• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೆರಿಗೆದಾರರ ಗಮನಕ್ಕೆ: 'ಗೋಕಾಕ್ ಸಾಹುಕಾರ' ತೀರಾ ನಾಟಿ ಕಂಡ್ರಿ!

|

ಬೆಂಗಳೂರು, ಡಿಸೆಂಬರ್ 02: ಒಂದು ಕಡೆ ಉಪ ಚುನಾವಣೆ, ಮತ್ತೊಂದು ಕಡೆ ಮೈತ್ರಿ ಮಾತುಕತೆ, ಆರೋಪ-ಪ್ರತ್ಯಾರೋಪದ ಪ್ರಚಾರದ ಭರಾಟೆ, ಶಾಸಕರ ಹನಿಟ್ರ್ಯಾಪ್ ವಿಡಿಯೋ ವಿವಾದ... ಹೀಗೆ ಸಾಗುತ್ತಿದ್ದ ಕರ್ನಾಟಕ ರಾಜಕೀಯ ಬೆಳವಣಿಗೆಗಳ ಪಟ್ಟಿಗೆ ಹೊಸ ಸೇರ್ಪಡೆ ಉತ್ತರ ಕರ್ನಾಟಕದ 'ಸಾಹುಕಾರ' ರಾಜಕಾರಣಿಯೊಬ್ಬರದ್ದು ಎಂದು ಗುರುತಿಸಲಾದ ದೂರವಾಣಿ ಸಂಭಾಷಣೆ.

ರಾಸಲೀಲೆ ವಿಡಿಯೋ: ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಹೀಗೆ

15 ಕ್ಷೇತ್ರದ ಉಪ ಚುನಾವಣೆಗೆ ಮೂರು ದಿನಗಳು ಬಾಕಿ ಉಳಿದಿರುವಾಗ ಕರ್ನಾಟಕ ರಾಜಕೀಯದಲ್ಲಿ ಆಡಿಯೋವೊಂದು ಸುದ್ದಿ ಮಾಡುತ್ತಿದೆ. ಗೋಕಾಕ್‌ನ ಶ್ರೀಮಂತ ಮನೆತನದ, ಆಗಾಗ್ಗೆ ರಾಜ್ಯ ರಾಜಕಾರಣದಲ್ಲಿ ಅಗತ್ಯಕ್ಕಿಂತ ಹೆಚ್ಚೇ ಪ್ರಚಲಿತದಲ್ಲಿರುವ, ಸದ್ಯ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರಾಜಕಾರಣಿಯೊಬ್ಬರು ಎಂದು ಗುರುತಿಸಲಾದ ನಾಯಕ, ಮಹಿಳೆ ಜೊತೆ ತಮ್ಮ ಚಪಲ ತೀರಿಸಿಕೊಳ್ಳುವ ಕುರಿತು ಆಡಿರುವ ಮಾತುಗಳ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕರ್ನಾಟಕ ಬಿಜೆಪಿ ಶಾಸಕನ ರಾಸಲೀಲೆ ವಿಡಿಯೋ ವೈರಲ್

ಈಗಾಗಲೇ ಬಿಜೆಪಿ ಶಾಸಕರ ಹನಿಟ್ರ್ಯಾಪ್ ವಿಡಿಯೋ ಪ್ರಕ್ರಣದ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಕೈಗೊಂಡಿದ್ದಾರೆ. 10ಕ್ಕೂ ಹೆಚ್ಚು ಶಾಸಕರ ವಿಡಿಯೋಗಳಿವೆ ಎಂಬ ಮಾಹಿತಿ ಹರಿದಾಡುತ್ತಿದೆ. ವಿಡಿಯೋ ಪ್ರಕರಣದ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಆಡಿಯೋ ವೈರಲ್ ಆಗಿದೆ.

ವಿಡಿಯೋ ನಂತರ ಆಡಿಯೋ ಸರದಿ

ವಿಡಿಯೋ ನಂತರ ಆಡಿಯೋ ಸರದಿ

ಹನಿಟ್ರ್ಯಾಪ್ ವಿಡಿಯೋ ಪ್ರಕ್ರಣದ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ವಿಡಿಯೋ ಪ್ರಕರಣದ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಈ ಆಡಿಯೋ ವೈರಲ್ ಆಗಿದೆ.

ಇದು ಖಾಸಗಿಯಾಗಿ ನಡೆದ ಸಂಭಾಷಣೆಯೇ ಆದರೂ ಸಾರ್ವಜನಿಕ ಹಣದ ಹಂಚಿಕೆ ಸಂಗತಿಯೂ ಇದರಲ್ಲಿರುವುದರಿಂದ ತನಿಖೆ ನಡೆಸಬೇಕಾದ ಅಗತ್ಯವಿದೆ. ಆಡಳಿತರೂಢ ಬಿಜೆಪಿಯೇ ಈ ವ್ಯಕ್ತಿಯನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ತನಿಖೆಯೆಂಬುದು ಮರೀಚಿಕೆಯೇ ಸರಿ.

ಖಾಸಗಿ ಹೋಟೆಲ್‌ನಿಂದಲೇ ಮಾತುಕತೆ

ಖಾಸಗಿ ಹೋಟೆಲ್‌ನಿಂದಲೇ ಮಾತುಕತೆ

ಮುಂಬೈನಲ್ಲಿ ಕುಳಿತಿದ್ದ ಶಾಸಕ ರಾಜ್ಯದಲ್ಲಿರುವ ಮಹಿಳೆ ಜೊತೆ ಮಾತನಾಡಿರುವ ಆಡಿಯೋ ಇದು ಎಂಬುದು ಆರೋಪ. ಅನರ್ಹ ಶಾಸಕರು ಮುಂಬೈ ಹೋಟೆಲ್‌ಗಳಲ್ಲಿ ಬೀಡು ಬಿಟ್ಟ ಘಟನೆ ಇನ್ನೂ ಹಸಿಯಾಗಿರುವಾಗಲೇ ಈ ಆಡಿಯೋ ಹೊರಬಿದ್ದಿದ್ದು ರಾಜಕೀಯ ಪಡಸಾಲೆ ಆಚೆಗೂ ಮಹತ್ವ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಜನಪ್ರತಿನಿಧಿಗಳ ಲಜ್ಜೆ ಬಿಟ್ಟು ವರ್ತಿಸುತ್ತಿರುವುದಕ್ಕೆ ಹೊಸ ಸಾಕ್ಷಿಯೊಂದು ಲಭ್ಯವಾಗಿದೆ.

ಜನರ ತೆರಿಗೆ ಹಣದಲ್ಲಿ ಸವಲತ್ತು

ಜನರ ತೆರಿಗೆ ಹಣದಲ್ಲಿ ಸವಲತ್ತು

ಕರ್ನಾಟಕದ ರಾಜಕೀಯ ಇದುವರೆಗೂ ಹಲವಾರು ಹಗರಣಗಳನ್ನು ಕಂಡಿದೆ. ಹಗರಣಗಳಿಲ್ಲದ ರಾಜಕಾರಣಿ ಎಂಬುದು ಇವತ್ತಿಗೆ ಹೊಸ ಪದದಂತೆಯೇ ಮತದಾರರಿಗೆ ಭಾಸವಾಗುತ್ತದೆ. ಇಷ್ಟೊಂದು ವಿಷಮ ಪರಿಸ್ಥಿತಿಯಲ್ಲಿ ಒಬ್ಬ ಅಧಿಕಾರ ಪಡೆದ ಪ್ರತಿನಿಧಿ ಜನರ ಹಣದಲ್ಲಿ ಖಾಸಗಿ ತೆವಲುಗಳನ್ನು ಹೇಗೆ ಪೂರೈಸಿಕೊಳ್ಳಲು ಮುಂದಾಗುತ್ತಾನೆ ಎಂಬುದಕ್ಕೆ ಆಡಿಯೋ ಪುರಾವೆ ನೀಡುತ್ತದೆ.

ಸಾಲು ಸಾಲು ಹಗರಣಗಳು

ಸಾಲು ಸಾಲು ಹಗರಣಗಳು

ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಹೋಗಬೇಕಾದ ಹಣವನ್ನು ಮಹಿಳೆಯೊಬ್ಬರಿಗೆ ನೀಡಲು ಮುಂದಾಗುವ ಈ ರಾಜಕಾರಣಿ ಅಂತಿಮವಾಗಿ ಯಾರಿಗೆ ಮೋಸ ಮಾಡಲು ಹೊರಟಿದ್ದಾನೆ? ಇದು ಸಾಮಾನ್ಯ ಜನರಿಗೂ ಉತ್ತರ ಸಿಗುವ ಪ್ರಶ್ನೆ.

ವಿಧಾನಸೌಧದಲ್ಲಿ ಆಶ್ಲೀಲ ವಿಡಿಯೋ ನೋಡಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಮಹಿಳೆಯ ನಗ್ನ ಚಿತ್ರ ವೀಕ್ಷಣೆ, 2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಯಲಾದ ಸಂಸದರ ವಾಟ್ಸಪ್ ಚಾಟ್ ಸೇರಿದಂತೆ ಹಲವಾರು ಪ್ರಕರಣಗಳ ಸಾಲಿನಲ್ಲಿ ನಿಲ್ಲುವ ಈ ಪ್ರಕರಣ ಜನರಿಗೆ ತಮ್ಮ ಜನಪ್ರತಿನಿಧಿಗಳ ಇನ್ನೊಂದು ಮುಖವನ್ನು ಪರಿಚಯಿಸಿದೆ. ಆಡಿಯೋ ತನಿಖೆ ಆಗಲಿದೆಯೇ?English summary
Karnataka former minister and Gokak powerful leader audio goes viral on social media. Phone conversation with women from Mumbai. Will police conduct probe on audio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more