ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪದ ಕೆಳಗೆ ಕತ್ತಲೆ: ಚಿಕ್ಕಮಗಳೂರಲ್ಲಿ ಜಲ ಅಭಾವ

By Mahesh
|
Google Oneindia Kannada News

ಚಿಕ್ಕಮಗಳೂರು, ಜು.21: 'ದೀಪದ ಕೆಳಗೆ ಕತ್ತಲೆ' ಎಂಬ ಮಾತಿನಂತೆ ಚಿಕ್ಕಮಗಳೂರು ಜಿಲ್ಲೆಯ ಅರೆ ಮಲೆನಾಡು ಹಾಗೂ ಬಯಲು ಸೀಮೆ ಪ್ರಾಂತ್ಯಗಳಲ್ಲಿ ಕುಡಿಯುವ ನೀರಿನ ಅಭಾವ, ಶೌಚಾಲಯ ಕೊರತೆ ಸಮಸ್ಯೆ ಮತ್ತೆ ಭುಗಿಲೆದ್ದಿದೆ. ಆದರೆ, ಶಾಶ್ವತ ಪರಿಹಾರ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕಾ ಮೆರಿ ಫ್ರಾನ್ಸಿಸ್ ಹೇಳಿದ್ದಾರೆ.

ಜಿಲ್ಲೆಯ ಒಂದೆಡೆ ಪುನರ್ವಸು ಮಳೆಗೆ ನದಿಗಳು ತುಂಬಿ ತುಳುಕುತ್ತಿವೆ. ಜಿಲ್ಲೆಯಲ್ಲಿ ಸರಿ ಸುಮಾರು ಐದಾರು ನದಿಗಳು ಹುಟ್ಟಿದರೂ ಪಕ್ಕದ ಜಿಲ್ಲೆಯ ರೈತರ ಮನೆ ಬೆಳಗುತ್ತಿವೆ ಹೊರತೂ ಕಡೂರು, ತರೀಕೆರೆ ತಾಲೂಕಿಗೆ ಕೊಂಚಿತ್ತೂ ಪ್ರಯೋಜನವಾಗುತ್ತಿಲ್ಲ.

ಶಾಶ್ವತ ಪರಿಹಾರ ಸಾಧ್ಯ: ಜಿಲ್ಲೆಯಲ್ಲಿ ಅಪೂರ್ಣಗೊಂಡಿರುವ ಕುಡಿಯುವ ನೀರಿನ ಯೋಜನೆಗಳ ಸ್ಥಿತಿ ಗತಿ ಅಧ್ಯಯನ ಮಾಡಿ ಪೂರ್ಣ ಗೊಳಿಸಲಾಗುವುದು. ಬಯಲು ಶೌಚಕ್ಕೆ ಸಂಪೂರ್ಣವಾಗಿ ಪೂರ್ಣ ವಿರಾಮ ಹಾಕಲಾಗುತ್ತದೆ. ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಲಾಗುತ್ತದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಆರ್ಟ್ ಆಫ್ ಲಿವಿಂಗ್ ನೆರವು: ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿರುವ ಸ್ವಸಹಾಯ ಸಂಘಗಳು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ನೆಹರು ಯುವಕ ಕೇಂದ್ರ ನೆರವು ಬಳಸಿಕೊಂಡು ಶೌಚಾಲಯ ನಿರ್ಮಿಸಲಾಗುವುದು ಎಂದು ಹೇಳಿದರು.

ಸರ್ಕಾರ ಈ ವರ್ಷ ಒಟ್ಟು 27 ಸಾವಿರ ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ನೀಡಿದೆ. ಜತೆಗೆ 70ಕ್ಕೂ ಅಧಿಕ ಶಾಲೆ ಮತ್ತು ಅಂಗನವಾಡಿಗಳಿಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕಿದೆ. ನಿರ್ಮಲ್ ಭಾರತ್ ಯೋಜನೆಯಡಿ ನಿರ್ಮಾಣಕ್ಕೆ ನೆರವಾಗುವ ಕಾರ್ಯಕರ್ತರಿಗೆ 150 ರು ಗೌರವ ಧನ ಸಿಗಲಿದೆ ಎಂದರು.

ಗ್ರಾಮ ಪುರಸ್ಕಾರಕ್ಕಾಗಿ ಅರ್ಜಿ : ಜಿಲ್ಲೆಯಲ್ಲಿ 65 ಗ್ರಾಮ ಪಂಚಾಯಿತಿಗಳು ನಿರ್ಮಲ ಗ್ರಾಮಪಂಚಾಯಿತಿಗಳೆಂಬ ಪುರಸ್ಕಾರಕ್ಕೆ ಒಳಗಾಗಿದೆ. ಈ ಹಣಕಾಸು ವರ್ಷದಲ್ಲಿ 18 ಹೊಸ ಗ್ರಾಮ ಪಂಚಾಯಿತಿಗಳು ಈ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಿವೆ ಎಂದರು.

ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ವಿಶೇಷವಾಗಿ ಬಯಲುಸೀಮೆ ಭಾಗದಲ್ಲಿ ಬಿತ್ತನೆ ಕುಂಠಿತಗೊಂಡಿದೆ. ಈ ವರ್ಷ ಈ ದಿನದವರೆಗೂ ಶೇ 25.7 ರಷ್ಟು ಮಾತ್ರ ಬಿತ್ತನೆ ಪೂರ್ಣಗೊಂಡಿದ್ದರೆ, ಕಳೆದ ವರ್ಷ ಈ ಪ್ರಮಾಣ ಶೇ 36ರಷ್ಟಿತ್ತು.

English summary
Water shortage hinders total sanitation project in Chikmagalur district. Dharmasthala Temple trust, Art of Living and many organisation help is sought to achieve 100% total sanitation and get the Nirmal Puraskar tag said Zilla Panchayat CEO Priyanka Mary Francis
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X