ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯೂಟ್, ಕ್ಯೂಟ್! ಚಕ್ಕರ್ ಹಾಕೋ ಮಗೂನಾ ಸ್ಕೂಲಿಗೆ ಕಳಿಸೋದು ಹೀಗೆ!

|
Google Oneindia Kannada News

ಮಲೆನಾಡಲ್ಲಿ ಮಳೆಗಾಲ ಶುರುವಾಗಿದೆ. ಜೋರು ಮಳೆ ಬಂದ್ರೆ ಸಾಕು ಶಾಲೆಗೆ ರಜೆ... ಮಳೆ ಕಡಿಮೆ ಆದ್ರೂ ಶಾಲೆಗೆ ಹೋಗೋಕೆ ಬೋರೋ ಬೋರು! ಈ ಚಳಿ ಚಳೀಲೀ ಬೆಚ್ಚಗ್ಗೆ ಕೂತು, ಮನೇಲಿ ಕುರುಕುಲು ತಿಂಡಿ ತಿನ್ನೋದು ಬಿಟ್ತು ಶಾಲೆಗೆ ಹೋಗೋದ್ಯಾರು ಅಂತ ಮಕ್ಕಳು ಬಡಬಡಾಯಿಸಿದೆರೆ ಅಚ್ಚರಿಯಿಲ್ಲ.

ಶಾಲೆಗೆ ಚಕ್ಕರ್ ಹಾಕೋಕೆ ನೆಪ ಹುಡುಕೋ ಮಕ್ಕಳನ್ನ ಒಂದಲ್ಲೊಂದು ಉಪಾಯ ಹೂಡಿ ಶಾಲೆಗೆ ಕರೆದೊಯ್ಯೋದು ಹೇಗೆ? ಅದಕ್ಕೊಬ್ಬರು ಸೂಪರ್, ಕ್ಯೂಟ್ ಕ್ಯೂಟ್ ಐಡಿಯಾ ಕೊಟ್ಟಿದ್ದಾರೆ ನೋಡಿ!

ಈ ವಿಡಿಯೋದಲ್ಲಿ ವ್ಯಕ್ತಿಯ ಕೈಯಲ್ಲಿ ಏನಿದೆ ಅಂತ ಮೊದಲು ಗೊತ್ತೇ ಆಗೋಲ್ಲ. ಜಿಟಿ ಜಿಟಿ ಮಳೆಯಲ್ಲಿ ಕೊಡೆ ಹಿಡಿದು, ಕೈಯಲ್ಲೊಂದು ಕವರ್ ಹಿಡಿದು ಬರುವ ವ್ಯಕ್ತಿ ಮನೆಯ ಜಗುಲಿ ಮೇಲೆ ಚೀಲ ಇಟ್ಟಾದ ಮೇಲಿದೆ ಮಜಾ..! ಬೆಚ್ಚಗೆ ಕೂತ ಕ್ಯೂಟ್ ಮಗುವೊಂದು ಚೀಲದೊಳಗಿಂದ ಹೊರಬಂದಾಗ, 'ಯಪ್ಪಾ ದೇವರೇ' ಅಂತ ನೀವು ಉದ್ಘರಿಸಿ, ಕ್ಯೂಟ್ ಕ್ಯೂಟ್ ಅಂತ ಹೇಳೇ ಹೇಳ್ತೀರಾ!

Viral video: Man carrying child in a carrybag

ಶಾಲೆಗೆ ಹೋಗೋಲೊಲ್ಲೆ ಅನ್ನೋ ಮಕ್ಕಳನ್ನ ಶಾಲೆಗೆ ಕಳಿಸೋಕೆ ಮಲೆನಾಡಿನ(ಈ ಪ್ರದೇಶ ಯಾವುದು ಅಂತ ಸ್ಪಷ್ಟವಾಗಿ ಗೊತ್ತಿಲ್ಲ. ಹಸಿರು ನೋಡಿದರೆ ಮಲೆನಾಡು ಇದ್ದೀತು ಎಂಬ ಊಹೆಯಷ್ಟೆ!) ಕಡೆಯಲ್ಲಿ ಏನೆಲ್ಲ ಹರಸಾಹಸ ನಡೆಯುತ್ತೆ ಅನ್ನೋಕೆ ಇದೊಂದು ನಿದರ್ಶನ ಅಷ್ಟೇ!

English summary
Here is a viral video of a man carrying a child in a carrybag! This shows the cuteness of monsoon in Malenadu area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X