ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿ. ಎಸ್.‌ ಉಗ್ರಪ್ಪಗೆ ಸ್ಥಾನ-ಮಾನ ನೀಡಿದ ಎಐಸಿಸಿ

|
Google Oneindia Kannada News

Recommended Video

ವಿ. ಎಸ್.‌ ಉಗ್ರಪ್ಪಗೆ ಸ್ಥಾನ-ಮಾನ ನೀಡಿದ ಎಐಸಿಸಿ | Oneindia Kannada

ಬೆಂಗಳೂರು, ಆಗಸ್ಟ್ 21 : ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯ ವಿ. ಎಸ್. ಉಗ್ರಪ್ಪಗೆ ಎಐಸಿಸಿ ಸ್ಥಾನಮಾನ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಉಗ್ರಪ್ಪ ಬಳ್ಳಾರಿಯಲ್ಲಿ ಸೋಲು ಕಂಡಿದ್ದರು.

ವಿ. ಎಸ್. ಉಗ್ರಪ್ಪರನ್ನು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಸಲ್ಲಿಸಿದ್ದ ಪ್ರಸ್ತಾವನೆಗೆ ಎಐಸಿಸಿ ಒಪ್ಪಿಗೆ ನೀಡಿದ್ದು, ಅಧಿಕೃತ ಆದೇಶವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಹೊರಡಿಸಿದ್ದಾರೆ.

ವಿ.ಎಸ್.ಉಗ್ರಪ್ಪ ಸಂಕ್ಷಿಪ್ತ ಪರಿಚಯವಿ.ಎಸ್.ಉಗ್ರಪ್ಪ ಸಂಕ್ಷಿಪ್ತ ಪರಿಚಯ

VS Ugrappa Now Chairman Of Media And Communication Department

ಮಾಜಿ ಸಂಸದ, ಕೆಪಿಸಿಸಿ ವಕ್ತಾರರಾದ ವಿ.ಎಸ್ ಉಗ್ರಪ್ಪ ಅವರನ್ನು ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾಗಿ ನೇಮಿಸಲಾಗಿದೆ. ವಿಧಾನ ಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್ ಈ ಹುದ್ದೆಯಲ್ಲಿದ್ದರು.

'ಶಾಸಕ ಸೇಲಾದ' ಕಾಂಗ್ರೆಸ್‌ನಿಂದ 14 ಕ್ಷೇತ್ರದಲ್ಲಿ ಸಮಾವೇಶ'ಶಾಸಕ ಸೇಲಾದ' ಕಾಂಗ್ರೆಸ್‌ನಿಂದ 14 ಕ್ಷೇತ್ರದಲ್ಲಿ ಸಮಾವೇಶ

2018ರಲ್ಲಿ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 628368 ಮತಗಳನ್ನು ಪಡೆದು ದಾಖಲೆ ಮಾಡಿ ವಿ. ಎಸ್. ಉಗ್ರಪ್ಪ ಜಯಗಳಿಸಿದ್ದರು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು.

ಸಂಘ ಪರಿವಾರ Vs ನೆಹರೂ ಬದ್ಧತೆ, ಇಂದಿರಾ ದಿಟ್ಟತನ, ರಾಜೀವ್ ದೂರದೃಷ್ಟಿಸಂಘ ಪರಿವಾರ Vs ನೆಹರೂ ಬದ್ಧತೆ, ಇಂದಿರಾ ದಿಟ್ಟತನ, ರಾಜೀವ್ ದೂರದೃಷ್ಟಿ

ವಿಧಾನ ಪರಿಷತ್ ಸದಸ್ಯರಾಗಿದ್ದ ವೆಂಕಟಪುರ ಸುಬ್ಬಯ್ಯ ಉಗ್ರಪ್ಪ ವಿಧಾನ ಪರಿಷತ್ ಸದಸ್ಯರಾಗಿದ್ದರು. ಸಂಸದರಾಗ ಬಳಿಕ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2019ರಲ್ಲಿ ಸೋತ ಬಳಿಕ ಪಕ್ಷದಲ್ಲಿ ಅವರಿಗೆ ಹುದ್ದೆಯನ್ನು ನೀಡಲಾಗಿದೆ.

1995-1998ರ ತನಕ ವಿಧಾನ ಪರಿಷತ್ ಸದಸ್ಯರಾಗಿ, 2004-2010ರ ತನಕ ಪುನಃ ವಿಧಾನ ಪರಿಷತ್ ಸದಸ್ಯರಾಗಿ, ಕೆಪಿಸಿಸಿ ವಕ್ತಾರರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಉಗ್ರಪ್ಪ ಕೆಲಸ ಮಾಡಿದ್ದಾರೆ.

English summary
AICC appointed senior party leader V.S.Ugrappa as chairman of media & communication department of KPCC. Ugrappa lost 2019 lok sabha elections in Ballari Lok Sabha seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X