ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರಾಜಪೇಟೆಯಿಂದ ಈ ಬಾರಿ ಅಂಕಣಕಾರ ಸಂತೋಷ್ ಕಣಕ್ಕೆ?

By Mahesh
|
Google Oneindia Kannada News

ವಿರಾಜಪೇಟೆ, ಮಾರ್ಚ್ 14: ಭಾರತೀಯ ಜನತಾ ಪಕ್ಷ(ಬಿಜೆಪಿ) ಈ ಬಾರಿ ಟಿಕೆಟ್ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಭಾರಿ ಗೊಂದಲದಲ್ಲಿದೆ. ಹಾಲಿ ಶಾಸಕರು, ಮಾಜಿ ಸಚಿವರು, ಸಂಸದರು, ಎಂಎಲ್ಸಿಗಳು, ಬಿಜೆಪಿ ಬೆಂಬಲಿತ ಸ್ವಾಮೀಜಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗ ಈ ಪಟ್ಟಿಗೆ ಜನಪ್ರಿಯ ಅಂಕಣಕಾರ ಸಂತೋಷ್ ತಮ್ಮಯ್ಯ ಅವರ ಹೆಸರು ಸೇರ್ಪಡೆಗೊಂಡಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆದರೆ, ಈ ಬಗ್ಗೆ ಸ್ಪಷ್ಟನೆ ಕೋರಿ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿ, ಟಿಕೇಟ್ ಗೆ ಸಂಬಂಧಿಸಿದಂತೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ಸ್ವಯಂಸೇವಕ ಮತ್ತು ಬಿಜೆಪಿ ಕಾರ್ಯಕರ್ತ ಅಷ್ಟೆ. ನನಗೆ ಯಾವುದೇ ರಾಜಕೀಯ ಆಕಾಂಕ್ಷೆಯೂ ಇಲ್ಲ ಎಂದರು.

ಕ್ಷೇತ್ರ ಪರಿಚಯ: ಬೋಪಯ್ಯ ಸೋತರಷ್ಟೇ ವಿರಾಜಪೇಟೆ ಕಾಂಗ್ರೆಸ್ ಪಾಲು ಕ್ಷೇತ್ರ ಪರಿಚಯ: ಬೋಪಯ್ಯ ಸೋತರಷ್ಟೇ ವಿರಾಜಪೇಟೆ ಕಾಂಗ್ರೆಸ್ ಪಾಲು

ಕೊಡಗಿನ ವಿರಾಜಪೇಟೆ ಕ್ಷೇತ್ರದಿಂದ ಹೊಸ ದಿಗಂತ ಪತ್ರಿಕೆಯ ಅಂಕಣಕಾರ ಸಂತೋಷ್ ತಮ್ಮಯ್ಯ ಅವರಿಗೆ ಬಿಜೆಪಿ ಟಿಕೇಟ್ ಬಹುತೇಕ ಖಚಿತ ಎಂಬ ಸುದ್ದಿ ಹರಿದಾಡುತ್ತಿದೆ.

ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

Virajpet Constituency : Columnist Santosh Thammaiah name in the ticket aspirants list

ಈ ಬಾರಿ ಬಿಜೆಪಿಯಿಂದ ಹೊಸ ಮುಖಗಳಿಗೆ ಟಿಕೆಟ್ ನೀಡುವ ಸಾಧ್ಯತೆಗಳಿರುವುದರಿಂದ ಸಂತೋಷ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.

'ದೈತ್ಯ ಸಂಹಾರಿ' ಜನತಾ ಪರಿವಾರದ ಜೀವಿಜಯ 'ದೈತ್ಯ ಸಂಹಾರಿ' ಜನತಾ ಪರಿವಾರದ ಜೀವಿಜಯ

ಸಂತೋಷ್ ಆಯ್ಕೆಗೆ ಕಾರಣವಾದ ಅಂಶಗಳು:
* ಪತ್ರಿಕೋದ್ಯಮದಲ್ಲಿ ದಶಕಕ್ಕೂ ಹೆಚ್ಚು ಕಾಲ ಸಂತೋಷ್ ಅವರಿಗಿರುವ ಅನುಭವ.
* ದೇಶಪ್ರೇಮ, ಭಾರತೀಯ ಸೇನೆ, ಯೋಧರ ಕುರಿತು ಬಗ್ಗೆ ತಮ್ಮ ಅಂಕಣಗಳ ಮೂಲಕ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಿರುವುದು
* ಕೊಡವ ಭಾಷೆಯಲ್ಲೂ ಲೇಖನಗಳನ್ನು ಬರೆದು, ಸ್ಥಳೀಯರಿಗೆ ಇನ್ನಷ್ಟು ಹತ್ತಿರವಾಗಿರುವುದು.
* ಸಿದ್ದರಾಮಯ್ಯ ಅವರ ಸರ್ಕಾರದ ವಿವಾದಿತ 'ಟಿಪ್ಪು ಜಯಂತಿ' ಬಗ್ಗೆ ಸರಣಿ ಲೇಖನಗಳನ್ನು ಬರೆದು ಕೊಡವರ ಸ್ವಾಭಿಮಾನಕ್ಕೆ ಬಲ ತಂದಿದ್ದು, ಇವೇ ಮುಂತಾದ ಕಾರಣಗಳನ್ನು ಬಿಜೆಪಿ ಪರಿವೀಕ್ಷಕರು ಪರಿಗಣಿಸಿ, ಸಂತೋಷ್ ಅವರ ಹೆಸರನ್ನು ಸೂಚಿಸಿರುವ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಸದ್ಯಕ್ಕೆ ಬಿಜೆಪಿ ಇನ್ನೂ ಅಧಿಕೃತ ಪಟ್ಟಿಯನ್ನು ಪ್ರಕಟಿಸಿಲ್ಲ. ಮಾರ್ಚ್ 22ರ ನಂತರ ಈ ಬಗ್ಗೆ ಸುದ್ದಿ ಸಿಗುವ ಸಾಧ್ಯತೆಯಿದೆ.

English summary
Elections 2018 : Popular columnist Santosh Tammaiah's names is doing round for the Virajpet Assembly constituency ticket. Reportedly BJP observers are also keen on fielding a new face this time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X