ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಳೆಕುಡಿಗೆ ಗ್ರಾಮದಲ್ಲಿ ತೆಪ್ಪದಲ್ಲಿ ಮೃತ ದೇಹ ತಂದ‌ ಗ್ರಾಮಸ್ಥರು!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್.26: ರಸ್ತೆ ಇಲ್ಲದ‌ ಕಾರಣ ಗ್ರಾಮಸ್ಥರು ತೆಪ್ಪದಲ್ಲಿ ಮೃತ ದೇಹ ತಂದ‌ ಘಟನೆ ಮೂಡಿಗೆರೆಯ ಮಾಗುಂಡಿ ಸಮೀಪದ ಹೊಳೆಕುಡಿಗೆ ಗ್ರಾಮದಲ್ಲಿ ನಡೆದಿದೆ.
ಹೊಳೆಕುಡಿಗೆ ಗ್ರಾಮಕ್ಕೆ 3 ದಶಕದಿಂದಲೂ ರಸ್ತೆ‌ ಇಲ್ಲ.

ಭದ್ರಾ ನದಿಯನ್ನೇ ನಂಬಿಕೊಂಡು ಇಲ್ಲಿನ ಆದಿವಾಸಿಗಳು ಜೀವನ ನಡೆಸುತ್ತಿದ್ದಾರೆ. ಗ್ರಾಮದ ಲಕ್ಷ್ಮಮ್ಮ ಎಂಬುವವರು ಅನಾರೋಗ್ಯದಿಂದ ಮಂಗಳೂರಿನಲ್ಲಿ ಮೃತಪಟ್ಟರು. ಕೊನೆಗೆ ರಸ್ತೆ ಇಲ್ಲದ ಕಾರಣ ಕುಟುಂಬದವರು ಅವರ ಮೃತದೇಹವನ್ನು ತೆಪ್ಪದ ಮೂಲಕ ತಂದಿದ್ದಾರೆ. ಇಂತಹ ಘಟನೆಗಳು ಆಗಾಗ ಇಲ್ಲಿ ನಡೆಯುತ್ತಲೇ ಇರುವುದನ್ನು ನಾವಿಲ್ಲಿ ಸ್ಮರಿಸಬಹುದು.

Villagers brought dead body on a raft in the village of Holekudige

ಚಿಕ್ಕಮಗಳೂರಿಗೆ ಬನ್ನಿ'.. ಸಿಎಂಗೆ ಕೈ ಮುಗಿದು ಮನವಿ ಮಾಡಿದ ಶಾಸಕಚಿಕ್ಕಮಗಳೂರಿಗೆ ಬನ್ನಿ'.. ಸಿಎಂಗೆ ಕೈ ಮುಗಿದು ಮನವಿ ಮಾಡಿದ ಶಾಸಕ

ಭೂಮಿಯೊಳಗೆ ಭಾರೀ ಶಬ್ದ

ಕೊಪ್ಪ ‌ತಾಲೂಕಿನ‌ ಕೊಗ್ರೆ, ಅಬ್ಬಿಕಲ್ಲು ಗ್ರಾಮದಲ್ಲಿ ನಿನ್ನೆ ಶನಿವಾರ ನಿರಂತರವಾಗಿ ಭೂಮಿಯೊಳಗಿಂದ ಭಾರೀ ಶಬ್ದ ಕೇಳಿ ಬಂದಿದ್ದು, ಭೂ ಕಂಪನದ ಅನುಭವವಾಗಿದೆ. ಕೊಗ್ರೆ ಗ್ರಾಮದಲ್ಲಿ ಕೆಲ ಸೆಕೆಂಡ್ ಗಳ ಕಾಲ‌ ಭೂಮಿ ಕಂಪಿಸಿದೆ.

Villagers brought dead body on a raft in the village of Holekudige

ಮಧ್ಯ ರಾತ್ರಿ ಕೇಳಿ ಬಂದ‌ ಭಾರಿ ಶಬ್ದಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದ 10 ದಿನದ ಹಿಂದೆಯೂ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿತ್ತು. ಭಾರೀ ಶಬ್ದಕ್ಕೆ ನಾಲ್ಕಕ್ಕೂ ಅಧಿಕ ಮನೆಗಳು ಬಿರುಕು ಬಿಟ್ಟಿದ್ದವು. ಒಟ್ಟಾರೆಯಾಗಿ ನಿರಂತರ ಭೂ ಶಬ್ದ, ಭೂಕುಸಿತದಿಂದ ಮಲೆನಾಡಿಗರಲ್ಲಿ ಆತಂಕ ಹೆಚ್ಚಾಗಿದೆ.

English summary
Villagers brought dead body on the raft as there was no road. Incident took place in the village of Holekudige near Magundi in mudigere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X