ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಟಿಯುನಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಪಾಠ!

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 16 : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಯ ಕೋರ್ಸ್‌ ಆರಂಭಿಸಲಿದೆ. 2018-19ನೇ ಸಾಲಿನಿಂದಲೇ ಈ ಕೋರ್ಸ್ ಆರಂಭವಾಗಲಿದೆ.

ವಿಟಿಯು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನದಂತೆ 'ಕನ್ನಡ ಮನಸು' ಮತ್ತು 'ಕನ್ನಡ ಕಲಿ' ಎಂಬ ಎರಡು ಕೋರ್ಸ್‌ಗಳನ್ನು ಆರಂಭಿಸಲಿದೆ. 3 ಮತ್ತು 4ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಕಡ್ಡಾಯವಾಗಿದೆ.

ಬೆಳಗಾವಿ ವಿಟಿಯು ನೇಮಕದಲ್ಲಿ ಅಕ್ರಮ: 64 ಬೋಧಕರಿಗೆ ನೋಟಿಸ್‌ಬೆಳಗಾವಿ ವಿಟಿಯು ನೇಮಕದಲ್ಲಿ ಅಕ್ರಮ: 64 ಬೋಧಕರಿಗೆ ನೋಟಿಸ್‌

10ನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗಾಗಿ 'ಕನ್ನಡ ಮನಸು' ಕೋರ್ಸ್‌, ಬೇರೆ ರಾಜ್ಯದಿಂದ ಆಗಮಿಸಿರುವ ವಿದ್ಯಾರ್ಥಿಗಳಿಗಾಗಿ 'ಕನ್ನಡ ಕಲಿ' ಕೋರ್ಸ್‌ ಆರಂಭಿಸಲಾಗುತ್ತದೆ. ವಾರದಲ್ಲಿ ಎರಡು ಗಂಟೆಗಳ ಕಾಲ ಈ ಕೋರ್ಸ್‌ನ ತರಗತಿಗಳು ನಡೆಯಲಿವೆ.

VTU to introduce Kannada learning courses

ವಿಟಿಯು ರಿಜಿಸ್ಟಾರ್ ಜಗನ್ನಾಥ್ ರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನದಂತೆ ಕನ್ನಡ ಕಲಿಕಾ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಈ ಕೋರ್ಸ್‌ಗಳಿಗೆ ವಿಶ್ವವಿದ್ಯಾನಿಯದ ಮಾನ್ಯತೆಯೂ ಸಿಗಲಿದೆ' ಎಂದು ಹೇಳಿದ್ದಾರೆ.

English summary
Vishvesvaraya Technological University (VTU) will introduce Kannada courses for engineering graduates from 2018-19 academic year . University has issued an official circular to all its affiliated colleges also. Courses have been split into two categories Kannada Manasu and Kannada Kali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X