• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಗೆದ್ದಿರೋದು ಲೆಕ್ಕ ಇಲ್ವಾ? ಸಚಿವ ಕೃಷ್ಣ ಭೈರೇಗೌಡ ಸಂದರ್ಶನ

By ಬಾಲರಾಜ್ ತಂತ್ರಿ
|
   ಮೋದಿ ಒಬ್ಬ ಡಿಕ್ಟೇಟರ್ : ಕೃಷಿ ಸಚಿವ ಕೃಷ್ಣ ಭೈರೇಗೌಡ ಸಂದರ್ಶನ | Oneindia Kannada

   ಹಾಲೀ ಕೃಷಿಸಚಿವ ಕೃಷ್ಣ ಭೈರೇಗೌಡ ಮೊದಲ ಬಾರಿಗೆ ಅಸೆಂಬ್ಲಿಗೆ ಸ್ಪರ್ಧಿಸಿದ್ದು 2004ರಲ್ಲಿ ಕೋಲಾರ ಜಿಲ್ಲೆ ವೇಮಗಲ್ ಕ್ಷೇತ್ರದಿಂದ. ಇದಾದ ನಂತರ 2008 ಮತ್ತು 2013ರಲ್ಲಿ ಸತತವಾಗಿ ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದಿಂದ ಗೆದ್ದು ಬಂದಿರುವ ಕೃಷ್ಣ ಭೈರೇಗೌಡ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ.

   ಅಮೆರಿಕಾದ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿರುವ ಕೃಷ್ಣ ಭೈರೇಗೌಡ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಆಪ್ತವಲಯದಲ್ಲಿ ಕಾಣಿಸಿಕೊಂಡವರು. ಕರ್ನಾಟಕ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿರುವ ಕೃಷ್ಣ, ಹಾಲೀ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಗಳು ಕೂಡಾ.

   ಸಚಿವರ ಜೊತೆಗಿನ ಮುಂದುವರಿದ ಸಂದರ್ಶನದ ಭಾಗದಲ್ಲಿ ಕೃಷ್ಣ ಭೈರೇಗೌಡ, ರಾಜ್ಯದಲ್ಲಿನ ರೈತರ ಆತ್ಮಹತ್ಯೆ, ತಾನು ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ದಿ ಜೊತೆಗೆ ಕರ್ನಾಟಕ ಚುನಾವಣೆಯ ಈ ಸಂದರ್ಭದಲ್ಲಿ ಮತದಾರರಲ್ಲಿ ಮನವಿಯನ್ನೂ ಮಾಡಿದ್ದಾರೆ. ಅವರ ಸಂದರ್ಶನದ ಮುಂದುವರಿದ ಭಾಗ,

   ಪ್ರ: ಚುನಾವಣೆಯ ವೇಳೆ ಹೇಗಿದೆ ಸರ್ ರಾಜಕೀಯ? ಬ್ಯಾಟರಾಯನಪುರ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ನಡೆಯುತ್ತಿದೆಯಾ?

   ಕೃಷ್ಣ: ಅಭಿವೃದ್ದಿ ಕೆಲಸ ಎನ್ನುವುದು ಅದು ನಿರಂತರ, ಕಾವೇರಿ ನೀರು, ಒಳಚರಂಡಿ, ಮೂಲಭೂತ ಕೆಲಸ, ಕ್ರೀಡಾಂಗಣ ನಿರ್ಮಾಣ ಮುಂತಾದ ಕೆಲಸಗಳು ಆಗಿವೆ ಮತ್ತು ಪ್ರಗತಿಯಲ್ಲಿದೆ. ಕೆರೆಗಳ ಪುನಶ್ಚೇತನ, ಯುಜಿಡಿ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ. ಬೆಂಗಳೂರು ಅಭಿವೃದ್ದಿಗೆ ಮುಖ್ಯಮಂತ್ರಿಗಳು ಸಾಕಷ್ಟು ಹಣವನ್ನು ನೀಡಿದ್ದಾರೆ, ಕೇಂದ್ರ ಸರಕಾರದ ಸಹಕಾರ ಸಿಗದೇ ಇದ್ದರೂ, ನಮ್ಮ ರಾಜ್ಯದ ಹಣದಿಂದ ಕೆಲಸಗಳು ನಡೆಯುತ್ತಿವೆ. ಮುಂದೆ ಓದಿ..

   ಕೃಷಿ ಸಚಿವ ಕೃಷ್ಣ ಭೈರೇಗೌಡ ಸಂದರ್ಶನ

   ಕೃಷಿ ಸಚಿವ ಕೃಷ್ಣ ಭೈರೇಗೌಡ ಸಂದರ್ಶನ

   ಪ್ರ: ರಾಹುಲ್ ಎಐಸಿಸಿ ಅಧ್ಯಕ್ಷರಾದ ಮೇಲೆ, ಯುವತಂಡವನ್ನು ಕಟ್ಟುತ್ತಾರೆ ಎನ್ನುವ ಮಾತು ಚಾಲ್ತಿಯಲ್ಲಿತ್ತು. ಅದರಲ್ಲಿ ರಾಜ್ಯದಿಂದ ನಿಮ್ಮ ಹೆಸರೂ ಕೇಳಿ ಬರುತ್ತಿತ್ತು, ಈ ಬಗ್ಗೆ ಏನಾದರೂ ಅಪ್ಡೇಟ್ಸ್ ಇದೆಯಾ?

   ಕೃಷ್ಣ ಭೈರೇಗೌಡ : ರಾಹುಲ್ ಗಾಂಧಿ, ಯುವಕರಿಗೆ ಹೆಚ್ಚಿನ ಜವಾಬ್ದಾರಿ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಹಿರಿಯರೂ ತುಂಬಾ ಜನರಿದ್ದಾರೆ. ಹೊಸಬರಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಡಬೇಕು ಎಂದು ಬಂದಾಗ ಸುಲಭವಾಗಿ ಯಾರೂ ಬಿಟ್ಟುಕೊಡುವುದಿಲ್ಲ. ಒಟ್ಟಾರೆಯಾಗಿ ಯುವಕರನ್ನು ಕರೆತರುವ ಪ್ರಯತ್ನವನ್ನು ರಾಹುಲ್ ಮಾಡುತ್ತಿದ್ದಾರೆ. ನಾನೂ ಕೂಡಾ ಇನ್ನೂ ಹೆಚ್ಚು ಜವಾಬ್ದಾರಿ ಸಿಗುವ ಆಶಾಭಾವನೆಯನ್ನು ಇಟ್ಟುಕೊಂಡಿದ್ದೇನೆ.

   ನಾಲ್ಕೂವರೆ ವರ್ಷಗಳಲ್ಲಿ 3,500ಕ್ಕೂ ಹೆಚ್ಚು ರೈತರ ಆತ್ಮಹತ್ಯೆ

   ನಾಲ್ಕೂವರೆ ವರ್ಷಗಳಲ್ಲಿ 3,500ಕ್ಕೂ ಹೆಚ್ಚು ರೈತರ ಆತ್ಮಹತ್ಯೆ

   ಪ್ರ: ಕಳೆದ ನಾಲ್ಕೂವರೆ ವರ್ಷಗಳಲ್ಲಿ 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಬಿಜೆಪಿ, ಜೆಡಿಎಸ್ ಆರೋಪ ಹೊರಿಸುತ್ತಿದೆಯಲ್ಲಾ?

   ಕೃಷ್ಣ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ದುರಾದೃಷ್ಣ, ಕಳೆದ ಸರಕಾರದಲ್ಲೂ ರೈತರ ಆತ್ಮಹತ್ಯೆ ಆಗಿದೆ. ಇದು ಕಳೆದ ಕೆಲವು ವರ್ಷಗಳಿಂದ ಕಮ್ಮಿಯಾಗುತ್ತಾ ಬಂದಿದೆ. 2016-17ಮಧ್ಯೆ ತೀವ್ರ ಬರಗಾಲ ಬಂದಿದ್ದರಿಂದ ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ನಾವು ಸಾಲಮನ್ನಾ ಮಾಡಿರುವುದು ಅದೇ ಕಾರಣಕ್ಕೆ. ಅನೇಕ ಪ್ರಕರಣಗಳನ್ನು ಹಿಂದಿನ ಸರಕಾರವು ಆತ್ಮಹತ್ಯೆ ಎಂದು ದಾಖಲಿಸುತ್ತಿರಲಿಲ್ಲ. ಖಾಸಗಿ ಲೇವಾದೇವಿಯಿಂದಲೂ ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ವರದಿಯಾಗಿದೆ. ನಮ್ಮ ಸರಕಾರ 1,300ಕ್ಕೂ ಹೆಚ್ಚು ಲೇವಾದೇವಿಯವರ ಮೇಲೆ ಕೇಸ್ ದಾಖಲಿಸಿದ್ದೇವೆ. ಬಲವಂತವಾಗಿ ರೈತರ ಬಳಿ ಸಾಲದ ಬಗ್ಗೆ ಒತ್ತಡ ಹೇರಬಾರದು ಎನ್ನುವ ನಿಯಮ ತಂದಿದ್ದೇವೆ. ರೈತರಲ್ಲಿ ನನ್ನ ಮನವಿ ಏನಂದರೆ, ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ.

   ಕಾಂಗ್ರೆಸ್ ಗೆದ್ದಿರುವುದು ಲೆಕ್ಕ ಇಲ್ವಾ?ಸಚಿವ ಕೃಷ್ಣ ಭೈರೇಗೌಡ ಸಂದರ್ಶನ

   ಕಾಂಗ್ರೆಸ್ ಗೆದ್ದಿರುವುದು ಲೆಕ್ಕ ಇಲ್ವಾ?ಸಚಿವ ಕೃಷ್ಣ ಭೈರೇಗೌಡ ಸಂದರ್ಶನ

   ಪ್ರ: ಮೋದಿಯ ಬಣ್ಣದ ಮಾತಿಗೆ ಮರುಳಾಗಬೇಡಿ ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಹೇಳುತ್ತಿದ್ದರೂ, ಬಿಜೆಪಿಯ ದಿಗ್ವಿಜಯ ಮುಂದುವರಿಯುತ್ತಿದೆಯಲ್ಲಾ?

   ಕೃಷ್ಣ: ನೀವು ಬರೀ ಈಶಾನ್ಯ ರಾಜ್ಯದ ಫಲಿತಾಂಶ ಮಾತ್ರ ನೋಡುತ್ತಿದ್ದೀರಾ, ಮಾಧ್ಯಮದವರು ಸರಿಯಾಗಿ ಅರ್ಥಮಾಡಿಕೊಂಡು ಮಾತನಾಡಬೇಕು. ತ್ರಿಪುರಾದಲ್ಲಿ ದಶಕಗಳಿಂದ ಕಮ್ಯೂನಿಸ್ಟ್ ಸರಕಾರ ಇರುವುದರಿಂದ ಜನ ಬದಲಾವಣೆ ಬಯಸಿರಬಹುದು. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆ, ಅದು ಎಂಪಿ, ಎಂಎಲ್ಎ, ಸ್ಥಳೀಯ ಸಂಸ್ಥೆಗಳ ಚುನಾವಣೆಯಾಗಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿಲ್ಲವಾ?

   ಮಾಧ್ಯಮದವರು ಇದನ್ನು ಯಾಕೆ ಸುದ್ದಿ ಮಾಡುತ್ತಿಲ್ಲಾ? ಹಿಂದಿ ಹೃದಯ ಭಾಗದಲ್ಲಿ ಬಿಜೆಪಿ ಡೆಪಾಸಿಟ್ ಕಳೆದುಕೊಂಡಿದೆ. ಗುಜರಾತ್ ನಲ್ಲಿ ಇನ್ನೇನು ಬಿಜೆಪಿ ಹೋಯಿತು ಎನ್ನುವಷ್ಟರಲ್ಲಿ ಮತ್ತೆ ಅವರು ಬಚಾವ್ ಆದರು. ಪಂಜಾಬ್ ನಲ್ಲಿ ಉತ್ತಮ ಸರಕಾರ ನಾವು ನೀಡುತ್ತಿದ್ದೇವೆ. ರಾಜಸ್ಥಾನದಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ, ಮಧ್ಯಪ್ರದೇಶದಲ್ಲೂ ನಮ್ಮ ಸರಕಾರ ಬರುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ.

   ನೂರು ದಿನದಲ್ಲಿ ಬದಲಾವಣೆ ತರುತ್ತೇವೆ ಎನ್ನುತ್ತಿದ್ದ ಪ್ರಧಾನಿಗಳು ನಾಲ್ಕು ವರ್ಷವಾದರೂ ಏನೂ ಮಾಡಿಲ್ಲ. ಉದ್ಯೋಗ ಸೃಷ್ಟಿಯಾಗಿಲ್ಲ, ಕಾಂಗ್ರೆಸ್ ಸರಕಾರ ಇದ್ದಾಗಲೇ ಬೆಟರ್ ಇತ್ತು. ಕಪ್ಪುಹಣ ವಾಪಸ್ ಬಂದಿಲ್ಲ, ಇಲ್ಲಿ ಮೋಸ ಮಾಡಿದವರು ದೇಶ ಬಿಟ್ಟು ಹೋಗುತ್ತಿದ್ದಾರೆ. ಇದೇ ದೇಶದಲ್ಲಿ ಇದ್ದ ಕಾರ್ತಿಕ್ ಚಿದಂಬರಂ ಮೇಲೆ ಇವರ ಪರಾಕ್ರಮ ತೋರಿಸುತ್ತಿದ್ದಾರೆ.

   ಕೊನೆಯದಾಗಿ, ಕರ್ನಾಟಕದ ಮತದಾರರಿಗೆ ನಿಮ್ಮ ಮನವಿ ಏನು?

   ಕೊನೆಯದಾಗಿ, ಕರ್ನಾಟಕದ ಮತದಾರರಿಗೆ ನಿಮ್ಮ ಮನವಿ ಏನು?

   ಪ್ರ: ಕೊನೆಯದಾಗಿ, ಕರ್ನಾಟಕದ ಮತದಾರರಿಗೆ ನಿಮ್ಮ ಮನವಿ ಏನು?

   ಕೃಷ್ಣ: ಕಳೆದ ಲೋಕಸಭಾ ಚುನಾವಣೆಯಲ್ಲಿ ಜನರನ್ನು ನಂಬಿಸಿ ಮೋದಿ ಅಧಿಕಾರಕ್ಕೆ ಬಂದರು, ಆದರೆ ವಿರೋಧ ಪಕ್ಷಗಳನ್ನು ಟೀಕೆ ಮಾಡುತ್ತಿರುವುದೇ ಅವರ ಸಾಧನೆ, ಎಲ್ಲಾ ಬೆಲೆಗಳು ಏರುತ್ತಿವೆ, ವಾಸ್ತವತೆಯನ್ನು ಹೇಳಿಕೊಳ್ಳಲು ಅವರಲ್ಲಿ ಏನೂ ಇಲ್ಲ.

   ನಮ್ಮ ಸರಕಾರದಲ್ಲಿ ಭ್ರಷ್ಟಾಚಾರ ಇದೆ ಎನ್ನುವವರು, ಯಡಿಯೂರಪ್ಪನವರನ್ನು ಸಿಎಂ ಮಾಡೋಕೆ ಹೊರಟಿದ್ದಾರೆ. ಅವರೆಲ್ಲಾ ಜೈಲಿಗೆ ಹೋಗಿ ಬಂದವರು. ಇವರ ದೊಡ್ಡ ಡೋಂಗೀತನ ಇನ್ನೊಂದಿಲ್ಲ, ಯಾವ ನೇರ ಮುಖದಲ್ಲಿ ಇದನ್ನು ಮೋದಿ ಹೇಳುತ್ತಿದ್ದಾರೋ ಗೊತ್ತಾಗುತ್ತಿಲ್ಲ.

   ಐದು ವರ್ಷದಲ್ಲಿ ಸುಭದ್ರ ಸರಕಾರವನ್ನು ನಾವು ನೀಡಿದ್ದೇವೆ, ಯಾವುದೇ ಹಗರಣ ನಮ್ಮಿಂದಾಗಿಲ್ಲ, ಕರ್ನಾಟಕದ ಮರ್ಯಾದೆ ಉಳಿಸುವ ಕೆಲಸವನ್ನು ನಾವು ಮಾಡಿಲ್ಲ. ಆರ್ಥಿಕತೆ, ಬಂಡವಾಳ, ಉದ್ಯೋಗದಲ್ಲಿ ನಾವು ಮೊದಲನೇ ಸ್ಥಾನದಲ್ಲಿದ್ದೇವೆ. ನಾವು ಸಾಗುತ್ತಿದ್ದೇವೆ. ಜನ ಇದನ್ನು ತುಲನೆ ಮಾಡಲಿ. ಇದನ್ನೆಲ್ಲಾ ನೆನಪಿಸಿಕೊಂಡು, ವೋಟ್ ಮಾಡಲಿ ಎನ್ನುವುದು ನನ್ನ ಮನವಿ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   We also won by election in BJP rules states, Agriculture Minister Krishna Byre Gowda interview - Part 2. In an exclusive interview with Oneindia, Minister requested voter to given power to Congress again.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more