ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿವೃದ್ಧಿಯ ಮಾರ್ಗಸೂಚಿ- ನವ ಕರ್ನಾಟಕ ವಿಷನ್ 2025

By Mahesh
|
Google Oneindia Kannada News

ನವ ಕರ್ನಾಟಕ 2025 (ವಿಷನ್ 2025) ಎಂಬ ಶೀರ್ಷಿಕೆಯ ದಸ್ತಾವೇಜು ರಾಜ್ಯ ಅಭಿವೃದ್ಧಿಯ ನೀಲನಕ್ಷೆಯಲ್ಲಿ ಪ್ರತಿ ಪಾಲುದಾರನ ನಿರೀಕ್ಷೆಗಳನ್ನು ಸೆರೆಹಿಡಿಯುವ ವಿಶಿಷ್ಟ ಪ್ರಯತ್ನವಾಗಿದೆ. ಮುಖ್ಯವಾಗಿ ರಾಜ್ಯ ನಾಗರಿಕರ ವಿವಿಧ ಸಾಮಾಜಿಕ ದೃಷ್ಟಿಕೋನ ಸೆರೆಹಿಡಿಯುವ ಪ್ರಯತ್ನ ಇದಾಗಿದೆ.

ವಿಷನ್ 2025 ಕೈಪಿಡಿಯು ಕರ್ನಾಟಕ ರಾಜ್ಯಕ್ಕೆ ಮುಂದಿನ ಏಳು ವರ್ಷಗಳಿಗೆ ಆಡಳಿತ ಕಾರ್ಯತಂತ್ರವನ್ನು ನೀಡುವ ಉದ್ದೇಶ ಹೊಂದಿದೆ.

ಇದರ ವ್ಯಾಪ್ತಿಯು ವಿಸ್ತಾರವಾಗಿಯೂ ನಿರ್ದಿಷ್ಟವಾಗಿಯೂ ಇದ್ದು ರಾಜ್ಯದಲ್ಲಿನ ವಿವಿಧವಲಯಗಳ ಮತ್ತು ಹಿತಾಸಕ್ತಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. 'ಇದರಲ್ಲಿ ನನಗೇನಿದೆ ?' ಎಂಬ ಸಾಮಾನ್ಯ ನಾಗರಿಕನ ಪ್ರಶ್ನೆಗೆ ಉತ್ತರಿಸುವ ಉದ್ದೇಶವನ್ನು ಹೊಂದಿದೆ. ಇದೆ ತತ್ವವು ವಿಷನ್ ಕೈಪಿಡಿ ತಯಾರಿಕೆಯಪರಿಕಲ್ಪನೆ ಮತ್ತು ಮೂಲಶಕ್ತಿಯಾಗಿದೆ.

ಅಗತ್ಯಗಳ ಪ್ರೇರಣೆಯಿಂದ ಜಗತ್ತಿನ ಜನರ ಅದರಲ್ಲೂ ಯುವಜನರ ಆಕಾಂಕ್ಷೆಗಳು ಬದಲಾಗಿವೆ. ಇದೆಲ್ಲದರಿಂದ ತಂತ್ರಜ್ಞಾನ, ಮೊಬೈಲ್ ಟೆಲಿಫೋನಿ, ಕೇಬಲ್ ಟೀವಿ ಮತ್ತು ಇಂಟರ್ನೆಟ್ ಪ್ರೇರಿತವಾದ ಡಿಜಿಟಲ್ ಪರಿವರ್ತನೆಯುದಾಖಲೆಯ ಸಾಧನೆಯನ್ನು ಮಾಡಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಅಮೋಘ ಪಾತ್ರವನ್ನು ವಹಿಸಿ ಶ್ರೀಸಾಮಾನ್ಯನನ್ನು ಸಶಕ್ತನನ್ನಾಗಿಸಿದೆ.

Vision 2025: Nava Karnataka Namma Karnataka 2025

ಸಾರ್ವತ್ರಿಕವಾಗಿ ಜನರ ಹಕ್ಕು ಮತ್ತು ಅಧಿಕಾರಗಳ ಕುರಿತು ಜಾಗೃತಿ ಮತ್ತುತಿಳುವಳಿಕೆಯನ್ನು ಮೂಡಿಸುತ್ತಿದೆ, ಇದರಿಂದ ಸರ್ಕಾರವು ತನ್ನ ಗುರಿಗಳನ್ನು ಮತ್ತು ಫಲಿತಂಶಗಳನ್ನು ಜವಾಬ್ದಾರಿಯುತವಾಗಿ ಜನರ ಮುಂದಿಡಬೇಕೆಂದು ಜನರು ನಿರೀಕ್ಷಿಸುತ್ತಾರೆ.

ಸರ್ಕಾರವು ಸಾಮಾಜಿಕವಾಗಿ ಜಾಗೃತರಾಗಿರುವ ನಾಗರಿಕರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿ ಸಮಗ್ರವಾಗಿ ಕಾರ್ಯನಿರ್ವಹಿಸಬೇಕಾದ ಸಂದರ್ಭ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಆದ್ದರಿಂದ ಆಡಳಿತದ ಎಲ್ಲ ಕ್ರಮಗಳುಸಾರ್ವಜನಿಕರ ಸೂಕ್ಷ್ಮದೃಷ್ಟಿಯನ್ನು ಎದುರಿಸಲಿದೆ.

ಪ್ರತಿನಿತ್ಯದ ರಾಷ್ಟ್ರೀಯ ಸಾಧನೆಗಳು, ಸ್ಪರ್ಧಾತ್ಮಕ ಜಾಗತಿಕ ಸ್ಥಿತಿಗತಿಗಳು ಹಾಗು ಸದಾ ಕಾರ್ಯನಿರತ ಮಾಧ್ಯಮಗಳು ಮತ್ತು ಅಪಾರ ಭರವಸೆಗಳನ್ನು ಹೊತ್ತ ನಾಗರೀಕ ಸಮೂಹದ ಮುಂದೆ ಸರ್ಕಾರವು ಕೇವಲ ಆಡಳಿತ ನಡೆಸಿದರೆ ಸಾಲದು, ಬದಲಿಗೆ ವಿಕಾಸದ ಧ್ಯೇಯವಿರುವ ದೂರದೃಷ್ಟಿಯನ್ನು ಹೊಂದಿರಬೇಕು. ಈ ಮೂಲಕವಾಗಿ ವಿಕಾಸದ ಕೈಪಿಡಿಯನ್ನು ರೂಪಿಸುವ ಮತ್ತು ಅದನ್ನುಸಮರ್ಥವಾಗಿ ಸಾಧಿಸುವ ನಕಾಶೆಯನ್ನು ರೂಪಿಸಲಾಗುತ್ತಿದೆ.

ವಿಷನ್ 2025 : ನಮ್ಮ ವಿಧಾನ

ಮುನ್ನೋಟ ಕೈಪಿಡಿಯನ್ನು ಎಲ್ಲ ಹಂತಗಳಲ್ಲೂ ವ್ಯಾಪಕ ಸಲಹೆ ಸಂಪರ್ಕ ಸಭೆಗಳ ಮೂಲಕ ರೂಪಿಸಲಾಗುತ್ತದೆ. ಸಾರ್ವಜನಿಕರ ಸಲಹೆಗಳು, ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳು, ಸಂಘಟನೆಗಳು ಅಲ್ಲದೆ ವಿವಿಧ ಏಜೆನ್ಸಿಗಳು ಮತ್ತು ವಲಯವಾರು ಸಂಸ್ಥೆಗಳು ಮತ್ತು ಆಸಕ್ತಿಯ ಗುಂಪುಗಳು, ಪ್ರಾತಿನಿಧಿಕ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ ಆಪ್ ಗಳ ಸೃಷ್ಟಿ ಮತ್ತು ಐಡಿಯಾಗಳನ್ನು ಹುಟ್ಟುಹಾಕಲು ಸಾಧನಗಳನ್ನು ಸೃಷ್ಟಿಸಲಾಗುತ್ತದೆ.

ಇದು ಅಭಿಪ್ರಾಯಗಳ ಸಂಗ್ರಹ ಮತ್ತು ಈ ಕೆಳಕಂಡ ವಿಭಾಗಗಳಲ್ಲಿ ಅಗತ್ಯಗಳನ್ನು ಕಂಡುಕೊಳ್ಳುವ ಮೂಲಕ ಕೈಪಿಡಿಯನ್ನು ಪೂರ್ಣಗೊಳಿಸಲಾಗುತ್ತದೆ.

ವಲಯ: ಕೃಷಿ, ಗ್ರಾಮೀಣಾಭಿವೃದ್ಧಿ, ಮೂಲಭೂತ ಸೌಕರ್ಯ, ಉದ್ಯೋಗ ಮತ್ತು ಕೌಶಲ್ಯ, ಕೈಗಾರಿಕಾ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ, ಶಿಕ್ಷಣ, ಸ್ಮಾರ್ಟ್ ನಗರಗಳು, ಮಾಹಿತಿ ಮತ್ತು ತಂತ್ರಜ್ಞಾನ, ಆಡಳಿತ ಇತ್ಯಾದಿ ಮುಖ್ಯ ವಿಭಾಗಗಳನ್ನು ಒಳಗೊಂಡಿದೆ.

ಮುಂದಿನ ಏಳು ವರ್ಷಗಳಿಗೆ ಅಭಿವೃದ್ಧಿಯ ಮಾರ್ಗಸೂಚಿಯಾದ ನವಕರ್ನಾಟಕ ವಿಷನ್ 2025 ದಾಖಲೆ ಈಗ ಬಿಡುಗಡೆ ಮಾಡಲಾಗಿದ್ದು, ಡೌನ್ ಲೋಡ್ ಗೆ ಲಭ್ಯವಿದೆ. ಹೆಚ್ಚಿನ ವಿವರಗಳನ್ನು ನವಕರ್ನಾಟಕ ನಮ್ಮ ಕರ್ನಾಟಕ ವೆಬ್ 2025ರಲ್ಲಿ ಪಡೆಯಬಹುದು.

English summary
A governance strategy will be provided to the state of Karnataka for the next 7 years and this will be through Vision 2025. The vision will provide a broad-based and specific scope for development and will aim at providing a way for the state ahead. It will bridge the gap between different sectors and diverse interests
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X