ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೀಣಿಸಿದ ತಾಪಮಾನ: ಕೊರೆವ ಚಳಿಗೆ ತತ್ತರಿಸಿದ ಜನ

|
Google Oneindia Kannada News

ಬೆಂಗಳೂರು, ಜನವರಿ 2 : ಹೊಸ ವರ್ಷವನ್ನು ಚಳಿಯಿಂದಲೇ ಬರಮಾಡಿಕೊಳ್ಳಲಾಗಿದೆ. ರಾಜ್ಯದೆಲ್ಲೆಡೆ ಮೈಕೊರೆವ ಚಳಿ ಮುಂದುವರೆದಿದೆ. ದಿನೇ ದಿನೇ ಕನಿಷ್ಠ ತಾಪಮಾನ ಕ್ಷೀಣಿಸುತ್ತಿದೆ.

ಬೆಂಗಳೂರಿನಲ್ಲಿ ವರ್ಷಾಂತ್ಯಕ್ಕೆ ಹಿಮದಂಥ ಚಳಿಬೆಂಗಳೂರಿನಲ್ಲಿ ವರ್ಷಾಂತ್ಯಕ್ಕೆ ಹಿಮದಂಥ ಚಳಿ

ಉತ್ತರ ಕರ್ನಾಟಕ ಹಾಗೂ ಕರಾವಳಿಯ ಕೆಲ ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತಲೂ ಕಡಿಮೆ ದಾಖಲಾಗಿದೆ. ವಿಜಯಪುರದಲ್ಲಿ ಮಂಗಳವಾರ 8.2 ಡಿಗ್ರಿ ಸೆ. ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Vijayapur records lowest temperature in the state

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆ. ಹಾಗೂ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಇನ್ನು ಮುಂದಿನ 48 ಗಂಟೆಗಳವರೆಗೂ ಇದೇ ವಾತಾವರಣ ಮುಂದುವರೆಯಲಿದೆ. ಸಾಮಾನ್ಯವಾಗಿ ಮೋಡ ಕಾಣಿಸಿಕೊಳ್ಳಲಿದೆ. ಬೆಂಗಳೂರಿನ ಎಚ್ಎಎಲ್ ನಲ್ಲಿ ಗರಿಷ್ಠ 27 ಹಾಗೂ ಹಾಗೂ ಕನಿಷ್ಠ 15.3 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ಕೆಐಎಎಲ್ ನಲ್ಲಿ ಗರಿಷ್ಠ 28 ಡಿಗ್ರಿ ಸೆ. ಹಾಗೂ ಕನಿಷ್ಠ 14.6 ಡಿಗ್ರಿ. ಸೆ. ತಾಪಮಾನ ದಾಖಲಾಗಿದೆ.

ಬೆಂಗಳೂರಲ್ಲಿ ಡಿಸೆಂಬರ್ ಅಂತ್ಯದವರೆಗೂ ಮೈಕೊರೆಯುವ ಚಳಿಬೆಂಗಳೂರಲ್ಲಿ ಡಿಸೆಂಬರ್ ಅಂತ್ಯದವರೆಗೂ ಮೈಕೊರೆಯುವ ಚಳಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ಪ್ರಕಾರ ವಿಜಯಪುರದ ದಡಮತ್ತಿ ಹೋಬಳಿಯಲ್ಲಿ 8.2 ಡಿಗ್ರಿ ಸೆ. ನಷ್ಟು ತಾಪಮಾನ ದಾಖಲಾಗಿದೆ. ಕರ್ನಾಟಕದ ದಕ್ಷಿಣ ಭಾಗದ ಆಂತರಿಕ ಪ್ರದೇಶಗಳಲ್ಲಿ ಚಳಿ ವಾತಾವರಣ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ಇನ್ನೆರಡು ದಿನಗಳ ಕಾಲ ಮಂಜು ಕವಿದ ವಾತಾವರಣ ಮುಂದುವರೆಯಲಿದೆ ಎಂದು ತಿಳಿಸಿದೆ.

English summary
Temperature gradually declining across the state while coastal Karnataka and northern part of Karnataka witnessing lower than usual temperature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X