ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರ ಗುರುತಿನ ಚೀಟಿ ಬದಲು ಪರಿಗಣಿಸುವ 12 ದಾಖಲೆಗಳು?

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಮೇ.12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಮತದಾನ ಚೀಟಿ ಬದಲು 12 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಗಳಿದ್ದರೂ ಮತದಾನ ಮಾಡಬಹುದು. ಇದಕ್ಕೆ ಚುನಾವಣಾ ಆಯೋಗ ಸಮ್ಮತಿ ಸೂಚಿಸಿದೆ

1) ಪಾಸ್ಪೋರ್ಟ್, 2) ಚಾಲನಾ ಪರವಾನಗಿ, 3) ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ, 4) ಬ್ಯಾಂಕ್ / ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್, 5) PAN ಹೊಂದಿರುವ ಕಾರ್ಡ್, 6) ಎನ್ಪಿಆರ್ ಅಡಿ ಅರ್ಜಿ ನೀಡಿರುವ ಸ್ಮಾರ್ಟ್ ಕಾರ್ಡ್, 7) ಎಂನರೇಗಾ ಜಾಬ್ ಕಾರ್ಡ್, 8) ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, 9) ಫೋಟೋವುಳ್ಳ ಪಿಂಚಣಿ ದಾಖಲೆ, 10) ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ವೋಟರ್ ಸ್ಲಿಪ್ಸ್, 11) ಸಂಸದರು/ವಿಧಾನಸಭಾ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, 12) ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಗುರುತಿನ ಚೀಟಿ ಬಳಸಿ ಮತದಾನ ಮಾಡಬಹುದು.

ವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಮತದಾನದ ದಿನದಂದು ಮತ ಚಲಾಯಿಸಲು ಮತಗಟ್ಟೆ ಪ್ರವೇಶಿಸುವ ಮತದಾರರು ಮತಗಟ್ಟೆ ಅಧಿಕಾರಿಗೆ ತಮ್ಮ ಗುರುತನ್ನು ಖಾತ್ರಿ ಪಡಿಸಲು ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್) ಯನ್ನು ತೋರಿಸಬೇಕು.

Voters can show one of the 12 documents to tender their vote!

ಭಾವಚಿತ್ರ ಹೊಂದಿರುವ ಈ ಎಪಿಕ್ ಕಾರ್ಡ್ನಲ್ಲಿ ದೋಷಗಳಿದ್ದರೆ, ಇಲ್ಲವೆ ಎಪಿಕ್ ಕಾರ್ಡ್ ಅನ್ನು ತರದಿದ್ದ ಸಂದರ್ಭದಲ್ಲಿ ಭಾರತ ಆಯೋಗ ಪರಿಗಣಿಸಿರುವ 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು.

ಒಂದು ಪಕ್ಷ ಎಪಿಕ್ ಕಾರ್ಡ್ ನಲ್ಲಿ ದೋಷವಿದ್ದರೆ, ಇಲ್ಲವೆ ಎಪಿಕ್ ಕಾರ್ಡ್ ನಲ್ಲಿರುವ ವ್ಯಕ್ತಿಯ ಭಾವಚಿತ್ರ ಹೊಂದಾಣಿಕೆ ಆಗದಿದ್ದ ಪಕ್ಷದಲ್ಲೂ 12 ದಾಖಲಾತಿಗಳ ಪೈಕಿ ಒಂದನ್ನು ತೋರಿಸಿ ಮತ ಚಲಾಯಿಸಬಹುದು. ಮತದಾರರ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿ ಬೇರೆ ವಿಧಾನಸಭಾ ಕ್ಷೇತ್ರದ ಎಪಿಕ್ ಕಾರ್ಡ್ ತೋರಿಸಿದರೂ ಅವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಮತದಾರರ ಪಟ್ಟಿಯಲ್ಲಿ ಹೆಸರಿರುವ ಸಾಗರೋತ್ತರ ಮತದಾರರು (Overseas Electors) ತಮ್ಮ ಗುರುತಿಗೆ ಮತಗಟ್ಟೆಯಲ್ಲಿ ಪಾಸ್‌ ಪೋರ್ಟ್ ಮೂಲ ಪ್ರತಿಯನ್ನು ಮಾತ್ರ ಹಾಜರುಪಡಿಸಬೇಕು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಗುರುತಿನ ದಾಖಲೆಗಳನ್ನು ಪರಿಗಣಿಸುವುದಿಲ್ಲ ಎಂದು ಆಯೋಗದ ಪ್ರಕಟಣೆಯಲ್ಲಿ ತಿಳಿಸಿದೆ.

English summary
Election commission has given options for voters they should have one of 12 documents to tender their vote rather EPIC card. Passport, driving license, bank pass book and others are the optional documents.ವ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X