ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾ. ರಾ. ಮಹೇಶ್, ವಿಶ್ವನಾಥ್‌ಗೆ ಸಲಹೆ ಕೊಟ್ಟ ದಿನೇಶ್ ಗುಂಡೂರಾವ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 17 : ಮಾಜಿ ಸಚಿವರು, ಮೈಸೂರು ಜಿಲ್ಲೆಯ ಇಬ್ಬರು ಪ್ರಭಾವಿ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳು ಕೊನೆಯಾಗುತ್ತಿಲ್ಲ. ಸಾ. ರಾ. ಮಹೇಶ್, ಎಚ್. ವಿಶ್ವನಾಥ್ ಜಟಾಪಟಿ ಆಣೆ-ಪ್ರಮಾಣದ ತನಕ ಬಂದು ನಿಂತಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಬ್ಬರು ಸಚಿವರ ನಡುವಿನ ಜಟಾಪಟಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಇಬ್ಬರೂ ನಾಯಕರಿಗೆ ಸಲಹೆಯನ್ನು ನೀಡಿದ್ದಾರೆ. ಇದು ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ವಿಶ್ವನಾಥ್ -ಮಹೇಶ್ ಆಣೆ ಹೈಡ್ರಾಮ; ಚಾಮುಂಡಿ ಕ್ಷೇತ್ರ ಬಳಸಿಕೊಂಡಿದ್ದಕ್ಕೆ ವಿರೋಧವಿಶ್ವನಾಥ್ -ಮಹೇಶ್ ಆಣೆ ಹೈಡ್ರಾಮ; ಚಾಮುಂಡಿ ಕ್ಷೇತ್ರ ಬಳಸಿಕೊಂಡಿದ್ದಕ್ಕೆ ವಿರೋಧ

ಉಭಯ ನಾಯಕರು ಒಮ್ಮೆ ಆರೋಪ ಪ್ರತ್ಯಾರೋಪ ಮಾಡಿಕೊಂಡು ರಾಜಿಯಾಗಿದ್ದರು. ಈಗ ಪುನಃ ಏಟು-ಏದಿರೇಟು ಆರಂಭವಾಗಿದೆ. ಹುಣಸೂರನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಬೇಕು ಎಂಬ ವಿಚಾರದಲ್ಲಿ ಮತ್ತೆ ಕಿತ್ತಾಟ ನಡೆಯುತ್ತಿದೆ.

 ವಿಶ್ವನಾಥ್-ಸಾರಾ ಮಹೇಶ್ ಮಧ್ಯೆ ಮತ್ತೆ ಶುರುವಾಯ್ತ ಮಾತಿನ ಸಮರ? ವಿಶ್ವನಾಥ್-ಸಾರಾ ಮಹೇಶ್ ಮಧ್ಯೆ ಮತ್ತೆ ಶುರುವಾಯ್ತ ಮಾತಿನ ಸಮರ?

ಹುಣಸೂರನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡುವ ಪ್ರಸ್ತಾಪಕ್ಕೆ ಸಾ. ರಾ. ಮಹೇಶ್ ವಿಶ್ವನಾಥ್ ವಿರುದ್ಧ ವಾಗ್ದಾಳಿ ಮಾಡಿದ್ದರು. ಇದಕ್ಕೆ ತಿರುಗೇಟು ನೀಡುವ ಭರದಲ್ಲಿ ವಿಶ್ವನಾಥ್ ಆಣೆ-ಪ್ರಮಾಣದ ಪ್ರಸ್ತಾಪ ಮಾಡಿದ್ದರು. ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ತನಕ ವಿಚಾರ ಹೋಗಿದೆ.

ಮೈಸೂರು ಜಿಲ್ಲೆ ವಿಭಜನೆಗೆ ಎಚ್‌ ವಿಶ್ವನಾಥ್ ಒತ್ತಾಯ ಮೈಸೂರು ಜಿಲ್ಲೆ ವಿಭಜನೆಗೆ ಎಚ್‌ ವಿಶ್ವನಾಥ್ ಒತ್ತಾಯ

ಸಾ. ರಾ. ಮಹೇಶ್‌ಗೆ ಸಲಹೆ

ಸಾ. ರಾ. ಮಹೇಶ್‌ಗೆ ಸಲಹೆ

"ಸಾರಾ ಮಹೇಶ್ ಅವರೇ, ಹೆಚ್.ವಿಶ್ವನಾಥ್ ಅವರು ತಮ್ಮ ಸ್ವಾರ್ಥ, ಅಧಿಕಾರದ ಆಸೆಗೆ ಕಮಲ ಹಿಡಿಯಲು ಹೋಗಿ ನಿಂತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಉತ್ತಮ ವ್ಯಕ್ತಿತ್ವ ಕಾಪಾಡಿಕೊಳ್ಳಲು ನೀವು ಆ ಕೆಸರಿಂದ ದೂರ ಉಳಿಯುವುದೇ ಲೇಸು. ಕೆಸರೆರಚಾಟ ಮಾಡುವವರನ್ನು ನಿರ್ಲಕ್ಷಿಸಿರಿ ಮುನ್ನಡೆಯಿರಿ, ಮುಂದಿನದು ಜನತೆಗೆ ತೀರ್ಮಾನಿಸಲು ಬಿಡಿ" ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ರಾಜ್ಯಕ್ಕೆ ತಿಳಿದಿದೆ

ರಾಜ್ಯಕ್ಕೆ ತಿಳಿದಿದೆ

"ಹೆಚ್.ವಿಶ್ವನಾಥ್ ಅವರೇ, ನೀವೆಷ್ಟು ಪ್ರಾಮಾಣಿಕರು, ಯೋಗ್ಯರು ಎಂಬುದು ರಾಜ್ಯಕ್ಕೇ ತಿಳಿದಿದೆ. ನಾಡಿನ ಅಧಿದೇವತೆ ತಾಯಿ ಚಾಮುಂಡಿಯ ಪುಣ್ಯಕ್ಷೇತ್ರವನ್ನು ನಿಮ್ಮ ಆಣೆ ಪ್ರಮಾಣದ ರಾಜಕೀಯ ದೊಂಬರಾಟದ ಅಖಾಡ ಮಾಡಿಕೊಂಡು ಅಪವಿತ್ರ ಗೊಳಿಸಬೇಡಿ. ಮುಂದೆ ಚುನಾವಣೆಗಳು ಬರುತ್ತಿವೆ,
ಜನತಾ ನ್ಯಾಯಾಲಯದ ಮುಂದೆ ನಿಮ್ಮ ಯೋಗ್ಯತೆ ಸಾಬೀತು ಪಡಿಸಿ" ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಾ. ರಾ. ಮಹೇಶ್ ಹೇಳಿದ್ದೇನು?

ಸಾ. ರಾ. ಮಹೇಶ್ ಹೇಳಿದ್ದೇನು?

"ಎಚ್. ವಿಶ್ವನಾಥ್ ಆಸೆ ಆಮಿಷಗಳಿಗೆ ಬಲಿಯಾಗಿಲ್ಲ ಎನ್ನುವುದಾದದರೆ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ, ನಾನು ಬರುತ್ತೇನೆ" ಎಂದು ಮಾಜಿ ಸಚಿವ ಸಾ. ರಾ. ಮಹೇಶ್ ಹೇಳಿದ್ದಾರೆ.

ಕೊಂಡುಕೊಂಡವನನ್ನು ಕರೆದುಕೊಂಡು ಬನ್ನಿ

ಕೊಂಡುಕೊಂಡವನನ್ನು ಕರೆದುಕೊಂಡು ಬನ್ನಿ

"ನನ್ನನ್ನು ಮಾರಿಕೊಂಡವನು ಎಂದು ಸಾ. ರಾ. ಮಹೇಶ್ ಆರೋಪಿಸುತ್ತಾರೆ. ನನ್ನನ್ನು ಖರೀದಿ ಮಾಡಿದವನನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬನ್ನಿ. ಗುರುವಾರ ನಾನು ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ" ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದ್ದಾರೆ.

ಜಾತಿ ದಾಳ ಉರುಳಿಸಿದ ವಿಶ್ವನಾಥ್

ಜಾತಿ ದಾಳ ಉರುಳಿಸಿದ ವಿಶ್ವನಾಥ್

ಎಚ್. ವಿಶ್ವನಾಥ್ ಈ ವಾಕ್ಸಮರಕ್ಕೆ ಜಾತಿಯ ದಾಳ ಉರುಳಿಸಿದ್ದಾರೆ. "ನಾನು ಕುರುಬ ಎಂಬ ಕಾರಣಕ್ಕೆ ಹೀಗೆ ಹಿಂಸೆ ನೀಡಲಾಗುತ್ತಿದೆ. ನಮಗೆ ಇಂಥವರಿಂದ ರಕ್ಷಣೆ ಇಲ್ಲವೆ?. ಸಾ. ರಾ. ಮಹೇಶ್ ಹೇಳಿಕೆಗೆ ಮನ್ನಣೆ ನೀಡದೆ ಮಾಧ್ಯಮಗಳು ನಮ್ಮ ರಕ್ಷಣೆಗೆ ನಿಲ್ಲಬೇಕು" ಎಂದು ಹೇಳಿದರು.

English summary
KPCC president Dinesh Gundu Rao tweet about Former minister H.Vishwanath and Sara Mahesh verbal war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X