ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಟಿಯುದ ಎಲ್ಲ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 5: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ತನ್ನ ವ್ಯಾಪ್ತಿಯಲ್ಲಿನ ಎಲ್ಲ ಸ್ವಾಯತ್ತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿದೆ. ಬಿ.ಇ, ಬಿ.ಟೆಕ್, ಬಿ. ಪ್ಲ್ಯಾನಿಂಗ್ ಮತ್ತು ಬಿ.ಆರ್ಕ್ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಕಲಿಕೆ ಕಡ್ಡಾಯ ಎಂದು ವಿಟಿಯು ಶುಕ್ರವಾರ ಸುತ್ತೋಲೆ ಹೊರಡಿಸಿದೆ.

Recommended Video

CT Ravi ಮಾತಿಗೆ ಸಲೀಂ ಸಾಥ್ | Oneindia Kannada

ವಿಟಿಯು ಅಡಿಯಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರವೇ ಕನ್ನಡ ಪಾಠಗಳು ಕಡ್ಡಾಯ ಎಂದು ಆಗಸ್ಟ್‌ನಲ್ಲಿ ಅದು ಪ್ರಕಟಿಸಿತ್ತು. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಅದು ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಿದೆ.

ಆನ್‌ಲೈನ್ ಪರೀಕ್ಷೆಗೆ ಏಕೆ ಅವಕಾಶ ನೀಡಿಲ್ಲ: ವಿಟಿಯುಗೆ ಹೈಕೋರ್ಟ್ ತರಾಟೆಆನ್‌ಲೈನ್ ಪರೀಕ್ಷೆಗೆ ಏಕೆ ಅವಕಾಶ ನೀಡಿಲ್ಲ: ವಿಟಿಯುಗೆ ಹೈಕೋರ್ಟ್ ತರಾಟೆ

ಸುತ್ತೋಲೆಯ ಪ್ರಕಾರ 2020-21ನೇ ಶೈಕ್ಷಣಿಕ ಅವಧಿಯಿಂದ ಮೊದಲ ವರ್ಷದ ಬಿ.ಆರ್ಕಿಟೆಕ್ಟ್ ವಿದ್ಯಾರ್ಥಿಗಳು, 3ನೇ ಸೆಮೆಸ್ಟರ್ ಬಿ. ಪ್ಲ್ಯಾನಿಂಗ್ ಮತ್ತು ಬಿ.ಇ/ಬಿ.ಟೆಕ್ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಕಡ್ಡಾಯ ಕ್ರೆಡಿಟ್ ಕೋರ್ಸ್ ಆಗಿರಲಿದೆ. ಹಾಗೆಯೇ ಮೂರನೇ ವರ್ಷದ ಬಿ. ಪ್ಲ್ಯಾನಿಂಗ್, ಬಿ.ಇ. ಮತ್ತು ಬಿ.ಟೆಕ್ ವಿದ್ಯಾರ್ಥಿಗಳಿಗೆ ಕೂಡ ಕನ್ನಡ ಕೋರ್ಸ್ ಕಡ್ಡಾಯ ಕಲಿಕೆಯಾಗಿರಲಿದೆ. ಇದರ ಅರ್ಥ 2020-21ನೇ ಶೈಕ್ಷಣಿಕ ವರ್ಷದಲ್ಲಿ ಓದಲಿರುವ ಮೂರನೇ ವರ್ಷದ ವಿದ್ಯಾರ್ಥಿಗಳು ಕೂಡ ಕನ್ನಡ ವಿಷಯವನ್ನು ಓದಲೇಬೇಕು. ಮುಂದೆ ಓದಿ.

ಎರಡು ಬಗೆಯ ಪುಸ್ತಕಗಳು

ಎರಡು ಬಗೆಯ ಪುಸ್ತಕಗಳು

ಕರ್ನಾಟಕ ಸರ್ಕಾರದ ಪಠ್ಯಪುಸ್ತಕ ಸಮಿತಿಯು 'ಸಾಂಸ್ಕೃತಿಕ ಕನ್ನಡ' ಮತ್ತು 'ಬಳಕೆ ಕನ್ನಡ' ಎಂಬ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದೆ. ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬಲ್ಲ ವಿದ್ಯಾರ್ಥಿಗಳಿಗೆ 'ಸಾಂಸ್ಕೃತಿಕ ಕನ್ನಡ' ಪಠ್ಯ ಪುಸ್ತಕ ಹಾಗೂ ಕನ್ನಡ ಭಾಷೆಯ ಬಗ್ಗೆ ತಿಳಿವಳಿಕೆ ಇಲ್ಲದ ವಿದ್ಯಾರ್ಥಿಗಳಿಗೆ 'ಬಳಕೆ ಕನ್ನಡ' ಪಠ್ಯವಾಗಿರಲಿದೆ.

ಈ ಪುಸ್ತಕಗಳು ಮಾತ್ರ ಪಠ್ಯ

ಈ ಪುಸ್ತಕಗಳು ಮಾತ್ರ ಪಠ್ಯ

ಈ ಪುಸ್ತಕಗಳನ್ನು ಮಾತ್ರವೇ ಪಠ್ಯಪುಸ್ತಕಗಳನ್ನು ಪರಿಗಣಿಸಲಾಗುತ್ತದೆ. 2020ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಪುಸ್ತಕಗಳ ಸಾಫ್ಟ್‌ಕಾಪಿಗಳು ಲಭ್ಯವಾಗಲಿವೆ. ವಿಟಿಯು ಬೆಳಗಾವಿ ಪ್ರಸಾರಾಂಗ ಪ್ರಕಟಿಸುವ ಪುಸ್ತಕಗಳನ್ನು ಬಳಿಕ ವಿತರಿಸಲಾಗುವುದು ಎಂದು ಸುತ್ತೋಲೆ ಹೇಳಿದೆ.

ವಿಟಿಯುನಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಪಾಠ!ವಿಟಿಯುನಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಪಾಠ!

ಬದಲಾವಣೆ ಮಾಡಿಕೊಳ್ಳಲು ಕಾಲೇಜುಗಳಿಗೆ ಮನವಿ

ಬದಲಾವಣೆ ಮಾಡಿಕೊಳ್ಳಲು ಕಾಲೇಜುಗಳಿಗೆ ಮನವಿ

2020-21ನೇ ಶೈಕ್ಷಣಿಕ ವರ್ಷದಿಂದ ತಮ್ಮ ಕೋರ್ಸ್ ಸಂರಚನೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಎಲ್ಲ ಸ್ವಾಯತ್ತ ಕಾಲೇಜುಗಳಿಗೂ ವಿಟಿಯು ಮನವಿ ಮಾಡಿದೆ. ಎಲ್ಲ ನಾಲ್ಕು ವರ್ಷದ ಎಂಜಿನಿಯರಿಂಗ್ ಮತ್ತು ಬಿ. ಪ್ಲ್ಯಾನ್ ಕೋರ್ಸ್‌ಗಳಿಗೆ ಹಾಗೂ ಐದು ವರ್ಷದ ಆರ್ಕಿಟೆಕ್ಚರ್ ಕೋರ್ಸ್‌ಗೆ ಕನ್ನಡ ವಿಷಯವನ್ನು ಅಳವಡಿಸುವುದರ ಮೂಲಕ ಬೋಧನೆ ಹಾಗೂ ಪರೀಕ್ಷೆಯ ಯೋಜನೆಗಳನ್ನು ಅಪ್‌ಲೋಡ್ ಮಾಡುವಂತೆ ಎಲ್ಲ ಸ್ವಾಯತ್ತ ಕಾಲೇಜುಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದೆ.

ಕನ್ನಡ ಭಾಷೆಯಲ್ಲಿಯೂ ಕ್ರೆಡಿಟ್

ಕನ್ನಡ ಭಾಷೆಯಲ್ಲಿಯೂ ಕ್ರೆಡಿಟ್

ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು 175 ಕ್ರೆಡಿಟ್‌ಗಳನ್ನು ಪಡೆದುಕೊಳ್ಳಬೇಕು. ಕನ್ನಡ ಭಾಷೆಯೂ ಕ್ರೆಡಿಟ್ ಅಂಶಗಳನ್ನು ಹೊಂದಿರಲಿದೆ. ಭಾಷೆಯ ಬಗ್ಗೆ ಹೆಚ್ಚು ತಿಳಿಯದವರಿಗೆ ಕನ್ನಡ ಕಲಿಸುವುದು ಇದರ ಉದ್ದೇಶ. ಇದರಲ್ಲಿ ಎರಡು ಪಠ್ಯಪುಸ್ತಕಗಳಿವೆ. ಶಾಲೆಗಳಲ್ಲಿ ಕನ್ನಡ ಕಲಿತವರಿಗೆ ಸುಧಾರಿತ ಮಟ್ಟದ ಪುಸ್ತಕವಿದ್ದರೆ, ಕನ್ನಡ ಬಾರದವರಿಗೆ ಕಾಗುಣಿತದಿಂದ ಕಲಿಸುವ ಪಠ್ಯವಿದೆ.

English summary
VTU makes Kannada learning mandatory for all engineering students in affiliated colleges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X