• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಫೋನ್ ಕಾರ್ಖಾನೆ ಮೇಲೆ ದಾಳಿ: ಉಂಟಾದ ನಷ್ಟವೆಷ್ಟು ಗೊತ್ತೇ?

|

ಬೆಂಗಳೂರು, ಡಿಸೆಂಬರ್ 14: ಕೋಲಾರ ಜಿಲ್ಲೆಯ ನರಸಾಪುರ ಸಮೀಪದ ಐಫೋನ್ ಕಾರ್ಖಾನೆಯಲ್ಲಿ ಶನಿವಾರ ವೇತನದ ವಿಚಾರವಾಗಿ ಕಾರ್ಮಿಕರು ನಡೆಸಿದ ದಾಂಧಲೆಯಲ್ಲಿ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಕಾರ್ಮಿಕರು ಘಟಕದ ಮೇಲೆ ದಾಳಿ ನಡೆಸಿದ್ದರು. ಜತೆಗೆ ಸಾವಿರಾರು ಐಫೋನ್‌ಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದ್ದು, ಒಟ್ಟಾರೆ ದಾಂಧಲೆಯಿಂದ ಉಂಟಾದ ನಷ್ಟ ಸುಮಾರು 440 ಕೋಟಿ ರೂ ಎಂದು ವಿಸ್ಟ್ರಾನ್ ಕಂಪೆನಿ ತಿಳಿಸಿದೆ.

   ಬೆಂಗಳೂರು ಬಳಿಯ ಐಫೋನ್ ಉತ್ಪಾದನಾ ಘಟಕದಲ್ಲಿ ನೌಕರರಿಂದಲೇ ದಾಂಧಲೆ | Iphone Plant Vandalised in Kolar

   ಐಫೋನ್‌ಗಳ ಸಾಧನಗಳನ್ನು ಜೋಡಿಸುವ ವಿಸ್ಟ್ರಾನ್ ಕಂಪೆನಿಯಲ್ಲಿ ಉಂಟಾದ ಗಲಾಟೆಯಲ್ಲಿ ಅಂದಾಜು 437 ಕೋಟಿ ರೂ ನಷ್ಟ ಸಂಭವಿಸಿದೆ ಎಂದು ಪೊಲೀಸರು ಮತ್ತು ಕಾರ್ಮಿಕ ಇಲಾಖೆಗೆ ನೀಡಿರುವ ದೂರಿನಲ್ಲಿ ಕಂಪೆನಿ ವಿವರಿಸಿದೆ.

   ಐಫೋನ್ ಕಾರ್ಖಾನೆಯಲ್ಲಿ 21 ಸಾವಿರ ಐಫೋನ್ ಧ್ವಂಸಐಫೋನ್ ಕಾರ್ಖಾನೆಯಲ್ಲಿ 21 ಸಾವಿರ ಐಫೋನ್ ಧ್ವಂಸ

   ಈ ನಷ್ಟದಲ್ಲಿ ಹೆಚ್ಚಿನ ಮೊತ್ತದ ಪಾಲು ಐಫೋನ್‌ಗಳ ಕಳ್ಳತನದಿಂದ ಆಗಿದೆ. ದಾಳಿಯ ವೇಳೆ ಸುಮಾರು 21 ಸಾವಿರ ಐ ಫೋನ್‌ಗಳನ್ನು ಧ್ವಂಸ ಮಾಡಲಾಗಿದೆ ಎನ್ನಲಾಗಿತ್ತು. ಹಿಂಸಾಚಾರದ ಸಂದರ್ಭದಲ್ಲಿ ಘಟಕದಲ್ಲಿದ್ದ ಸಾವಿರಾರು ಫೋನ್‌ಗಳನ್ನು ಕಳವು ಮಾಡಲಾಗಿದೆ. ಜತೆಗೆ ಕಾರ್ಖಾನೆಯ ಪ್ರಮುಖ ಕಾರ್ಯಚಟುವಟಿಕೆಯ ಕೇಂದ್ರ ಹಾಗೂ ಉಪಕರಣಗಳಿಗೆ ಹಾನಿ ಮಾಡಲಾಗಿದೆ. ಇದರಿಂದ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂದು ಕಂಪೆನಿ ದೂರಿನಲ್ಲಿ ತಿಳಿಸಿದೆ. ಮುಂದೆ ಓದಿ.

   ಎರಡು ಗಂಟೆ ನಡೆದಿದ್ದ ದಾಳಿ

   ಎರಡು ಗಂಟೆ ನಡೆದಿದ್ದ ದಾಳಿ

   ಕೋಲಾರದ ನರಸಾಪುರ ಸಮೀಪದಲ್ಲಿರುವ ಐಫೋನ್ ತಯಾರಿಕಾ ಘಟಕದಲ್ಲಿ ಶನಿವಾರ ಸುಮಾರು ಎರಡು ಗಂಟೆಗಳ ಕಾಲ ಹಿಂಸಾಕೃತ್ಯ ನಡೆದಿತ್ತು. ಕಂಪೆನಿ ಸರಿಯಾಗಿ ಸಂಬಳ ಕೊಡದೆ ಸತಾಯಿಸಿದ್ದರ ವಿರುದ್ಧ ರೊಚ್ಚಿಗೆದ್ದಿದ್ದ ಕಾರ್ಮಿಕರು ಕೈಗೆ ಸಿಕ್ಕ ವಸ್ತುಗಳಿಂದ ದಾಳಿ ನಡೆಸಿದ್ದರು. ಕಂಪೆನಿಗೆ ಹಾನಿ ಮಾಡಿದ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

   ಮೂರು ತಿಂಗಳಿನಿಂದ ಕಿತ್ತಾಟ

   ಮೂರು ತಿಂಗಳಿನಿಂದ ಕಿತ್ತಾಟ

   ವಿಸ್ಟ್ರಾನ್ ಮತ್ತು ಗುತ್ತಿಗೆ ಕಾರ್ಮಿಕರ ನಡುವೆ ಮೂರು ತಿಂಗಳಿನಿಂದಲೂ ವೇತನದ ಕುರಿತಂತೆ ವಿವಾದ ನಡೆಯುತ್ತಿತ್ತು. ಕೋಲಾರದಲ್ಲಿನ ತನ್ನ ಘಟಕಕ್ಕೆ ಆರು ಅಂಗಸಂಸ್ಥೆಗಳಿಂದ 8,900 ಮಂದಿ ಕಾರ್ಮಿಕರನ್ನು ವಿಸ್ಟ್ರಾನ್ ನೇಮಿಸಿಕೊಂಡಿತ್ತು ಅವರು ತಿಳಿಸಿದ್ದಾರೆ.

   ನರಸಾಪುರದ ತೈವಾನ್ ಕಂಪನಿಗೆ ಸೂಕ್ತ ಭದ್ರತೆ: ಜಗದೀಶ್ ಶೆಟ್ಟರ್ನರಸಾಪುರದ ತೈವಾನ್ ಕಂಪನಿಗೆ ಸೂಕ್ತ ಭದ್ರತೆ: ಜಗದೀಶ್ ಶೆಟ್ಟರ್

   ಸಂವಹನ ಕೊರತೆಯಿಂದ ಗೊಂದಲ

   ಸಂವಹನ ಕೊರತೆಯಿಂದ ಗೊಂದಲ

   'ಈ ಗುತ್ತಿಗೆ ಕಾರ್ಮಿಕರಲ್ಲದೆ ಕಂಪೆನಿಯು 1,200 ಕಾಯಂ ಉದ್ಯೋಗಿಗಳನ್ನು ಕೂಡ ನೇಮಿಸಿಕೊಂಡಿತ್ತು. ವಿಸ್ಟ್ರಾನ್ ಕಂಪೆನಿ, ಗುತ್ತಿಗೆದಾರರು ಮತ್ತು ಉದ್ಯೋಗಿಗಳ ನಡುವಿನ ಸಂವಹನದಲ್ಲಿನ ಲೋಪದಿಂದಾಗಿ ಗೊಂದಲ ಉಂಟಾಗಿ ಈ ಹಿಂಸಾಚಾರ ಸೃಷ್ಟಿಯಾಗಿರಬಹುದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

   ಗುತ್ತಿಗೆ ಸಂಸ್ಥೆಗಳ ಲೋಪ

   ಗುತ್ತಿಗೆ ಸಂಸ್ಥೆಗಳ ಲೋಪ

   'ಕಂಪೆನಿಯು ಕಾರ್ಮಿಕರನ್ನು ಗುತ್ತಿಗೆ ನೀಡಿದ ಸಂಸ್ಥೆಗಳಿಗೆ ವೇತನವನ್ನು ಸರಿಯಾಗಿ ಪಾವತಿ ಮಾಡಿತ್ತು. ಆದರೆ ಆ ಸಂಸ್ಥೆಗಳು ತನ್ನ ಉದ್ಯೋಗಿಗಳ ವೇತನವನ್ನು ವಿಳಂಬಮಾಡಿತ್ತು ಎಂದು ನಮಗೆ ತಿಳಿದುಬಂದಿದೆ. ಇದನ್ನು ಪರಿಶೀಲಿಸಲಾಗುತ್ತಿದೆ' ಎಂದು ಶೆಟ್ಟರ್ ಹೇಳಿದ್ದಾರೆ. ಬಾಕಿ ಮೊತ್ತವನ್ನು ಕಾರ್ಮಿಕರಿಗೆ ಪಾವತಿಸುವಂತೆ ವೆಸ್ಟ್ರಾನ್‌ಗೆ ಕಾರ್ಮಿಕ ಇಲಾಖೆ ನೋಟಿಸ್ ನೀಡಿದೆ.

   English summary
   Violence at Wistron's Kolar Plant caused losses amounting to an estimated Rs 437 Crore.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X