ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.26ರೊಳಗೆ ನಿಮ್ಮ ಹೆಸರು ಮತದಾರರ ಪಟ್ಟಿಗೆ

|
Google Oneindia Kannada News

ಬೆಂಗಳೂರು, ಮಾ. 17 : ಮತದಾರರ ಪಟ್ಟಿಗೆ ಹೆಸರು ಸೇರಿಸಲು ಚುನಾವನಾ ಆಯೋಗ ನಡೆಸಿದ ಅಭಿಯಾನ ಭಾನುವಾರ ಅಂತ್ಯಗೊಂಡಿದ್ದು, ರಾಜ್ಯದಲ್ಲಿ ಸುಮಾರು 8.25 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ಪರಿಶೀಲನೆ ನಡೆಸಿ ಮಾ.26ರೊಳಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್‌ ಝಾ ಹೇಳಿದ್ದಾರೆ.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಭಾನುವಾರ ಕೊನೆಯ ದಿನವಾಗಿತ್ತು. ಭಾನುವಾರ ಸಂಜೆ 6 ಗಂಟೆಯ ತನಕ ಅರ್ಜಿ ಸಲ್ಲಿಸಿದ್ದಾರೆ. ಸುಮಾರು 8.25 ಲಕ್ಷಕ್ಕೂ ಹೆಚ್ಚು ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಸೇರಿಕೊಳ್ಳಲು ಅರ್ಜಿ ಸಲ್ಲಿಸಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ಖಚಿತ ಮಾಹಿತಿ ದೊರೆಯಲಿದೆ ಎಂದು ಅನಿಲ್‌ಕುಮಾರ್‌ ಝಾ ತಿಳಿಸಿದ್ದಾರೆ.

Election Commission

ಫೆ.1ರಿಂದ ಮಾ.15ರವರೆಗೆ ರಾಜ್ಯಾದ್ಯಂತ 8 ಲಕ್ಷ ಮಂದಿ ಮತದಾರರ ಪಟ್ಟಿಗೆ ಹೊಸದಾಗಿ ತಮ್ಮ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದರು. ಕೊನೆಯ ದಿನವಾದ ಭಾನುವಾರ ಆನ್‌ಲೈನ್‌ ಸೇವೆಯಲ್ಲೂ ಸೇರಿದಂತೆ, ಸುಮಾರು 25 ಸಾವಿರ ಮಂದಿ ಅರ್ಜಿ ಸಲ್ಲಿಸಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು. [ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಸುಲಭ]

ಹೊಸದಾಗಿ ಸಲ್ಲಿಸಿದ ಅರ್ಜಿಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಬಳಿಕ ಮೂರು ದಿನಗಳ ಕಾಲ ಅರ್ಜಿಗಳ ಪರಿಶೀಲನೆ ನಡೆಸಿ, ಮಾ.26ರೊಳಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದ ಅವರು, ಪಟ್ಟಿಗೆ ಹೆಸರು ಸೇರ್ಪಡೆಗೊಂಡ ನಂತರದ ಹತ್ತು ದಿನಗಳಲ್ಲಿ ಎಪಿಕ್‌ ಕಾರ್ಡ್‌ ನೀಡಲಾಗುವುದು ಎಂದರು. [ಲೋಕಸಭೆ ಚುನಾವಣೆ ವೇಳಾಪಟ್ಟಿ]

ಬೆಂಗಳೂರಿಗರು ಮುಂದೆ : ಬೆಂಗಳೂರು ನಗರದಲ್ಲಿಯೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಜನರು ಉತ್ಸಾಹ ತೋರಿಸಿದ್ದಾರೆ. ಬಿಬಿಎಂಪಿ ವಿಶೇಷ ಆಯುಕ್ತ (ಚುನಾವಣೆ) ಕೆಆರ್ ನಿರಂಜನ್ ಪ್ರಕಾರ, ಮಾರ್ಚ್ 9ರವರೆಗೆ 78,000 ಅರ್ಜಿಗಳು ಬಂದಿದ್ದವು. ಕೊನೆಯ ದಿನವಾದ ಭಾನುವಾರ ಸುಮಾರು 15 ಮಂದಿ ಅರ್ಜಿ ಸಲ್ಲಿಸಿದ್ದಾರೆ. [ಚುನಾವಣಾ ಆಯೋಗದ ವೆಬ್ ಸೈಟ್]

ಮತದಾರರ ಪಟ್ಟಿಗೆ ಹೆಸರು ನೋಂದಾವಣೆ ಗೊಂದಲ ಪರಿಹರಿಸಲು ಬಿಬಿಎಂಪಿ ಆರಂಭಿಸಿದ್ದ ಕಾಲ್ ಸೆಂಟರ್ ಸೇವೆಯು 22975500, 22975583 ಚುನಾವಣೆ ಮುಗಿಯುವ ತನಕ ಜಾರಿಯಲ್ಲಿರುತ್ತದೆ ಎಂದು ಹೇಳಿದ ನಿರಂಜನ್, ಮಾರ್ಚ್ 18ರಿಂದ ನಗರದಲ್ಲಿ ಮತದಾನದ ಮಾಡಿ ಎಂಬ ಜಾಗೃತಿ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

English summary
Election Commissions national drive for voter registration ended on Sunday, March 16. 8.25 lakhs applications received from campaign. Before March 26 names will added for voters list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X