ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೂ ಅನುಭವಿಸಿದ್ದೇನೆ ಎಂದು ಸಿಎಂ ಯಡಿಯೂರಪ್ಪ ರೈತರಿಗೆ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಸೆ. 28: ಎಪಿಎಂಸಿ ಕಾಯಿದೆ ತಿದ್ದುಪಡಿ ಮಾಡಿರುವುದರ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನುಭವಿಸಿರುವ ನೋವಿದೆಯಾ? ಹೌದು ಅಂಥದ್ದೊಂದು ಮಾತನ್ನು ಸ್ವತಃ ಅವರೇ ಇಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಇಡೀ ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆದಿರುವಾಗಲೇ ಸುದ್ದಿಗೋಷ್ಠಿ ನಡೆಸಿದ್ದ ಯಡಿಯೂರಪ್ಪ ಅವರು, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ರೈತರಿಗೆ ಒಳ್ಳೆಯದಾಗುತ್ತದೆ ಎಂದಿದ್ದಾರೆ.

ಎಪಿಎಂಸಿಗಳನ್ನು ನಾವು ಮುಚ್ಚುವುದಿಲ್ಲ. ಕಾಂಗ್ರೆಸ್ ಪಕ್ಷದವರೇ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಎಂದು ಧ್ವನಿ ಎತ್ತಿದ್ದರು. ಇದೀಗ ಅವರೇ ಹೀಗೆ ಮಾಡುವುದು ಸರಿಯಲ್ಲ. ರೈತರ ಅನುಕೂಲಕ್ಕಾಗಿಯೇ ನಾವು ಇದನ್ನು ಮಾಡುತ್ತಿದ್ದೇವೆ. ಎಪಿಎಂಸಿ ಇಂದ ತಾವು ಅನುಭವಿಸಿದ್ದನ್ನು ಹೇಳಿದ್ದಾರೆ. ಬಹುತೇಕ ಅವರು ಹಿಂದೆ ರಾಜಕೀಯಕ್ಕೆ ಬರುವ ಮೊದಲು ಅನುಭವಿಸಿದ್ದನ್ನು ಹೇಳಿರುವ ಸಾಧ್ಯತೆಯಿದೆ. ಹಾಗಾದರೆ ಯಡಿಯೂರಪ್ಪ ಅವರು ಹೇಳಿದ್ದೇನು? ಮುಂದೆ ಓದಿ...

ಎಪಿಎಂಸಿ ಮುಚ್ಚುತ್ತಿಲ್ಲ!

ಎಪಿಎಂಸಿ ಮುಚ್ಚುತ್ತಿಲ್ಲ!

ಎಪಿಎಂಸಿಗಳನ್ನು ನಾವು ಮುಚ್ಚುತ್ತಿಲ್ಲ. ಬದಲಿಗೆ ಎಪಿಎಂಸಿಗಳಿಗೆ ನಾವು ಬಲವನ್ನು ತುಂಬಿದ್ದೇವೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಿ ಎಂದು ಒತ್ತಾಯ ಮಾಡಿದ್ದ ಕಾಂಗ್ರೆಸ್ ಪಕ್ಷದವರು ಈಗ ವಿರೋಧ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ರೈತ ವಿರೋಧಿ ಕಾಯ್ದೆ, ಯಡಿಯೂರಪ್ಪ ಮುಂದೆ 7 ಪ್ರಶ್ನೆಗಳುರೈತ ವಿರೋಧಿ ಕಾಯ್ದೆ, ಯಡಿಯೂರಪ್ಪ ಮುಂದೆ 7 ಪ್ರಶ್ನೆಗಳು

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಎಪಿಎಂಸಿ ಸೆಸ್ ಶೇಕಡಾ 1.5 ಇತ್ತು. ಈಗ ನಾವು ಸೆಸ್‌ನ್ನು ಶೇಕಡಾ 0.35ಕ್ಕೆ ಇಳಿಸಿದ್ದೇವೆ. ಜೆಡಿಎಸ್ ಪಕ್ಷದವರು ಎಪಿಎಂಸಿ ಕಾಯಿದೆ ತಿದ್ದುಪಡಿಗೆ ವಿಧಾನಸಭೆಯಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ. ಹೀಗಾಗಿ ಅವರ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಕಾಂಗ್ರೆಸ್ ಪಕ್ಷದವರು ಮಾತ್ರ ಕಾಯಿದೆ ತಿದ್ದುಪಡಿ ವಿರೋಧಿಸಿದ್ದಾರೆ ಎಂದಿದ್ದಾರೆ.

ನಾನು ಅನುಭವಿಸಿದ್ದೇನೆ

ನಾನು ಅನುಭವಿಸಿದ್ದೇನೆ

ಎಪಿಎಂಸಿನಲ್ಲಿ ಕೆಲವು ಕಡೆ ದಲ್ಲಾಳಿಗಳ ಹಾವಳಿ ಇದೆ. ನಾನು ಕೂಡ ದಲ್ಲಾಳಿಗಳಿಂದ ಸಮಸ್ಯೆ ಅನುಭವಿಸಿದ್ದೇನೆ ಎಂದು ಸ್ಪೋಟಕ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಂಚಿಕೊಂಡಿದ್ದಾರೆ. ಹಿಂದೆ ತಾವು ಎಪಿಎಂಸಿಗಳಲ್ಲಿ ದಲ್ಲಾಳಿಗಳಿಂದ ತೊಂದರೆಗೆ ಒಳಗಾಗಿದ್ದನ್ನು ಯಡಿಯೂರಪ್ಪ ಅವರು ನೆಪಿಸಿಕೊಂಡಿದ್ದಾರೆ.

ರೈತರು ಈಗಲೂ ಎಪಿಎಂಸಿಗಳಲ್ಲಿ ಮಾರಾಟ ಮಾಡಲಿ, ಬೇಡ ಎಂದು ಹೇಳುವುದಿಲ್ಲ. ಮಧ್ಯದಲ್ಲಿ ಕಮೀಶನ್‌ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೇವೆ. ಹೀಗಾಗಿ ರೈತರಿಗೆ ಅನುಕೂಲವಾಗಲಿದೆ. ಕಾಯಿದೆ ತಿದ್ದುಪಡಿಯಿಂದ ರೈತರಿಗೆ ಉಪಯೋಗವಾಗಲಿದೆ ಎಂದು ಹೇಳಿದ್ದಾರೆ.

ಬನ್ನಿ ಅಖಾಡಕ್ಕೆ ಸಿದ್ದರಾಮಯ್ಯ

ಬನ್ನಿ ಅಖಾಡಕ್ಕೆ ಸಿದ್ದರಾಮಯ್ಯ

ಎರಡೂ ಕಾಯಿದೆಗಳನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗ್ತೀನಿ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಬೇಡ ಅಂದವರು ಯಾರು? ಸಿದ್ದರಾಮಯ್ಯ ಅವರಿಗೆ ತಗೊಂಡು ಹೋಗುವುದಕ್ಕೆ ಬೇರೆ ಏನು ವಿಷಯವಿದೆ? ಇದೇ ವಿಷಯ ತಗೊಂಡು ನಾನೂ ಜನರ ಮುಂದೆ ಹೋಗ್ತೀನಿ, ಅವರೂ ಬರಲಿ. ಬನ್ನಿ ಅಖಾಡಕ್ಕೆ ಅಂತ ನಾನೇ ಸಿದ್ದರಾಮಯ್ಯ ಅವರಿಗೆ ಅಹ್ವಾನ ನೀಡಿದ್ದೇನೆ ಎಂದು ಖಡಕ್ ಆಗಿಯೇ ಸಿಎಂ ಯಡಿಯೂರಪ್ಪ ಆಹ್ವಾನ ನೀಡಿದರು.

ಕರ್ನಾಟಕ ಬಂದ್; ಯಡಿಯೂರಪ್ಪ ಭಾಷಣದ 5 ಪ್ರಮುಖ ಅಂಶಗಳುಕರ್ನಾಟಕ ಬಂದ್; ಯಡಿಯೂರಪ್ಪ ಭಾಷಣದ 5 ಪ್ರಮುಖ ಅಂಶಗಳು

ಇನ್ನೂ ಕೆಲವೇ ದಿನಗಳಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ರಾಜ್ಯದ ವಿವಿಧೆಡೆ ಪ್ರವಾಸ ಮಾಡಿ ರೈತರನ್ನು ಭೇಟಿ ಮಾಡುತ್ತೇನೆ. ಕೃಷಿ ಕಾಯಿದೆಗಳಿಗೆ ತಿದ್ದುಪಡಿ ಮಾಡಿರುವುದರಿಂದ ಆಗಿರುವ ಅನುಕೂಲಗಳ ಬಗ್ಗೆ ರೈತರಲ್ಲಿ ಮನವರಿಕೆ ಮಾಡಿ ಕೊಡುತ್ತೇನೆ.

ನಿಮ್ಮ ಪಕ್ಷ ಕಟ್ಟಿಕೊಳ್ಳಿ

ನಿಮ್ಮ ಪಕ್ಷ ಕಟ್ಟಿಕೊಳ್ಳಿ

ರಣದೀಪ್ ಸಿಂಗ್ ಸುರ್ಜೆವಾಲ ಕಳೆದ ವಾರವಷ್ಟೆ ರಾಜ್ಯಕ್ಕೆ ಬಂದಿದ್ದಾರೆ. ಮೊದಲು ಅವರಿಗೆ ಕಾಂಗ್ರೆಸ್ ಪಕ್ಷ ಕಟ್ಟೋಕೆ ಹೇಳಿ. ಆ ಮೇಲೆ ಬಿಜೆಪಿ, ಬಿಜೆಪಿ ಸರ್ಕಾರ, ಕಾಯಿದೆಗಳ ಬಗ್ಗೆ ಮಾತನಾಡುವುದಕ್ಕೆ ಹೇಳಿ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ರೈತರಿಗೆ ಅನುಕೂಲ ಆಗುವಂತ ಕಾರ್ಯ ಮಾಡುತ್ತಿದ್ದೇವೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಹಿತಕ್ಕೆ ದಕ್ಕೆ ಆಗುವ ಕೆಲಸ ಈ ಯಡಿಯೂರಪ್ಪನಿಂದ ಆಗೋದಿಲ್ಲ ಎಂದು ರೈತರಿಗೆ ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ.

English summary
We are not closing APMCs. Instead we are full of force for APMCs. Chief Minister B.S. Yediyurappa said that the Congress party, which had insisted on amending the APMC Act, is now opposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X