• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಶ್ಚಿಮಘಟ್ಟ ಉಳಿವಿಗೆ ಸರ್ಕಾರದ ಮೊರೆ ಹೋದ ವೃಕ್ಷಲಕ್ಷ ತಂಡ

|

ಬೆಂಗಳೂರು, ಏ.26: ಅನಂತ ಹೆಗಡೆ ಅಶೀಸರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ವೃಕ್ಷಲಕ್ಷ ಆಂದೋಲನದ ಪರಿಸರ ನಿಯೋಗ ಪಶ್ಚಿಮ ಘಟ್ಟದ ಅರಣ್ಯ ನಾಶ ಹಾಗೂ ಭೂ ಕಬಳಿಕೆ ಕುರಿತು ಅರಣ್ಯ ಪರಿಸರ ಇಲಾಖೆಗೆ ವಿಶೇಷ ಮನವಿ ಸಲ್ಲಿಸಿದೆ.

ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀಧರ ಅವರೊಡನೆ ಸಮಾಲೋಚನೆ ನಡೆಸಿತು.ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರನ್ನೂ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಪಶ್ಚಿಮ ಘಟ್ಟಗಳ ಉಳಿವಿಗಾಗಿ ಶಿವಮೊಗ್ಗದಲ್ಲಿ 6 ರಾಜ್ಯಗಳ ಸಮಾವೇಶಪಶ್ಚಿಮ ಘಟ್ಟಗಳ ಉಳಿವಿಗಾಗಿ ಶಿವಮೊಗ್ಗದಲ್ಲಿ 6 ರಾಜ್ಯಗಳ ಸಮಾವೇಶ

ಜೀವವೈವಿಧ್ಯ ಕಾಯಿದೆ, ಅರಣ್ಯ-ವನ್ಯಜೀವಿ ಕಾಯಿದೆ, ಕಂದಾಯ ಕಾಯಿದೆಗಳ ತೀವೃ ಉಲ್ಲಂಘನೆ ಆಗುತ್ತಿದೆ. ಯಾರೂ ಪ್ರಶ್ನೆ ಮಾಡುತ್ತಿಲ್ಲ, ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಜಂಟಿ ತನಿಖಾ ಸಮೀತಿ ರಚಿಸಿ ಸ್ಥಳಕ್ಕೆ ಭೇಟಿ ನೀಡಬೇಕು. ಈ ಮೇಲೆ ಹೇಳಲಾದ ಪ್ರದೇಶಗಳ ಸಮೀಕ್ಷೆ ನಡೆಸಬೇಕು. ಸರ್ಕಾರಿ ಭೂಮಿ , ಅರಣ್ಯಗಳ ಕಬಳಿಕೆ, ನಾಶಕ್ಕೆ ನೇರ ತಡೆ ಹಾಕಬೇಕು ಎಂದು ಮನವಿ ಮಾಡಿದ್ದಾರೆ.

ತುರ್ತು ನೇರ ಕ್ರಮಕ್ಕೆ ಆಗ್ರಹ: ರಾಜ್ಯ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖಾ ಮುಖ್ಯಸ್ಥರು ಸಾಗರಕ್ಕೆ ಧಾವಿಸಬೇಕು. ರಾಜ್ಯ ಜೀವವೈವಿಧ್ಯ ಮಂಡಳಿಯ ಮುಖ್ಯಸ್ಥರು ಸ್ಥಳಕ್ಕೆ ಭೇಟಿ ನೀಡಬೇಕು. ಈ ಹಿಂದೆ 2019 ರ ಮಾರ್ಚ್ ತಿಂಗಳ ಆರಂಭದಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆಗಳ ಗಮನ ಸೆಳೆಯಲಾಗಿತ್ತು ಎಂಬುದನ್ನು ಎತ್ತಿ ಹೇಳುತ್ತೇವೆ ಎಂದು ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.

ಇದೊಂದು ಗಂಭೀರ ವಿಷಯ. ನಾಡೇ ಬರಗಾಲ, ಜಲಕ್ಷಾಮಕ್ಕೆ ಒಳಗಾಗಿದೆ. ಜಲ ಅಕ್ಷಯ ಪಾತ್ರೆ ಎನಿಸಿಕೊಂಡ ಪಶ್ಚಿಮ ಘಟ್ಟದ ಹಸಿರು ಬೆಟ್ಟ ಬೋಳಾಗಿಸುವ ವ್ಯಾಪಕ ಭೂಕಬಳಿಕೆ, ಅರಣ್ಯ ನಾಶ ತಡೆಯಬೇಕೆಂದು ಆಗ್ರಹ ಮಾಡುತ್ತೇವೆ.

ಡೀಮ್ಡ್ ಅರಣ್ಯ-ಗೋಮಾಳ ಅರಣ್ಯ ನಾಶ

ಡೀಮ್ಡ್ ಅರಣ್ಯ-ಗೋಮಾಳ ಅರಣ್ಯ ನಾಶ

ಸಾಗರ ಅರಣ್ಯ ವಿಭಾಗ ಹಾಗೂ ಶಿವಮೊಗ್ಗ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಬಗರಹುಕುಂ ಹೆಸರಲ್ಲಿ ನೂರಾರು ಹೊಸ ಅರಣ್ಯ ಅತಿಕ್ರಮಣಗಳು ನಡೆಯುತ್ತಿವೆ. ಡೀಮ್ಡ್ ಅರಣ್ಯ, ಗೋಮಾಳ, ಸೊಪ್ಪಿನ ಬೆಟ್ಟ, ಹುಲ್ಲು ಬನ್ನಿ, ಜಾಡಿ ಸೊಪ್ಪಿಗೆ ಮುಫತ್ತು, ಕಾನು ಖರಾಬು ಹೆಸರಲ್ಲಿ ಇರುವ ಕಂದಾಯ ಅರಣ್ಯಗಳ ನಾಶ ಎಗ್ಗಿಲ್ಲದೇ ನಡೆಯುತ್ತಿದೆ. ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಶುಂಠಿ ಬೆಳೆಸಲು ತಯಾರಿ ನಡೆಯುತ್ತಿದೆ.

5 ಲಕ್ಷ ಗಿಡ ಮರ ನಾಶ

5 ಲಕ್ಷ ಗಿಡ ಮರ ನಾಶ

ಮತ್ತಿ, ಹೊನಲು, ಬೀಟೆ, ನೇರಲು, ಹೊನ್ನೆ, ಜಂಬೆ, ಮಾವು, ಹಲಸು, ಶ್ರೀಗಂಧ, ನಂದಿ, ಗುಡ್ಡೇಗೇರು, ಸಂಪಿಗೆ ಹಣ್ಣಿನ ಮರ, ಧೂಪ, ಆಲ, ಹೆಬ್ಬಲಸು, ಈಚಲು, ಹಲಗೆ, ಬೈನೆ ತಾರೆ, ಶಿವನೆ, ಹಾಲಬಳ್ಳಿ, ಸರ್ಪಗಂಧ, ಶತಾವರಿ, ಅಮೃತಬಳ್ಳಿ, ಸೀಗೆಬಳ್ಳಿ ಸೇರಿದಂತೆ ಅಮೂಲ್ಯ ಮರಗಿಡಗಳಿಗೆ ಬೆಂಕಿ ಹಾಕಲಾಗುತ್ತಿದೆ. ಜೆಸಿಬಿ ಕಾರ್ಯಾಚರಣೆ ನಡೆಯುತ್ತಿದೆ. 5 ಲಕ್ಷ ಮರಗಿಡಗಳು ಸಾವನ್ನಪ್ಪಿವೆ. ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ, ನಾಡ ಕಛೇರಿ, ತಹಶೀಲ್ದಾರ ಕಛೇರಿಗಳ ಅಧಿಕಾರಿಗಳು ಸಿಬ್ಬಂದಿ ಅಕ್ರಮಗಳನ್ನು ನೋಡಿ ತಣ್ಣಗೆ ಕುಳಿತಿದ್ದಾರೆ. ಜಲಮೂಲಗಳ ನಾಶ, ಅರಣ್ಯ ನಾಶ, ಗ್ರಾಮ ಸಾಮೂಹಿಕ ಭೂಮಿಗಳ ನಾಶ ಆಗುತ್ತಿದೆ. ಯಾರೂ ಅರಣ್ಯ ನಾಶ ತಡೆಯುತ್ತಿಲ್ಲ. ಪ್ರಜ್ಞಾವಂತರು ಧ್ವನಿ ಎತ್ತದಂತೆ ಭೀತಿ ಹುಟ್ಟಿಸಲಾಗುತ್ತಿದೆ.

ಮರಗಳ ನಾಶ ಎಲ್ಲೆಲ್ಲಿ?

ಮರಗಳ ನಾಶ ಎಲ್ಲೆಲ್ಲಿ?

1) ಸೊರಬ - ಜಡೆ ರಸ್ತೆ, ಸೊರಬ - ಸಿದ್ದಾಪುರ ರಸ್ತೆ, ಸೊರಬ - ಚಂದ್ರಗುತ್ತಿ ರಸ್ತೆ, ಹಾಗೂ ಸಾಗರ - ತ್ಯಾಗರ್ತಿ ರಸ್ತೆ, ತ್ಯಾಗರ್ತಿ - ಬರೂರು - ಇಂಡುವಳ್ಳಿ ರಸ್ತೆಯ ಅಕ್ಕಪಕ್ಕ ಲ್ಲಾವಿಗೆರೆ, ಜಂಬಾನೆ, ಬರೂರು ಹಳ್ಳಿಗಳಲ್ಲಿ ಎಲ್ಲಿ ನೋಡಿದರೂ ಕಾಡಿಗೆ ಬೆಂಕಿ ಹಾಕಿದ್ದಾರೆ. ಅರಣ್ಯ ನಾಶ ಮಾಡಿದ್ದಾರೆ.
2) ಬರೂರು - ಇಂಡುವಳ್ಳಿ ರಸ್ತೆಯ ಅಕ್ಕಪಕ್ಕ ಅರಣ್ಯ ಒತ್ತುವರಿ ನಡೆಯುತ್ತಿದೆ. ಬೊಮ್ಮತ್ತಿ, ಮಂಚಾಲೆ, ನಾರಗೋಡ, ಬಿಳಿಸಿರಿ, ನಾಡಕಲಸಿ ಹಳ್ಳಿಗಳ 450 ಎಕರೆ ಗ್ರಾಮ ಗೋಮಾಳ ಕಾನು ಸೂರೆ ಆಗುತ್ತಿದೆ.

3) ಸಾಗರ-ಹೊಸನಗರ, ಸಾಗರ-ಆನಂದಪುರ ಶಿಕಾರಿಪುರ ರಸ್ತೆ, ಸಾಗರ ತಾಲೂಕ ಆನಂದಪುರ ಸುತ್ತಲಿನ ಎಲ್ಲ ಹಳ್ಳಿಗಳ ಗೋಮಾಳ ಅರಣ್ಯಗಳು ತೀವೃ ನಾಶ ಹೊಂದುತ್ತಿವೆ.
4) ಹೊಸನಗರ ತಾಲೂಕು ಬಟ್ಟೆ ಮಲ್ಲಪ್ಪ, ಬ್ರಹ್ಮೇಶ್ವರ, ಬಾಣಿಗಾ, ಕೇಶವಪುರ, ಕೋಡೂರು, ಅಮ್ಮನಘಟ್ಟ , ಹುಂಚ, ರಿಪ್ಪನ್‍ಪೇಟೆ ರಸ್ತೆಗಳ ಅಕ್ಕಪಕ್ಕ ಅರಣ್ಯ ನಾಶ ನಿರಂತರ ನಡೆದಿದೆ.
5) ಸೊರಬ ತಾಲೂಕ ಕಕ್ಕರ್ಸಿ ಗ್ರಾಮದ 233 ಎಕರೆ ಚೌಡಿಕಾನು ವಿನಾಶದ ಅಂಚಿನಲ್ಲಿ ಇದೆ. ನ್ಯಾರ್ಸಿ ಗ್ರಾಮದ ಅರಣ್ಯ ಕಾನು ಅತಿಕ್ರಮಣ, ನಾಶದ ವಿರುದ್ಧ ಹಳ್ಳಿಗಳ ಜನರು ಧ್ವನಿ ಎತ್ತಿದ್ದಾರೆ.

ಗ್ರಾಮಗಳ ಜಲಮೂಲಕ್ಕೆ ಕುತ್ತು

ಗ್ರಾಮಗಳ ಜಲಮೂಲಕ್ಕೆ ಕುತ್ತು

ಗ್ರಾಮಗಳ ಜಲಮೂಲವಾದ ಕಾನು, ಬೆಟ್ಟಗಳು ಧ್ವಂಸವಾಗಿವೆ. ಸಾಗರ-ಹೊಸನಗರ ತಾಲೂಕುಗಳು ದಟ್ಟ ಮಲೆನಾಡು, ಇದೀಗ ಅರೆ ಬಯಲು ನಾಡಾಗಿದೆ. ಮಲೆನಾಡಿನ ಕೆರೆ-ಹಳ್ಳಗಳು ಬತ್ತಲು ಈ ರೀತಿಯ ಭೂ ಕಬಳಿಕೆ, ಹಸಿರುನಾಶವೇ ಕಾರಣ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿದೆ.

ಭೂಮಿ ಹಂಚಿಕೊಳ್ಳಲು ಮೀಟಿಂಗ್

ಭೂಮಿ ಹಂಚಿಕೊಳ್ಳಲು ಮೀಟಿಂಗ್

ಇದು ರೆವೆನ್ಯೂ ಭೂಮಿ, ಆ ಇಲಾಖೆ ಕ್ರಮ ಕೈಗೊಳ್ಳಲಿ, ನಾವೇನು ಮಾಡಲು ಸಾಧ್ಯ" ಎಂದು ಅರಣ್ಯ ಇಲಾಖೆ ಹೇಳುತ್ತದೆ. ಕಂದಾಯ ಇಲಾಖೆ ಏನೂ ಕ್ರಮ ಕೈಗೊಂಡಿಲ್ಲ. ಅರಣ್ಯ-ರೆವೆನ್ಯೂ ಇಲಾಖೆಗಳು ಪರಸ್ಪರ ಸಂಪರ್ಕ ಇಲ್ಲದೇ ಗೊಂದಲ ಉಂಟಾಗಿದೆ. ಭಾರೀ ಭೂ ಕಬಳಿಕೆ ನಡೆಯುತ್ತಿದ್ದರೂ ಯಾರೂ ತಡೆ ಹಾಕುತ್ತಿಲ್ಲ. ಭೂಹೀನರು, ಬಡವರು, ವನವಾಸಿಗಳು ಈ ಕೃತ್ಯ ಮಾಡುತ್ತಿಲ್ಲ. ಸ್ಥಾಪಿತ ಹಿತಾಸಕ್ತಿಗಳು, ಶ್ರೀಮಂತರು ಭೂಕಬಳಿಕೆಗೆ ಇಳಿದಿದ್ದಾರೆ. ಸಾಗರ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಗೋಮಾಳ ಭೂಮಿಯನ್ನು ತಮ್ಮೊಳಗೆ ಹಂಚಿಕೊಳ್ಳಲು "ಮೀಟಿಂಗ್‍ಗಳು" ನಡೆಯುತ್ತಿವೆ. ಶುಂಠಿ, ಮರ ಮಾಫಿಯಾ ಕುಮ್ಮುಕ್ಕು ಇದರ ಹಿಂದೆ ಇದೆ. ಅರಣ್ಯ ಮಧ್ಯೆ ಸಾವಿರಾರು ಅಕ್ರಮ ಬೋರ್‍ವೆಲ್‍ಗಳನ್ನು ಕೊರೆಯುವ ಕೆಲಸ ನಡೆದಿದೆ.

ಗ್ರಾಮ ಸಾಮೂಹಿಕ ಭೂಮಿ

ಗ್ರಾಮ ಸಾಮೂಹಿಕ ಭೂಮಿ

ನೂರಾರು ವರ್ಷಗಳಿಂದ ಇತ್ತು. ಅವೆಲ್ಲ ಕಣ್ಮರೆ ಆಗುತ್ತಿವೆ. ಜಾನುವಾರು ಮೇಯಲು ನೂರಾರು ವರ್ಷಗಳಿಂದ ಇದ್ದ ಗೋಚರ, ಗೋಮಾಳ ಭೂಮಿ ಕಾಣೆಯಾಗಿದೆ. ಔಷಧಿ ಗಿಡಮೂಲಿಕೆಗಳ ಆಗರವಾಗಿದ್ದ ಡೀಮ್ಡ್ ಅರಣ್ಯಗಳು ಬೆಂಕಿ-ಜೆಸಿಬಿ ಕಾರ್ಯಾಚರಣೆ ನಂತರ ಸಮೂಲವಾಗಿ ನಾಶವಾಗುತ್ತಿವೆ. ವನ್ಯಜೀವಿಗಳು ಅತಂತ್ರವಾಗಿದೆ. ಅವುಗಳಿಗೆ ನೆಲೆತಪ್ಪಿದೆ. ಕಾಡೆಮ್ಮೆ, ಕಾನುಕುರಿ, ಜಿಂಕೆ, ನವಿಲು, ಕಡವೆ, ಸೀಳುನಾಯಿ, ಕಾಡುಕೋಳಿ ಎಲ್ಲ ಕಣ್ಮರೆ ಆಗಿವೆ. ನೀರು, ಆಹಾರ ಇಲ್ಲವಾಗಿದೆ. ಬೆಟ್ಟಗಳಿಂದ ನೈಸರ್ಗಿಕವಾಗಿ ಹರಿದು ಬರುತ್ತಿದ್ದ ಸಿಹಿನೀರ ಜಡ್ಡಿಗಳನ್ನು (ಮಿರಿಸ್ಟಿಕಾಸ್ವಾಂಪ್) ಕೊಚ್ಚಿ ಹಾಕಲಾಗಿದೆ.

English summary
Vrikshalaksha team requested to Forest department to save the Western Ghat.Environmentalist Anant Hegde and other members met the officials today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X