ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗಾರಾಧನೆ ಬಗ್ಗೆ ವಿನಯ್ ಗುರೂಜಿ ಹೇಳಿಕೆ: ಹೀಗೊಂದು ಸಮರ್ಥನೆ

|
Google Oneindia Kannada News

ಒಂದುವರೆ ಎರಡು ಕೋಟಿ ರೂಪಾಯಿ ಖರ್ಚು ಮಾಡಿ ನಾಗಮಂಡಲ ಮಾಡುವ ಬದಲು ಜನರಿಗೆ ರಸ್ತೆ ಮಾಡಬಾರದಾ? ಅಡಕೆಯ ಹಿಂಗಾರವನ್ನು (ಪಿಂಗಾರ) ಮೈಮೇಲೆ ಹೊಡೆದುಕೊಳ್ಳುವ, ಮುಖಕ್ಕೆ ಉಜ್ಜಿಕೊಳ್ಳುವ ನಾಗಪಾತ್ರಿಗಳಿಗೆ ಅದನ್ನು ಬೆಳೆಯಲು ಎಷ್ಟು ಕಷ್ಟವಿದೆ ಎನ್ನುವ ಅರಿವಿದೆಯೇ? ನಾಗಪಾತ್ರಿಗಳ ಮೈಮೇಲೆ ಒಂದಷ್ಟು ಬಂಗಾರ. ಯಾವ ಸುಬ್ರಮಣ್ಯ ದೇವರು ಬಂದು ಇದನ್ನು ಮಾಡಲು ಹೇಳಿದ್ದ ಎನ್ನುವ ಹೇಳಿಕೆಯನ್ನು ಗೌರಿಗದ್ದೆ ಸ್ವರ್ಣಪೀಠೀಕೇಶ್ವರಿ ದತ್ತಾಶ್ರಮದ ವಿನಯ್ ಗುರೂಜಿ ನೀಡಿದ್ದರು.

ವಿನಯ್ ಗುರೂಜಿ ಹೇಳಿಕೆ ವ್ಯಾಪಕ ಟೀಕೆಗೆ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಕರಾವಳಿ ಭಾಗದ ಜನತೆ ಕೂಡಾ ಗುರೂಜಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ನಮ್ಮ ಲೇಖನಕ್ಕೆ, ಉಪಾಧ್ಯ ಎಂ ಎನ್ ಅನ್ನುವವರು ಕಾಮೆಂಟ್ ಮಾಡಿ, ವಿನಯ್ ಗುರೂಜಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಪೋಸ್ಟ್ ಅನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ. (ಸಂ)

ನಾಗಮಂಡಲ ಮಾಡಲು ಸುಬ್ರಮಣ್ಯ ದೇವರು ಬಂದು ಹೇಳಿದ್ನಾ: ವಿನಯ್ ಗುರೂಜಿ ವಿವಾದದ ಹೇಳಿಕೆನಾಗಮಂಡಲ ಮಾಡಲು ಸುಬ್ರಮಣ್ಯ ದೇವರು ಬಂದು ಹೇಳಿದ್ನಾ: ವಿನಯ್ ಗುರೂಜಿ ವಿವಾದದ ಹೇಳಿಕೆ

'ವಿನಯ ಗುರೂಜಿಯವರು ಸರಿಯಾದದ್ದನ್ನೇ ಹೇಳಿದ್ದಾರೆ. ಆಧ್ಯಾತ್ಮದಲ್ಲಿ ನಾಗ ಅಂದರೆ ನಾದ. ಈ ನಾದ ಇದರ ಚಾಲನೆ ನಾಗರಹಾವಿನ ಹಾಗೆ ಇರುತ್ತೆ. ನಾದದ ಮೇಲೆ ನಿಯಂತ್ರಣ ಅಂದರೆ ಮನಸ್ಸಿನ ಮೇಲೆ ಮತ್ತು ಇಂದ್ರಿಯಗಳ ಮೇಲೆ ನಿಯಂತ್ರಣವಿಡುವುದು ಮತ್ತು ಮಂಡಲ ಪೂಜೆ ಅಂದರೆ ಒಂದು ಮಂಡಲ ಅಂದರೆ 48 ದಿನ ವೃತದಲ್ಲಿದ್ದೂ ತನ್ನ ವೀರ್ಯಶಕ್ತಿಯನ್ನು ಉನ್ನತೀಕರಿಸಿಕೊಳ್ಳುವುದು ಆಗಿದೆ'.

 Vinay Guruji statement on Nagaradhane, whatever Guruji said it is correct

ಅದರ ಫಲ ಸಂತಾನ ಪ್ರಾಪ್ತಿ ( ಅಪೇಕ್ಷೆ ಪಟ್ಟಲ್ಲಿ) ಮತ್ತು ವಿಶೇಷ ಆತ್ಮಬಲ ಮತ್ತು ಮನೋಬಲ ಶಾರೀರಿಕ ಅರೋಗ್ಯ ಐಶ್ವರ್ಯ ಸಂಪತ್ತು ಎಲ್ಲಾ ಲಭಿಸುತ್ತೆ. ಅದು ಬಿಟ್ಟು ಸಾಮಾನ್ಯ ಒಂದು ಲೋರಿ ಸಿಂಗಾರ ಹೂವು ನಾಶ ಪಡಿಸಿದರೆ ಸಾಮಾನ್ಯ ಒಂದು ಲೋರಿ ಅಡಿಕೆ ಹಾಳು ಮಾಡಿದ ಹಾಗೆ. ಇದರಿಂದ ಪುಣ್ಯದ ಬದಲಿಗೆ ಪಾಪವೇ ಜಾಸ್ತಿ ಲಭಿಸುತ್ತೆ,

ಈ ರೀತಿ ಆಚರಣೆ ಅಧರ್ಮವಾಗುತ್ತೆ. ಹಾಗಾದರೆ, ನಂಬಿಕೆಗೇನು ಹೇಳುತ್ತೀರಿ ಎನ್ನುವ ಪ್ರಶ್ನೆ ಬಂದರೆ, ನಂಬಿಕೆ ತಲಾಂತರದಿಂದ ಬಂದದ್ದಲ್ಲ. ಸಾಮಾನ್ಯ ಕೆಲವು ಸಾವಿರ ವರ್ಷಗಳಿಂದ ಜನರು ದುರ್ಬಲರಾಗಿ ಅವರ ವಿಚಾರವಂತಿಕೆಗೆ ಬರಬಂದು ಅಜ್ಞಾನಿಗಳಾಗಿ ಅಸಹಾಯಕತೆಯಿಂದ ಕೆಲವು ಅರ್ದಂಬರ್ದ ಜ್ಯೋತಿಷಿಗಳ ಬಲಿಗೋ/ಪುರೋಹಿತರ ಬಲೆಗೊ ಬಿದ್ದು ಅವರ ದುರಾಸೆಗೆ ಬಲಿಯಾಗಿ ಈ ನಾಗಪೂಜೆ /ಸಂಸ್ಕಾರ/ಆಶ್ಲೇಷಬಲಿ ನಾಗಮಂಡಲಗಳು ತಲೆ ಎತ್ತಿವೆ.

ವಿನಯ್ ಗುರೂಜಿ ವಿರುದ್ಧ ಪೋಸ್ಟ್; ಕ್ಷಮೆ ಯಾಚಿಸಿದ ಆರೋಪಿಗಳುವಿನಯ್ ಗುರೂಜಿ ವಿರುದ್ಧ ಪೋಸ್ಟ್; ಕ್ಷಮೆ ಯಾಚಿಸಿದ ಆರೋಪಿಗಳು

ವೇದಗಳಲ್ಲಿ ಅಥವಾ ಉಪನಿಷತ್ತಿನಲ್ಲಿ ಇವುಗಳ ಉಲ್ಲೇಖವಿಲ್ಲ. ಆದರೆ ಕೆಲವು ಪಂಡಿತರು ಗರುಡ ಗಾಯತ್ರಿ ಮಂತ್ರವನ್ನು ವೇದದಲ್ಲಿ ಸೇರಿಸಿದ್ದು ಕಂಡು ಬರುತ್ತದೆ. ನಾಗ ಮೂಲತಃ ಒಂದು ಮಾಂಸಾಹಾರಿ ಜೀವಿ. ಅದಕ್ಯಾಕೆ ಪೂಜೆ ಮಾಡಬೇಕು. ಅದು ಪೂಜೆಗೆ ಅರ್ಹವಿಲ್ಲ. ಭಾರತ ಬಿಟ್ಟರೆ ಎಲ್ಲಿಯೂ ನಾಗನಿಗೆ ಪೂಜೆಯಾದಿಗಳ ಆಚರಣೆಯಿಲ್ಲ.

ಮಹಾಭಾರತ ಒಂದು ಮನಸ್ಸಿನಿಂದ ಪರಮಾತ್ಮನನ್ನು/ ಸ್ವರ್ಗವನ್ನು ಮುಟ್ಟುವ ಚಂದ್ರವಂಶದ ಕಥೆ. ಚಂದ್ರಮಾ ಮಾನಸೋ ಜಾತಃ ಅನ್ನುತ್ತಾರೆ. ಮನೋ ನಿಗ್ರಹ/ಲಯ ಅಂದರೆ ಮನಸ್ಸನ್ನು ಕೊಳ್ಳುವುದು ಆಗಲೇ ನಮಗೆ ಇಂದ್ರಿಯಾತೀತ ಶಕ್ತಿ ದೊರೆತು ಋಷಿ/ದಾರ್ಶನಿಕ ಆಗಲಿಕ್ಕೆ ಸಾಧ್ಯ. ಅದೇ ಪರೀಕ್ಷಿತ ರಾಜನ ಕಥೆ.

ಸರ್ಪಯಜ್ಞ ಅಂದರೆ ಮನೋಲಯ ಮಾಡುವ/ ಮನಸ್ಸನ್ನು ಬಲಿಹಾಕುವ ಕಥೆ. ಅದರಿಂದ ಜನಮೇಜಯನಾಗಲು ಸಾಧ್ಯ. ಶ್ರೀಕೃಷ್ಣ ಪರಮಾತ್ಮನ ಕಡೆಕೊಂಡು ಹೋಗುವ ಬುದ್ಧಿ. ಕೊನೆಯಲ್ಲಿ ಈ ಬುದ್ದಿಯೂ ಲಯಯವಾಗಿ ಅಂದರೆ ಯೋಗೀಶ್ವರನ ಕೃಷ್ಣತ್ವ ನಾಶವಾದರೆ ಸ್ವರ್ಗ ಎಂದು ಸೂಚ್ಯವಾಗಿ ತಿಳಿಸುತ್ತೆ.

ನಾಗನ ಬಗ್ಗೆ ಖಂಡಿತವಾಗಿ ಬಹಳಷ್ಟು ಕೃತಜ್ಞತಾಭಾವ ಬೇಕೇಬೇಕು. ಯಾಕಂದರೆ ಬೆಳೆಯನ್ನು /ಆಹಾರವನ್ನು ತಿನ್ನುವ ರಾಕ್ಷರೊಪೀ ಹೆಗ್ಗಣಗಳನ್ನು ಸರ್ಪ ಬಲಿ ತೆಗೆದುಕೊಂಡು ಅವುಗಳ ಸಂತತಿ ನಿಯಂತ್ರಣ ಮಾಡುತ್ತೆ. ಓಂ ಶಾಂತಿ ಶಾಂತಿ ಶಾಂತಿ.

English summary
Vinay Guruji of Gowri Gadde Ahsram statement on Nagaradhane and Bhootaradhane. One of the reader reacted that, whatever Guruji said it is correct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X