ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಮೊದಲ ವಿಸ್ಟಾಡಾಮ್ ಕೋಚ್ ರೈಲು; ದರ ಪಟ್ಟಿ

|
Google Oneindia Kannada News

ಬೆಂಗಳೂರು, ಜುಲೈ 08; ನೈಋತ್ಯ ರೈಲ್ವೆ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೈಲುಗಳಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಿದೆ. ಗಾಜಿನ ಛಾವಣಿಯನ್ನು ಹೊಂದಿರುವ ಬೋಗಿಗಳ ಮೂಲಕ ನಿಸರ್ಗದ ಸೌಂದರ್ಯ ಸವಿಯಬಹುದಾಗಿದೆ.

ಯಶವಂತಪುರ-ಮಂಗಳೂರು ವಿಶೇಷ ರೈಲಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗುತ್ತದೆ. ಈಗಾಗಲೇ ಈ ರೈಲಿಗೆ ಬುಕ್ಕಿಂಗ್ ಆರಂಭವಾಗಿದ್ದು, ಜುಲೈ 11ರಿಂದ ರೈಲಿನಲ್ಲಿ ವಿಸ್ಟಾಡಾಮ್ ಕೋಚ್ ಇರಲಿದೆ.

ಜುಲೈ 7ರಿಂದ ವಿಸ್ಟಾಡಾಮ್ ಕೋಚ್ ರೈಲಿನಲ್ಲಿ ಸಾಗುತ್ತಾ ಪಶ್ಚಿಮ ಘಟ್ಟದ ಸೌಂದರ್ಯ ಸವಿಯಿರಿಜುಲೈ 7ರಿಂದ ವಿಸ್ಟಾಡಾಮ್ ಕೋಚ್ ರೈಲಿನಲ್ಲಿ ಸಾಗುತ್ತಾ ಪಶ್ಚಿಮ ಘಟ್ಟದ ಸೌಂದರ್ಯ ಸವಿಯಿರಿ

ಬೆಂಗಳೂರು ನಗರ ಮತ್ತು ಕರಾವಳಿಯನ್ನು ಸಂಪರ್ಕಿಸುವ ಈ ರೈಲು ಪಶ್ಚಿಮ ಘಟ್ಟದ ಮೂಲಕ ಸಾಗುತ್ತದೆ. ಕರಾವಳಿ ಭಾಗದಲ್ಲಿ ಸಂಚಾರ ನಡೆಸುವ 3 ರೈಲುಗಳಿಗೆ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿ ತೆಗೆದು ತಲಾ 2 ವಿಸ್ಟಾಡಾಮ್ ಕೋಚ್ ಬೋಗಿ ಅಳವಡಿಕೆ ಮಾಡಲಾಗುತ್ತದೆ.

ವಿಸ್ಟಾಡಾಮ್ ಕೋಚ್ ಇರುವ ಕರ್ನಾಟಕದ ರೈಲುಗಳ ಪಟ್ಟಿವಿಸ್ಟಾಡಾಮ್ ಕೋಚ್ ಇರುವ ಕರ್ನಾಟಕದ ರೈಲುಗಳ ಪಟ್ಟಿ

Vistadome Coaches Train In Karnataka Fare List

ಬೆಂಗಳೂರು-ಮಂಗಳೂರು ರೈಲು ಸಾಗುವ ಮಾರ್ಗದಲ್ಲಿ ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ನಡುವೆ ಪಶ್ಚಿಮ ಘಟ್ಟದ ಹಸಿರು ಸೌಂದರ್ಯವನ್ನು ವಿಸ್ಟಾಡಾಮ್ ಕೋಚ್ ಮೂಲಕ ಜನರು ಸವಿಯಬಹುದಾಗಿದೆ.

ನೈಋತ್ಯ ರೈಲ್ವೆ ವಿಸ್ಟಾಡಾಮ್ ಕೋಚ್‌ಗೆ ಭಾರೀ ಬೇಡಿಕೆ ನೈಋತ್ಯ ರೈಲ್ವೆ ವಿಸ್ಟಾಡಾಮ್ ಕೋಚ್‌ಗೆ ಭಾರೀ ಬೇಡಿಕೆ

ದಟ್ಟವಾದ ಅರಣ್ಯ, ಅಲ್ಲಲ್ಲಿ ಕಾಣುವ ಜಲಪಾತ, ರೈಲು ಸುರಂಗ ಮಾರ್ಗ, ಶಿರಾಡಿ ಘಾಟ್‌ನ ಸೌಂದರ್ಯವನ್ನು ಜನರು ರೈಲಿನಲ್ಲಿಯೇ ಕುಳಿತು ಕಣ್ತುಂಬಿಕೊಳ್ಳಬಹುದಾಗಿದೆ. ಮಳೆಗಾಲವೂ ಆಗಿರುವುದರಿಂದ ಪಶ್ಚಿಮ ಘಟ್ಟದ ಸೌಂದರ್ಯ ಇಮ್ಮಡಿಯಾಗಿದೆ.

ರೈಲುಗಳ ವಿವರ; ವಾರಕ್ಕೆ ಮೂರು ಬಾರಿ ಸಂಚಾರ ನಡೆಸುವ ಯಶವಂತಪುರ-ಕಾರವಾರ (06211/ 06212) ರೈಲು, ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ರೈಲು (06575/06576) ರೈಲು, ಯಶವಂತಪುರ-ಮಂಗಳೂರು (06539) ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ (06540) ರೈಲಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗುತ್ತದೆ.

ವಿಸ್ಟಾಡಾಮ್ ಕೋಚ್ ದರ ಪಟ್ಟಿ

* ಯಶವಂತಪುರ-ಮಂಗಳೂರು ಜಂಕ್ಷನ್ - 1395 ರೂ.
* ಹಾಸನ-ಮಂಗಳೂರು ಜಂಕ್ಷನ್ - 960 ರೂ.
* ಹಾಸನ-ಸುಬ್ರಮಣ್ಯ ರಸ್ತೆ - 725 ರೂ.
* ಸಕಲೇಶಪುರ - ಸುಬ್ರಮಣ್ಯ ರಸ್ತೆ - 625 ರೂ.
* ಯಶವಂತಪುರ - ಸುಬ್ರಮಣ್ಯ ರಸ್ತೆ - 1175 ರೂ.

Recommended Video

ಕರ್ನಾಟಕದ 4 ಸಂಸದರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಕನ್ಫರ್ಮ್ | Oneindia Kannada

English summary
South western railway will add Two vistadome coaches to Yesvantpur express from 11th July 2021. Here are the fare list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X