದಿದ್ದು, ಧನುರ್ಮಾಸ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಜೆಡಿಎಸ್‌ ಸ್ಪಷ್ಟಪಡಿಸಿದೆ.

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ: ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ: ಸತೀಶ್ ಜಾರಕಿಹೊಳಿ

ಧನುರ್ಮಾಸ ಮುಗಿದು, ಸಂಕ್ರಾಂತಿ ಸಮಯದಲ್ಲಿಯೇ ಜೆಡಿಎಸ್ ಪಕ್ಷವು ತಮ್ಮ ಖಾತೆಯಲ್ಲಿರುವ ಎರಡು ಸ್ಥಾನಗಳಿಗೆ ಮಂತ್ರಿಗಳನ್ನು ಆಯ್ಕೆ ಮಾಡಲಿದೆ.

we do not do cabinet expansion till next month: JDS

ಧನುರ್ಮಾಸದಲ್ಲಿ ಸಂಪುಟ ವಿಸ್ತರಣೆ ಮಾಡಬಾರದು ಎಂದು ರೇವಣ್ಣ ಹಾಗೂ ದೇವೇಗೌಡರ ನಿಲವಾಗಿದೆ ಎನ್ನಲಾಗಿದೆ. ಕಾಂಗ್ರೆಸ್‌ ಜೊತೆಗೆ ಸಂಪುಟ ವಿಸ್ತರಣೆ ಮಾಡಲು ಕುಮಾರಸ್ವಾಮಿ ತಯಾರಿದ್ದರು ಆದರೆ ಎಚ್‌.ಡಿ.ರೇವಣ್ಣ ಹಾಗೂ ದೇವೇಗೌಡರು ಇದಕ್ಕೆ ತಡೆ ಒಡ್ಡಿದ್ದಾರೆ.

ಇಂದು ಪ್ರಮಾಣವಚನ ನಡೆಯೋದು ಅನುಮಾನ: ಬಿಎಸ್ ವೈಇಂದು ಪ್ರಮಾಣವಚನ ನಡೆಯೋದು ಅನುಮಾನ: ಬಿಎಸ್ ವೈ

ಜೆಡಿಎಸ್‌ ಬಳಿ ಎರಡು ಖಾತೆಗಳು ಖಾಲಿ ಇವೆ. ಈ ಎರಡು ಸ್ಥಾನಕ್ಕೆ ಮೂರು ಜನ ಆಕಾಂಕ್ಷಿಗಳಿದ್ದಾರೆ. ಸಕಲೇಶಪುರದ ಜೆಡಿಎಸ್ ಶಾಸಕ ಕುಮಾರಸ್ವಾಮಿ, ಬಸವರಾಜ ಹೊರಟ್ಟಿ, ಮೇಲ್ಮನೆ ಸದಸ್ಯ ಟಿ.ಎ.ಶರವಣ ಅವರುಗಳು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

English summary
JDS leader said we do not do cabinet expansion till next month. As per the shastra this month is not good so jds decided to expand cabonet next moth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X