ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ತರಗತಿಗೆ ಯಾವಾಗ ಪಾಠ?: ವಿದ್ಯಾಗಮ ತರಗತಿಗಳ ಸಂಪೂರ್ಣ ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 24: ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾಗಮ ತರಗತಿಗಳನ್ನು ನಡೆಸುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿಯ ಕಾರಣ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ವಿದ್ಯಾಗಮ ಕಾರ್ಯಕ್ರಮ ಜಾರಿಗೆ ತರಲಾಗಿತ್ತು.

ಜನವರಿ 1ರಿಂದ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರ್ಯಾಯ ದಿನಗಳಂದು ವಿದ್ಯಾಗಮ ತರಗತಿಗಳು ಮರು ಆರಂಭವಾಗುತ್ತಿವೆ. ಕೋವಿಡ್-19ರ ಶಿಷ್ಟಾಚಾರಗಳಿಗೆ ಅನುಗುಣವಾಗಿ ಜ. 1ರಿಂದ ವಿದ್ಯಾಗಮ ತರಗತಿಗಳು ಆರಂಭವಾಗಲಿದ್ದು, ಈ ಕಾರ್ಯಕ್ರಮದ ಫಲಿತಾಂಶವನ್ನು ನೋಡಿಕೊಂಡು 1 ರಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೂ ಜ. 14ರ ಬಳಿಕ ವಿದ್ಯಾಗಮ ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

ಜನವರಿ 1ರಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಲಭ್ಯಜನವರಿ 1ರಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಲಭ್ಯ

ವಿದ್ಯಾಗಮ ತರಗತಿಗಳಿಗೆ ಹಾಜರಾಗುವ ಮಕ್ಕಳು ಪೋಷಕರ ಅನುಮತಿ ಪತ್ರ ತರಬೇಕು. ಅದರಲ್ಲಿ ಮಗುವಿಗೆ ಕೋವಿಡ್ ಸೋಂಕಿನ ಲಕ್ಷಣಗಳಿಲ್ಲದೆ ಇರುವುದನ್ನು ಖಚಿತಪಡಿಸಬೇಕು. ಉಳಿದಂತೆ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ನಿಯಮಗಳನ್ನೂ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಮುಂದೆ ಓದಿ.

ವಿವಿಧ ತಂಡಗಳಿಗೆ ಪಾಠ

ವಿವಿಧ ತಂಡಗಳಿಗೆ ಪಾಠ

ಪ್ರತಿ ತರಗತಿಗಳನ್ನು ವಿದ್ಯಾರ್ಥಿಗಳು ಮತ್ತು ಲಭ್ಯವಿರುವ ಶಿಕ್ಷಕರ ಸಂಖ್ಯೆಗನುಗುಣವಾಗಿ ವಿವಿಧ ತಂಡಗಳಾಗಿ ವಿಭಜಿಸಲಾಗುತ್ತದೆ. ಪ್ರೌಢಶಾಲೆಗಳಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ತರಗತಿಗಳನ್ನು ನಡೆಸಲಾಗುತ್ತದೆ. 8ನೇ ತರಗತಿ ವಿದ್ಯಾರ್ಥಿಗಳಿಗೆ ಮಂಗಳವಾರ, ಗುರುವಾರ ತರಗತಿಗಳನ್ನು ನಡೆಸಲಾಗುತ್ತದೆ.

2 ರಿಂದ ಸಂಜೆ 4.30ರವರೆಗೆ

2 ರಿಂದ ಸಂಜೆ 4.30ರವರೆಗೆ

ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ವಿವಿಧ ಭಾಷೆಗಳಿಗೆ ಅನುಗುಣವಾಗಿ ತರಗತಿಗಳನ್ನು ನಡೆಸಲಾಗುತ್ತದೆ. ಒಟ್ಟು ಎಂಟು ತಂಡಗಳಾಗಿ ವಿದ್ಯಾರ್ಥಿಗಳನ್ನು ವಿಂಗಡಿಸಲಾಗುತ್ತದೆ. ಮಧ್ಯಾಹ್ನ 2 ರಿಂದ 2.45, 2.45 ರಿಂದ 3.30 ಮತ್ತು 3.45 ರಿಂದ 4.30ರವರೆಗೆ ತರಗತಿಗಳು ನಡೆಯಲಿವೆ.

ಖಾಸಗಿ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಯೋಜನೆ: ಸುರೇಶ್ ಕುಮಾರ್!ಖಾಸಗಿ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಯೋಜನೆ: ಸುರೇಶ್ ಕುಮಾರ್!

ಏಳು ತಂಡಗಳು

ಏಳು ತಂಡಗಳು

ಇನ್ನು ಪ್ರಾಥಮಿಕ ಶಾಲೆಗಳಲ್ಲಿಯೂ 6 ರಿಂದ 8ನೇ ತರಗತಿಯವರೆಗಿನ ಮಕ್ಕಳನ್ನು ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಏಳು ತಂಡಗಳಾಗಿ ವಿಂಗಡಿಸಲಾಗುತ್ತದೆ. ಸೋಮವಾರದಿಂದ ಶನಿವಾರದವರೆಗೆ ಈ ತರಗತಿಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ತರಗತಿಗಳು ನಡೆಯಲಿವೆ.

ಮೂರು ಅವಧಿಯಲ್ಲಿ ಪಾಠ

ಮೂರು ಅವಧಿಯಲ್ಲಿ ಪಾಠ

6ನೇ ತರಗತಿಗಳಿಗೆ ಸೋಮವಾರ ಮತ್ತು ಗುರುವಾರ ಪಾಠ ನಡೆಯಲಿದೆ. 7ನೇ ತರಗತಿ ವಿದ್ಯಾರ್ಥಿಗಳಿಗೆ ಮಂಗಳವಾರ ಮತ್ತು ಶುಕ್ರವಾರ ಪಾಠ ನಡೆಸಲಾಗುತ್ತದೆ. ಇನ್ನು 8ನೇ ತರಗತಿ ವಿದ್ಯಾರ್ಥಿಗಳಿಗೆ ಬುಧವಾರ ಮತ್ತು ಶನಿವಾರ ಪಾಠ ನಡೆಯಲಿದೆ. ಬೆಳಿಗ್ಗೆ 10 ರಿಂದ 10.45, 10.45 ರಿಂದ 11.30 ಮತ್ತು 11.45 ರಿಂದ 12.30ರ ವರೆಗೆ ಮೂರು ಅವಧಿಗಳಲ್ಲಿ ತರಗತಿಗಳು ನಡೆಯಲಿವೆ.

6 ಮತ್ತು 7ನೇ ತರಗತಿಗಳು

6 ಮತ್ತು 7ನೇ ತರಗತಿಗಳು

6 ಮತ್ತು 7ನೇ ತರಗತಿ ಮಾತ್ರ ಇರುವ ಪ್ರಾಥಮಿಕ ಶಾಲೆಗಳಿಗೆ ಪ್ರತ್ಯೇಕ ವಿದ್ಯಾಗಮ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. 6ನೇ ತರಗತಿ ಮಕ್ಕಳಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ತರಗತಿಗಳು ನಡೆಯಲಿವೆ. 7 ನೇ ತರಗತಿ ಮಕ್ಕಳಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರ ತರಗತಿಗಳು ನಡೆಯಲಿವೆ.

ವೇಳಾಪಟ್ಟಿ

ವೇಳಾಪಟ್ಟಿ

ಈ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಖ್ಯೆಗಳಿಗೆ ಅನುಗುಣವಾಗಿ ಏಳು ತಂಡಗಳನ್ನು ಮಾಡಲಾಗುತ್ತಿದ್ದು, ಬೆಳಿಗ್ಗೆ 10 ರಿಂದ 10.45, 10.45 ರಿಂದ 11.30 ಮತ್ತು 11.45 ರಿಂದ 12.30ರವರೆಗೆ ತರಗತಿಗಳು ನಡೆಯಲಿವೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

Recommended Video

Australia ಮಾಜಿ ಆಟಗಾರನ ಪ್ರಕಾರ ಭಾರತ ಈಗಲೂ ಗೆಲ್ಲಬಹುದು | Oneindia Kannada

English summary
Karnataka Vidyagama Scheme : Revised Time Table for Class 1 to 7th, 8th, 9th Schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X