ಪ್ರಶಿಕ್ಷಣಕ್ಕೆ ಕೊಪ್ಪಳ ವಿಸ್ತಾರ್ ರಂಗಶಾಲೆಯಿಂದ ಅರ್ಜಿ ಆಹ್ವಾನ

Posted By:
Subscribe to Oneindia Kannada

ಕೊಪ್ಪಳ, ಜೂನ್ 19 : ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ವಿಸ್ತಾರ್ ರಂಗಶಾಲೆ ಕೊಪ್ಪಳ 2017-18ರ ಪ್ರಶಿಕ್ಷಣಕ್ಕೆ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಪೂರ್ಣಾವಧಿ ನಾಟಕ ಶಾಲೆಯಲ್ಲಿ ನಟನೆ, ನಿರ್ದೇಶನ, ರಂಗಭೂಮಿಯ ತಾಂತ್ರಿಕ ವಿಷಯಗಳು, ಮುಖವಾಡ ತಯಾರಿಕೆ, ನಾಟಕಗಳ ಪ್ರಾತ್ಯಕ್ಷಿಕೆ, ಪಾರಂಪರಿಕ ರಂಗಪ್ರದರ್ಶನಗಳ ಪ್ರಾತ್ಯಕ್ಷಿಕೆಯೊಂದಿಗೆ ಪಾಶ್ಚಾತ್ಯ ರಂಗಭೂಮಿ ಅಭಿಜಾತಾ ಭಾರತೀಯ ರಂಗಭೂಮಿ, ಭಾರತೀಯ ರಂಗಭೂಮಿ ಮತ್ತು ಕನ್ನಡ ರಂಗಭೂಮಿ ಮುಂತಾದ ವಿಷಯಗಳ ಬಗ್ಗೆ ಪ್ರಾಯೋಗಿಕ ಶಿಕ್ಷಣದ ಮೂಲಕ ವೈಜ್ಞಾನಿಕವಾಗಿ ವಿಷಯಗಳನ್ನು ಮಂಡಿಸಲಾಗುವುದು.

Visthar Theatre School of Koppal invited applications for exhibition Arts Course

ರಂಗಶಾಲೆಯಲ್ಲಿ ನುರಿತ ಅಧ್ಯಾಪಕವರ್ಗ, ತಂತ್ರಜ್ಞವರ್ಗ, ಸಂಪನ್ಮೂಲ ವ್ಯಕ್ತಿಗಳ ವರ್ಗದಿಂದ ಕೂಡಿರುತ್ತದೆ. ಮತ್ತು ರಂಗಶಿಕ್ಷಣಕ್ಕೆ ಬೇಕಾದಂತ ಮೂಲ ಸೌಕರ್ಯಗಳನ್ನು ಸಹ ಹೊಂದಿರುತ್ತದೆ.

ಇದರಲ್ಲಿ ರಾಜ್ಯದ ಶೋಷಿತ ಸಮುದಾಯದ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ. ಅಭ್ಯರ್ಥಿಗಳಿಗೆ ಉಚಿತ-ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ಕನಿಷ್ಠ 10+2 ಪಾಸಾಗಿರಬೇಕು. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ, ಅಭ್ಯರ್ಥಿ ಪತ್ರಗಳನ್ನು ಪಡೆಯಬಹುದು.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ mail@vistar.org , www.vistar.org ವಿಸ್ತಾರ್ ರಂಗಶಾಲೆಯ ಸಂಯೋಜನಾಧಿಕಾರಿಗಳಾದ ಲಕ್ಷ್ಮಣ ಪಿರಗಾರ 9535769869, 8088492229, 9480282791 ಸಂಪರ್ಕಿಸಲು ಕೋರಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Visthar Theatre School of Koppal invited applications for exhibition Arts Course.
Please Wait while comments are loading...