ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಹರಿಯಲ್ಲ, ನೀರಲ್ಲಿ ಬಿದ್ದರೆ ನೆನೆಯಲ್ಲ!

|
Google Oneindia Kannada News

ಬೆಂಗಳೂರು, ನವೆಂಬರ್ 23: ಇನ್ನುಮುಂದೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಸಂಪೂರ್ಣ ಸುರಕ್ಷಿತ, ಹಾಗಾದರೆ ನೀರಿನಲ್ಲಿ ಬಿದ್ದರೆ ಅಕ್ಷರಗಳೆಲ್ಲವೂ ಅಳಿಸಿ ಹೋಗುವುದಿಲ್ಲವೇ, ಅಂಕಪಟ್ಟಿ ಹರಿಯುವುದಿಲ್ಲವೇ ಎಂದು ನೀವು ಪ್ರಶ್ನಿಸಬಹುದು.

ಹೌದು ಇನ್ನಮುಂದೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಷ್ಟು ಸುರಕ್ಷಿತವಾಗಿರುತ್ತದೆ, ನೀರಿನಲ್ಲಿ ಬಿದ್ದರೆ ನೆನೆಯುವುದೂ ಇಲ್ಲ, ಅಕ್ಷರಗಳೂ ಅಳಿಸುವುದಿಲ್ಲ, ಹರಿಯುವುದೂ ಇಲ್ಲ ವಿದ್ಯಾರ್ಥಿಗಳಿಗೆ ಮತ್ತಷ್ಟು ಸುರಕ್ಷಿತವಾದ ಅಂಕಪಟ್ಟಿಯನ್ನು ಒದಗಿಸಲು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯೋನ್ಮುಖವಾಗಿದೆ.

ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

2019ರ ಮಾರ್ಚ್, ಏಪ್ರಿಲ್‌ನಲ್ಲಿ ಬರೆಯುವ ಎಸ್‌ಎಸ್‌ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಂತಹ ಅಂಕಪಟ್ಟಿಗಳು ಲಭ್ಯವಾಗಲಿದೆ.

Water proof and unbreakable marks cards to SSLC students

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಈಗ ಲ್ಯಾಮಿನೇಷನ್ ರೂಪದಲ್ಲಿ ಅಂಕಪಟ್ಟಿಗಳನ್ನು ವಿತರಿಸುತ್ತಿದೆ. ಆದರೆ ಲ್ಯಾಮಿನೇಷನ್ ಮಾಡಿದ ಅಂಕಪಟ್ಟಿಗಳನ್ನು ಬಹಳ ದಿನ ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಈ ಆಲೋಚನೆ ಮಾಡಿದ್ದಾರೆ.

SSLC: ಉತ್ತಮ ಫಲಿತಾಂಶ ಪಡೆಯದ ಶಾಲೆಗಳ ಅನುದಾನಕ್ಕೆ ಕತ್ತರಿSSLC: ಉತ್ತಮ ಫಲಿತಾಂಶ ಪಡೆಯದ ಶಾಲೆಗಳ ಅನುದಾನಕ್ಕೆ ಕತ್ತರಿ

ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಪ್ರತಿಯೊಬ್ಬರಿಗೂ ಪ್ರಮುಖವಾಗಿದೆ, ಯಾವುದೇ ಕೆಲಸಕ್ಕೆ ಸೇರಬೇಕಿದ್ದರೂ ಇನ್ಯಾವುದೇ ಕೋರ್ಸ್‌ಗಳನ್ನು ಆರಂಭಿಸಬೇಕಿದ್ದರೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನೇ ಕೇಳುತ್ತಾರೆ. ಹಾಗಾಗಿ ಅದು ಹರಿದು ಹೋಗದಂತೆ , ನೀರಿಗೆ ಬಿದ್ದರೂ ನೆನೆಯದಂತೆ ಸಿದ್ಧಪಡಿಸಲಾಗುತ್ತಿದೆ.

English summary
SSLC board has decided to provide more safety marks card for students which will be water proof and unbreakable fiber coated from this academic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X