ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳ ಆತಂಕ ಹೆಚ್ಚಿಸಿದ ವಿಟಿಯು ಪರೀಕ್ಷೆ ಘೋಷಣೆ

|
Google Oneindia Kannada News

ಬೆಂಗಳೂರು, ಜುಲೈ 27 : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬ್ಯಾಕ್ ಲಾಗ್ ವಿಷಯಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಈ ಪರೀಕ್ಷೆ ಆನ್‌ಲೈನ್ ಮೂಲಕ ನಡೆಯುವುದಿಲ್ಲ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ ಎಂದು ವಿಟಿಯು ಹೇಳಿದೆ.

Recommended Video

India - Bangladesh ಸಂಬಂಧಕ್ಕೆ ಹುಳಿ ಹಿಂಡಿದ China | Oneindia Kannada

ಮುಂದಿನ ಸೆಮಿಸ್ಟರ್‌ಗೆ ಹೋಗಲು ಅನರ್ಹರಾಗಿರುವ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಬಹುದಾಗಿದೆ ಎಂದು ವಿಟಿಯು ಹೇಳಿದೆ. ಕೋವಿಡ್ 19 ಪರಿಸ್ಥಿತಿಯಲ್ಲಿ ವಿಟಿಯು ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ವಿಟಿಯು ಪರೀಕ್ಷೆ ಮುಂದೂಡಿಕೆ, ಹಲವೆಡೆ ಶಾಲೆ-ಕಾಲೇಜಿಗೆ ರಜೆವಿಟಿಯು ಪರೀಕ್ಷೆ ಮುಂದೂಡಿಕೆ, ಹಲವೆಡೆ ಶಾಲೆ-ಕಾಲೇಜಿಗೆ ರಜೆ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಬರೆದಿದ್ದಾರೆ. ಬ್ಯಾಕ್ ಲಾಗ್ ವಿಷಯಗಳ ಪರೀಕ್ಷೆಯನ್ನು ಮುಂದಿನ ಸೆಮಿಸ್ಟರ್‌ನಲ್ಲಿ ನಡೆಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಷಯ ಓದಬೇಕಾಗಿ ಬರಲಿದ್ದು, ಒತ್ತಡ ಉಂಟಾಗಲಿದೆ ಎಂದು ವಿಟಿಯು ತಿಳಿಸಿದೆ.

ಶಿವಮೊಗ್ಗ; ಪದವಿ, ಸಿಇಟಿ ಪರೀಕ್ಷೆ ವಿರೋಧಿಸಿ ಸಿಎಂ‌ ಮನೆಗೆ ಮುತ್ತಿಗೆಶಿವಮೊಗ್ಗ; ಪದವಿ, ಸಿಇಟಿ ಪರೀಕ್ಷೆ ವಿರೋಧಿಸಿ ಸಿಎಂ‌ ಮನೆಗೆ ಮುತ್ತಿಗೆ

VTU To Conduct Backlog Exams In Offline Mode

ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ಧಪ್ಪ ಅವರ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ ವಿದ್ಯಾರ್ಥಿಯೊಬ್ಬ, "ಹೊರ ರಾಜ್ಯ ಮತ್ತು ಹೊರ ದೇಶದಲ್ಲಿರುವ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆಯುವುದು ಹೇಗೆ?. ಅವರು ಬಂದ ತಕ್ಷಣ ಕ್ವಾರಂಟೈನ್‌ಗೆ ಹಾಕುತ್ತಾರೆ" ಎಂದು ಹೇಳಿದ್ದಾನೆ.

ಶೆಲ್ ಇಕೋ-ಮ್ಯಾರಥಾನ್: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ವೇದಿಕೆ ಶೆಲ್ ಇಕೋ-ಮ್ಯಾರಥಾನ್: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ವೇದಿಕೆ

ವಿಟಿಯು ಆಗಸ್ಟ್ 1ರಿಂದ 14ರ ತನಕ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುತ್ತದೆ. ಇದು ಕಡ್ಡಾಯವಲ್ಲ ಎಂದು ಹೇಳಿತ್ತು. ಆಗಸ್ಟ್ 17ರಿಂದ 21ರ ತನಕ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ವೈವಾ ಹಾಗೂ 24 ರಿಂದ 30ರ ತನಕ ಆಫ್‌ ಲೈನ್‌ನಲ್ಲಿಯೇ ಪರೀಕ್ಷೆ ಮಾಡಲಾಗುತ್ತದೆ ಎಂದು ಹೇಳಿತ್ತು.

English summary
VTU announced that it will conduct backlog exams for all subjects of its UG and PG in the offline mode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X