ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಟಿಯು ಪರಿಚಯಿಸಲಿರುವ 'ಓಪನ್ ಬುಕ್ ಪರೀಕ್ಷೆ' ಕುರಿತು ಮಾಹಿತಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 'ತೆರೆದ ಪುಸ್ತಕ ಪರೀಕ್ಷೆ'ಯನ್ನು ಪರಿಚಯಿಸಲು ಹೊರಟಿದೆ.

ರಾಜ್ಯದಲ್ಲಿ ತೆರೆದ ಪುಸ್ತಕ ಪರೀಕ್ಷೆ ಹಿಂದಿನಿಂದಲೂ ಚರ್ಚೆಯಲ್ಲಿರುವ ಸುದ್ದಿ.‌ ಪ್ರಸಕ್ತ ವರ್ಷದಿಂದ ಕೆಲವು ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ತೆರೆದ ಪುಸ್ತಕ ಪರೀಕ್ಷೆಗಳನ್ನು ಪರಿಚಯಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಯೋಜನೆ ರೂಪಿಸಿದೆ.

ಪ್ರಸ್ತುತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಮತ್ತು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು ತೆರೆದ ಪುಸ್ತಕ ಪರೀಕ್ಷಾ ವ್ಯವಸ್ಥೆಯನ್ನು ಅನುಸರಿಸುತ್ತಿವೆ. ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಸರ್ಕಾರಿ ವಿಶ್ವವಿದ್ಯಾಲಯವು ಇದನ್ನು ಪರಿಚಯಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

VTU To Introduce Open Book Exams For Engineering Courses

ವಿನ್ಯಾಸ ಆಧಾರಿತ ವಿಷಯಗಳನ್ನು ಹೊಂದಿರುವ ಕೋರ್ಸ್ ಗಳಲ್ಲಿ ಅದರಲ್ಲೂ ಪ್ರಮುಖವಾಗಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಆರ್ಕಿಟೆಕ್ಚರ್‌ನಂತಹ ಸ್ಟ್ರೀಮ್‌ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ವಿಶ್ವವಿದ್ಯಾಲಯದ ಅಧಿಕಾರಿಗಳ ಪ್ರಕಾರ, ಅಧ್ಯಯನ ಮಂಡಳಿಯು ತನ್ನ ಶಿಫಾರಸುಗಳನ್ನು ಸಲ್ಲಿಸಿದ ನಂತರ ಅಧಿಕೃತ ಮಾಹಿತಿಯನ್ನು ಪ್ರಕಟಿಸಲಿದೆ.

ಸರ್‌.ಎಂ.ವಿಶ್ವೇಶ್ವರಯ್ಯ ಜನ್ಮದಿನ: ಇಲ್ಲಿವೆ ಉಲ್ಲೇಖಗಳು, ಸಂದೇಶಗಳುಸರ್‌.ಎಂ.ವಿಶ್ವೇಶ್ವರಯ್ಯ ಜನ್ಮದಿನ: ಇಲ್ಲಿವೆ ಉಲ್ಲೇಖಗಳು, ಸಂದೇಶಗಳು

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಯ್ದ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ 'ತೆರೆದ ಪುಸ್ತಕ' ಪರೀಕ್ಷೆಗಳನ್ನು ಪರಿಚಯಿಸಲಿದೆ. ವಿನ್ಯಾಸ - ಆಧಾರಿತ ವಿಷಯಗಳನ್ನು ಹೊಂದಿರುವ ಕೋರ್ಸ್‌ಗಳಿಗೆ ಹಾಗೂ ಹೆಚ್ಚಾಗಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಆರ್ಕಿಟೆಕ್ಚರ್‌ನಂತಹ ವಿಷಯಕ್ಕೆ ಈ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತೆ.‌ ಸದ್ಯ, ಅಧ್ಯಯನ ಮಂಡಳಿಯು ತನ್ನ ಶಿಫಾರಸುಗಳನ್ನು ಸಲ್ಲಿಸಿದ ನಂತರ ಅಧಿಕೃತ ಆದೇಶ ನೀಡಲಿದೆ.

ಏನಿದು ಓಪನ್‌ ಬುಕ್ ಪರೀಕ್ಷೆ ಎಂದರೇನು?
ಓಪನ್ ಬುಕ್ ಪರೀಕ್ಷೆ ಎಂದರೆ ಇದರಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿಯ ಟಿಪ್ಪಣಿಗಳು, ಪ್ರೊಫೆಸರ್ ಪೂರೈಸಿರುವ ವಸ್ತುವಿಷಯ, ಪಠ್ಯಪುಸ್ತಕಗಳು ಮತ್ತು ಸಂಬಂಧಿತ ಸಂಸ್ಥೆ ಪೂರೈಸಿರುವ ಯಾವುದೇ ಇತರ ಅಧಿಕೃತ ವಸ್ತು ವಿಷಯಗಳನ್ನು ಪರಾಮರ್ಶಿಸಿ ಬರೆಯಲು ಅವಕಾಶ ಮಾಡಿಕೊಡಲಾಗುವ ಪರೀಕ್ಷೆಯಾಗಿದೆ. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮತ್ತು ಪರೀಕ್ಷೆಗೆ ಉತ್ತರಿಸಲು ವಸ್ತು ವಿಷಯವನ್ನು ಪೂರೈಸಲಾಗುತ್ತದೆ. ಇದು ಮನೆಯಲ್ಲಿಯೇ ಪರೀಕ್ಷೆ ಬರೆಯುವಂತಿರುತ್ತೆ.

ವಿನ್ಯಾಸ ಆಧಾರಿತ ವಿಷಯಗಳನ್ನು ಹೊಂದಿರುವ ಕೋರ್ಸ್ ಗಳಲ್ಲಿ ಅದರಲ್ಲೂ ಪ್ರಮುಖವಾಗಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಆರ್ಕಿಟೆಕ್ಚರ್‌ನಂತಹ ಸ್ಟ್ರೀಮ್‌ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ವಿಶ್ವವಿದ್ಯಾಲಯದ ಅಧಿಕಾರಿಗಳ ಪ್ರಕಾರ, ಅಧ್ಯಯನ ಮಂಡಳಿಯು ತನ್ನ ಶಿಫಾರಸುಗಳನ್ನು ಸಲ್ಲಿಸಿದ ನಂತರ ಅಧಿಕೃತ ಮಾಹಿತಿಯನ್ನು ಪ್ರಕಟಿಸಲಿದೆ.

ವಿಟಿಯು ಉಪಕುಲಪತಿ ಪ್ರೊ ಕರಿಸಿದ್ದಪ್ಪ, "ತೆರೆದ ಪುಸ್ತಕ ಪರೀಕ್ಷೆಗಳನ್ನು ಪರಿಚಯಿಸಬಹುದಾದ ಸ್ಟ್ರೀಮ್‌ಗಳಲ್ಲಿ ಶಿಫಾರಸು ಮಾಡಲು ನಾವು ಅಧ್ಯಯನ ಮಂಡಳಿಗೆ ನಿರ್ದೇಶನ ನೀಡಿದ್ದೇವೆ. ಓಪನ್-ಬುಕ್ ಪರೀಕ್ಷೆಗಳು ರೂಟ್ ಲರ್ನಿಂಗ್ ಅನ್ನು ತೊಡೆದುಹಾಕುತ್ತವೆ ಮತ್ತು ಶಿಕ್ಷಣದ ಉತ್ತಮ ವಿಕಾಸಕ್ಕೆ ಕೊಡುಗೆ ನೀಡುತ್ತವೆ" ಎಂದು ಅವರು ಹೇಳಿದರು.

ವಿಭಿನ್ನ ಅಧ್ಯಯನ ಕೈಗೊಳ್ಳಲು ಈ ಓಪನ್ ಬುಕ್ ಪರೀಕ್ಷೆ ಅಗತ್ಯ. ಇದು ನಮ್ಮ ಸಾಂಪ್ರದಾಯಿಕ ಬೋಧನಾ ರೀತಿಗಿಂತ ವಿಭಿನ್ನವಾಗಿ ಇರಲಿದೆ. ಇದರಲ್ಲಿ ಪ್ರತ್ಯೇಕವಾದ ಮತ್ತು ನಿರ್ದಿಷ್ಟ ಮೌಲ್ಯೀಕರಣದ ಅಳತೆ ಇರುತ್ತದೆ. ಬಹುತೇಕ ವಿದ್ಯಾಸಂಸ್ಥೆಗಳಲ್ಲಿ ಪ್ರೊಫೆಸರ್​ಗಳು ತರಗತಿಯಲ್ಲಿ ಬೋಧಿಸಲು ಹಲವಾರು ಕ್ರಮಗಳೊಂದಿಗೆ ಸಜ್ಜಾಗಿರುತ್ತಾರೆ. ಅವುಗಳಲ್ಲಿ ಪ್ರಕರಣದ ಅಧ್ಯಯನಗಳು, ವಿಡಿಯೋಗಳು, ಪಠ್ಯಕ್ರಮ ವಸ್ತುವಿಷಯ ಮುಂತಾದವುಗಳು ಸೇರಿರುತ್ತವೆ.

ಶ್ವವಿದ್ಯಾನಿಲಯದ ಬೋರ್ಡ್ ಆಫ್ ಸ್ಟಡೀಸ್‌ನ ಸದಸ್ಯರು ಓಪನ್-ಬುಕ್ ಪರೀಕ್ಷೆಗಳನ್ನು ನಡೆಸಬಹುದಾದ ಸ್ಟ್ರೀಮ್‌ಗಳು ಮತ್ತು ವಿಷಯಗಳನ್ನು ಅಂತಿಮಗೊಳಿಸುತ್ತಿದ್ದಾರೆ ಎಂದು ಹೇಳಿದರು. "ನಾವು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದರೂ, ಬ್ಲೂಮ್‌ನ ವರ್ಗೀಕರಣದ ಎಲ್ಲಾ ಆರು ಹಂತಗಳನ್ನು ಪರಿಗಣಿಸಿ ಅವುಗಳನ್ನು ಮೌಲ್ಯಮಾಪನ ಮಾಡಲಾಗಿದೆಯೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಇವುಗಳು ನೆನಪಿಡುವ, ಅರ್ಥಮಾಡಿಕೊಳ್ಳುವ, ಅನ್ವಯಿಸುವ, ವಿಶ್ಲೇಷಿಸುವ, ಮೌಲ್ಯಮಾಪನ ಮಾಡುವ ಮತ್ತು ರಚಿಸುವ ಸಾಮರ್ಥ್ಯವನ್ನು ಒಳಗೊಂಡಿವೆ ಎಂದು ಅಧಿಕಾರಿ ಹೇಳಿದರು.

ಈ ವ್ಯವಸ್ಥೆಗಾಗಿ ಪ್ರತ್ಯೇಕ ಕೌಶಲ್ಯಗಳನ್ನು ಹೊಂದುವ ಅಗತ್ಯ ಇರುವ ಕ್ರಮಗಳ ಅನುಷ್ಠಾನದ ಜೊತೆಗೆ ಭಾರತದಲ್ಲಿ ಈ ರೀತಿಯ ತೆರೆದ ಪುಸ್ತಕದ ಪರೀಕ್ಷೆಗಳನ್ನು ಅನುಷ್ಠಾನಗೊಳಿಸಬಹುದಾಗಿದೆ. ಇದನ್ನು ಅನುಷ್ಠಾನಗೊಳಿಸಿದರೆ ಅದು ಯಾವ ಕೋರ್ಸ್‍ಗೆ ಸೂಕ್ತವಾಗಿರುತ್ತದೆ.

ಓಪನ್ ಬುಕ್ ಅಥವಾ ತೆರೆದ ಪುಸ್ತಕದ ಪರೀಕ್ಷೆಯನ್ನು ಯಾವುದೇ ಕಾರ್ಯಕ್ರಮಗಳಲ್ಲಿ ಅನುಷ್ಠಾನಗೊಳಿಸಬಹುದು. ಇದರಲ್ಲಿ ಪರೀಕ್ಷೆಗೆ ಪ್ರತ್ಯೇಕ ರೀತಿಯ ಪ್ರಶ್ನೆಪತ್ರಿಕೆ ಹಾಗೂ ವಿದ್ಯಾರ್ಥಿಗಳ ವಿಶ್ಲೇಷಣಾ ಕೌಶಲ್ಯದ ಅಗತ್ಯವಿರುತ್ತದೆ. ಇಂತಹ ಪರೀಕ್ಷೆಗೆ ಸಿದ್ಧವಾಗಲು ಸೆಮಿಸ್ಟರ್ ಅವಧಿಯಲ್ಲಿಯೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದಾಗಿದೆ. ಯುಎಸ್‍ಎನಲ್ಲಿ ಅನೇಕ ವಿದ್ಯಾಸಂಸ್ಥೆಗಳು ಈ ರೀತಿಯ ಪುಸ್ತಕ ತೆರೆದು ನೋಡಿ ಬರೆಯುವ ಪರೀಕ್ಷೆಗಳನ್ನು ಹೊಂದಿವೆ.

ಭಾರತದಲ್ಲಿ ದೆಹಲಿ ವಿಶ್ವವಿದ್ಯಾಲಯ, ಸಾವಿತ್ರಿ ಬಾ ಫುಲೆ ಪುಣೆ ವಿಶ್ವವಿದ್ಯಾಲಯ, ರಾಯಪುರದ ಕಳಿಂಗ ವಿಶ್ವವಿದ್ಯಾಲಯ, ಪಂಜಾಬ್‌, ಚಂಡೀಗಢ ವಿಶ್ವವಿದ್ಯಾಲಯ ಮುಂತಾದವುಗಳು ಈ ರೀತಿಯ ಪುಸ್ತಕ ತೆರೆದು ನೋಡಿ ಬರೆಯುವ ಪರೀಕ್ಷಾ ವ್ಯವಸ್ಥೆಯನ್ನು ಹೊಂದಿವೆ.

Recommended Video

ಇಂಜುರಿಯಿಂದ ಬಳಲ್ಲುತಿರುವ CSK ಆಟಗಾರ | Oneindia Kannada

English summary
Students of select undergraduate engineering courses in Karnataka will attend open-book examinations beginning this academic year (2021-22), the Visvesvaraya Technological University (VTU) has decided.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X