• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಜಿನಿಯರಿಂಗ್‌ ವಿದ್ಯಾರ್ಥಿ‌‌ಗಳಿಗೆ ಇಂಟರ್ನ್‌ಶಿಪ್‌ ಕಡ್ಡಾಯ

By Ashwath
|

ಬೆಂಗಳೂರು,ಆ.5: ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ‌‌ಆರು ತಿಂಗಳ ಕಾಲ ಇಂಟರ್ನ್‌ಶಿಪ್‌ ಮಾಡುವುದನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕಡ್ಡಾಯ ಮಾಡಿದೆ.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ನ 3ನೇ ವರ್ಷದಲ್ಲಿ ಆರು ತಿಂಗಳ ಕಾಲ ಇಂಟರ್ನ್‌ಶಿಪ್‌ ಮಾಡುವುದನ್ನು ಕಡ್ಡಾಯಗೊಳಿಸುವ ತೀರ್ಮಾನವನ್ನು ವಿಟಿಯು ತನ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಟಿಯು ಕುಲಪತಿ ಡಾ| ಎಚ್‌.ಮಹೇಶಪ್ಪ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವ ದೃಷ್ಟಿಯಿಂದ ಈ ತೀರ್ಮಾ‌ನವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು:

*ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಕೈಗಾರಿಕಾ ಆಧಾರಿತ ಪಠ್ಯಕ್ರಮ ಜಾರಿ.

*ವಿವಿ ನಿಯಮಗಳನ್ನು ಪಾಲಿಸಲು ವಿಫಲವಾದ, ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳದ ಆರು ಕಾಲೇಜುಗಳ ಸಂಯೋಜನೆ 2014-15ನೇ ಸಾಲಿನಿಂದ ರದ್ದು.

*ಬೆಂಗಳೂರಿನ ರೇವಾ ಇನ್‌ಸ್ಟಿಟ್ಯೂಟ್‌ನಲ್ಲಿ ನಿಯಮಗಳ ಉಲ್ಲಂಘನೆ ಬಗ್ಗೆ ಅಖಿಲ ಭಾರತ ತಾಂತ್ರಿಕ ಮಂಡಳಿ (ಎಐಸಿಟಿಇ) ಪತ್ರ ಬರೆದಿರುವುದರಿಂದ ತನಿಖೆಗೆ ಸಮಿತಿ ರಚನೆ.

ರದ್ದಾಗಿರುವ ಆರು ಎಂಜಿನಿಯರಿಂಗ್‌ ಕಾಲೇಜುಗಳು:

*ನಾಡ್ಗಿರ್‌ ಇನ್‌ಸ್ಟಿಟ್ಯೂಟ್‌ ಎಂಜಿನಿಯರಿಂಗ್‌ ಆಂಡ್‌ ಟೆಕ್ನಾಲಜಿ, ಬೆಂಗಳೂರು

*ಜಿಎಸ್‌ಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬೆಂಗಳೂರು

*ಬಸವ ಅಕಾಡೆಮಿ ಆಫ್‌ ಎಂಜಿನಿಯರಿಂಗ್‌, ಬೆಂಗಳೂರು

*ಶ್ರೀ ಬಸವೇಶ್ವರ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ತಿಪಟೂರು

*ಶ್ರೀ ಕೃಷ್ಣ ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ ಆಂಡ್‌ ಮ್ಯಾನೇಜ್‌ಮೆಂಟ್‌, ಬೆಂಗಳೂರು

*ಶ್ರೀ ಬೇಲಿಮಠ ಮಹಾ ಸಂಸ್ಥಾನ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬೆಂಗಳೂರು.

ಕೈಗಾರಿಕೆ ಸುರಕ್ಷತೆ ನಿರ್ವಹಣೆ ಸ್ನಾತಕೋತ್ತರ ಡಿಪ್ಲೊಮಾ: ಕೈಗಾರಿಕೆ ಸುರಕ್ಷತೆ ನಿರ್ವಹಣೆ ವಿಷಯದಲ್ಲಿ ಹೊಸ ಡಿಪ್ಲೊಮಾ ಕೋರ್ಸ್‌ ಆರಂಭಿಸುವ ಸಂಬಂಧ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್‌ ಸೇಫ್ಟಿ ಮ್ಯಾನೇಜ್‌ಮೆಂಟ್‌ (ಐಐಐಎಸ್‌ಎಂ) ಒಪ್ಪಂದ ಮಾಡಿಕೊಂಡಿವೆ.

ಈ ಡಿಪ್ಲೊಮಾ ಕೋರ್ಸ್‌ನ ವಿಶೇಷತೆ:

*ಕೈಗಾರಿಕಾ ಸುರಕ್ಷತೆ ಕುರಿತ ಒಂದು ವರ್ಷ ಅವಧಿಯ ಪಿ.ಜಿ ಕೋರ್ಸ್‌ ಇದಾಗಿದ್ದು, ಪ್ರಥಮ ವರ್ಷ 40 ವಿದ್ಯಾರ್ಥಿ‌ಗಳನ್ನು ಈ ಕೋರ್ಸ್‌ಗಾಗಿ ಆಯ್ಕೆ ಮಾಡಲಾಗುತ್ತದೆ.

*ಎಂಜಿನಿಯರಿಂಗ್‌ ಮತ್ತು ಎಂಟೆಕ್‌ ಆದ ವಿದ್ಯಾರ್ಥಿ‌ಗಳು ಈ ಕೋರ್ಸ್‌ಗೆ ಪ್ರವೇಶ ಪಡೆಯಬಹುದಾಗಿದೆ.

*ಐಐಐಎಸ್‌ಎಂ ಸಂಸ್ಥೆ ವಿದ್ಯಾರ್ಥಿ‌ಗಳಿಗೆ ಪಾಠ ಮಾಡಲಿದ್ದು ವಿಟಿಯು ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಲಿದೆ.

*ಸ್ನಾತಕೋತ್ತರ ಡಿಪ್ಲೊಮಾಕ್ಕೆ ವಿಟಿಯು 40 ಸಾವಿರ ರೂ. ಶುಲ್ಕವನ್ನು ವಿಧಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The VTU had also decided to introduce industry-driven curriculum for its undergraduate and postgraduate programmes, and compulsory internship for all PG students from the academic year 2014–15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more