ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ಗಂಟೆ ವೇಳೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ?

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಇಂದು ಬೆಳಿಗ್ಗೆ ಏಳು ಗಂಟೆಗೆ ಪ್ರಾರಂಭವಾಗಿರುವ ಮತದಾನ ನಿಧಾನವಾಗಿ ಏರುಗತಿ ಪಡೆದುಕೊಳ್ಳುತ್ತಿದೆ.

11 ಗಂಟೆ ವೇಳೆಗೆ ಇಂದು ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ ಒಟ್ಟಾಗಿ 14.77 ಶೇಕಡಾ ಮತದಾನವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದ್ದರೆ ಕೆಲವು ಕ್ಷೇತ್ರಗಳಲ್ಲಿ ಹೆಚ್ಚಾಗಿದೆ.

ಕರ್ನಾಟಕ ಲೋಕ ಸಮರ LIVE: ಮಧುವಣಗಿತ್ತಿಯರ ಮತ ಸಂಭ್ರಮಕರ್ನಾಟಕ ಲೋಕ ಸಮರ LIVE: ಮಧುವಣಗಿತ್ತಿಯರ ಮತ ಸಂಭ್ರಮ

ಬೆಂಗಳೂರು ಮತದಾನಿಗಳು ಇನ್ನೂ ಚುರುಕಾಗಿಲ್ಲ ಎಂದು ಈವರೆಗಿನ ಅಂಕಿ-ಸಂಖ್ಯೆ ಹೇಳುತ್ತಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 11 ಗಂಟೆ ವರೆಗೆ ಕೇವಲ 9.98% ಮತದಾನವಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈವರೆಗೆ 19.36 % ಮತದಾನವಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕೇವಲ 7.54% ಮತದಾನವಾಗಿದೆ.

 Vote percentage of 14 lok sabha constituencies of Karnataka till 11 am

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 8.10% ಮತದಾನ ಆಗಿದೆ. ಚಿಕ್ಕಬಳ್ಳಾಪುರದಲ್ಲಿ 9.62% ಮತಚಲಾವಣೆ ಆಗಿದೆ. ಪ್ರಮುಖ ಚುನಾವಣಾ ಕಣ ಮಂಡ್ಯದಲ್ಲಿ 11 ಗಂಟೆ ವರೆಗೆ ಆಗಿರುವ ಮತದಾನ ಕೇವಲ 11.16%.

ಹಾಸನದಲ್ಲಿ 16.44%, ಚಿತ್ರದುರ್ಗದಲ್ಲಿ 16.75%, ಕೋಲಾರದಲ್ಲಿ 12.59% , ಚಾಮರಾಜನಗರದಲ್ಲಿ 12.91%, ತುಮಕೂರಿನಲ್ಲಿ 19.88%, ಮೈಸೂರಿನಲ್ಲಿ 19.18% ಮತದಾನವಾಗಿದೆ.

ಹಾಸನದಲ್ಲಿ ಮೊಮ್ಮಗನ ಗೆಲುವಿಗೆ ಮತಚಲಾಯಿಸಿ ದೇವೇಗೌಡ ದಂಪತಿಹಾಸನದಲ್ಲಿ ಮೊಮ್ಮಗನ ಗೆಲುವಿಗೆ ಮತಚಲಾಯಿಸಿ ದೇವೇಗೌಡ ದಂಪತಿ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಹೆಚ್ಚು 27.04% ಮತದಾನವಾಗಿದ್ದರೆ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 25.63% ಮತ ಚಲಾವಣೆ ಆಗಿದೆ. ಈ ಎರಡು ಕ್ಷೇತ್ರಗಳಲ್ಲಿ ಉಳಿದವುಗಳಿಗಿಂತಲೂ ಹೆಚ್ಚಿನ ಮತದಾನವಾಗಿದೆ.

ಲೋಕಸಭೆ ಚುನಾವಣೆ LIVE:ಪ.ಬಂಗಾಳದಲ್ಲಿ ಚುನಾವಣೆ ಗಲಭೆ, ಅಶ್ರುವಾಯು ಪ್ರಯೋಗಲೋಕಸಭೆ ಚುನಾವಣೆ LIVE:ಪ.ಬಂಗಾಳದಲ್ಲಿ ಚುನಾವಣೆ ಗಲಭೆ, ಅಶ್ರುವಾಯು ಪ್ರಯೋಗ

ಈ ಅಂಕಿ-ಸಂಖ್ಯೆ ಬೆಳಿಗ್ಗೆ 7 ಗಂಟೆ ಇಂದ 11 ಗಂಟೆ ವರೆಗು ಆಗಿರುವ ಮತದಾನದ್ದು ಮಾತ್ರವೇ. ಸಂಜೆ ಆರು ಗಂಟೆ ವರೆಗೂ ಮತದಾನ ನಡೆಯಲಿದ್ದು, ಮತದಾನ ಇನ್ನಷ್ಟು ಚುರುಕಾಗುವ ಎಲ್ಲ ಸಂಭವ ಇದೆ.

English summary
Till 11 am Karnataka vote percentage is 14.77. Udupi-Chikkamagaluru and Dakshin Kannada voted more and Bengaluru central and Bengaluru Rural voted very less till 11 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X