ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಲ್ಲಿ ನಿಲ್ಲದ ಮಳೆ ಅಬ್ಬರ, ನಾಲ್ಕೈದು ಕಡೆ ಬಿರುಕುಬಿಟ್ಟ ರಸ್ತೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಬಿರುಕು ಬಿಟ್ಟ ರಸ್ತೆಗಳಿಂದ ಜನ ಜೀವನ ಅಸ್ತವ್ಯಸ್ತ..! | oneindia Kannada

ಚಿಕ್ಕಮಗಳೂರು, ಆಗಸ್ಟ್.16: ಮಲೆನಾಡಿನಲ್ಲಿ ಮುಂದುವರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ರಸ್ತೆ ಬಿರುಕು ಬಿಟ್ಟು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಕೊಪ್ಪ ತಾಲೂಕಿನ ಗುಡ್ಡೆತೋಟದ ರಸ್ತೆಯಲ್ಲಿ ನಾಲ್ಕು ಗ್ರಾಮಗಳಿಗೆ ಸಂಚಾರ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಭೂ ಕುಸಿತಗೊಂಡು ರಸ್ತೆ ಬಿಡಿಕು ಬಿಟ್ಟ ಪರಿಣಾಮ ರಸ್ತೆ ಮಾರ್ಗವಿಲ್ಲದೆ ನೂರಾರು ಗ್ರಾಮದ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ದ್ವೀಪದಂತಾದ ಕುಕ್ಕೆ ಸುಬ್ರಹ್ಮಣ್ಯ, ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆದ್ವೀಪದಂತಾದ ಕುಕ್ಕೆ ಸುಬ್ರಹ್ಮಣ್ಯ, ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ

ನಾಲ್ಕೈದು ಕಡೆಯಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಮೊನ್ನೆ ಸಹ ಒಂದು ಕಡೆ ಬಿರುಕು ಬಿಟ್ಟಿತ್ತು.

Villagers are worried about road crash to the rain in chikkamagaluru

ಅಷ್ಟೇ ಅಲ್ಲ, ಎನ್ ಆರ್ ಪುರ ತಾಲೂಕಿನ ಮೇಲ್ಪಾಲ್ ಗ್ರಾಮದ‌ ಸಮೀಪ ಮೇಲ್ಪಾಲ್ _ಹೊಡ್ಸಲು ಗ್ರಾಮದ ಮಧ್ಯೆಯೂ ಅವಘಡ ಸಂಭವಿಸಿದ್ದು, ಸುಮಾರು ಹತ್ತು ಅಡಿ ಆಳಕ್ಕೆ 300 ಮೀಟರ್ ರಸ್ತೆ ಕುಸಿದಿದೆ. ಇದರಿಂದ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

Villagers are worried about road crash to the rain in chikkamagaluru

ಬುಧವಾರ ಸಂಜೆ ಚಾರ್ಮಾಡಿ ಘಾಟ್ ನಲ್ಲಿ ಘಾಟಿ ತಿರುವಿನಲ್ಲಿ ಟಿಪ್ಪರ್ ಲಾರಿ ಕೆಟ್ಟು ನಿಂತ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, 4 ಕಿಮೀ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಮಂಗಳೂರು - ಚಿಕ್ಕಮಗಳೂರು ತೆರಳುವ ಪ್ರಯಾಣಿಕರು ಪರದಾಡುವಂತಾಯಿತು.

English summary
Villagers are worried about road crash to the rain in chikkamagaluru district. Incident occurred at Guddethota Road in Koppa Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X