ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಟಿ ವಿಡಿಯೋ ಬೆಂಗ್ಳೂರು ದಾಟಿ ದೆಹಲಿಗೆ: ರಾಹುಲ್ ಗೆ ರಾಸಲೀಲೆ ದೂರು

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಸಚಿವ ಎಚ್.ವೈ.ಮೇಟಿ ಅವರು ಮಹಿಳೆಯೊಬ್ಬರ ಜತೆ ಆಪ್ತವಾಗಿರುವಂಥ ವಿಡಿಯೋ ಇದೆ ಎಂದಿದ್ದ ಬಳ್ಳಾರಿಯ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ್, ಆ ವಿಡಿಯೋವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತೋರಿಸಲು ಬುಧವಾರ ದೆಹಲಿಗೆ ತೆರಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿರುವ ಐಎಎಸ್ ಸ್ನೇಹಿತರ ಮೂಲಕ ರಾಹುಲ್ ಗಾಂಧಿ ಭೇಟಿಗೆ ಪ್ರಯತ್ನಿಸಿರುವುದಾಗಿ ರಾಜಶೇಖರ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದರು. ಗೃಹಸಚಿವ-ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರ ಭೇಟಿಗೆ ಅವಕಾಶ ಕೇಳಿದೆ, ಆದರೆ ಅವರ ಬಳಿ ಇರುವವರು ಅವಕಾಶ ನೀಡಲಿಲ್ಲ. ಆದ್ದರಿಂದ ದೆಹಲಿಗೆ ಬರಬೇಕಾಯಿತು ಎಂದು ಅವರು ಹೇಳಿದರು.[ಸಿದ್ದು ಸರಕಾರದ ಕ್ಯಾಬಿನೆಟ್ ಸಚಿವರೊಬ್ಬರ ರಾಸಲೀಲೆ ಬಯಲು?]

Rahul Gandhi

ದೆಹಲಿಯಲ್ಲಿ ರಾಹುಲ್ ಭೇಟಿಯಾದ ನಂತರ ಅಥವಾ ಸಾಧ್ಯವಾಗದಿದ್ದರೂ ರಾಜಶೇಖರ್ ಅವರು ಸಚಿವ ಎಚ್.ವೈ.ಮೇಟಿ ಆಕ್ಷೇಪಾರ್ಹ ವಿಡಿಯೋ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸಚಿವರೊಂದಿಗೆ ಆಪ್ತವಾಗಿರುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಮಹಿಳೆ ಅನಾರೋಗ್ಯ ಕಾರಣಕ್ಕೆ ಆಸ್ಪತ್ರೆಗೆ ಸೇರಿದ್ದವರು ಮಂಗಳವಾರ ರಾತ್ರೋರಾತ್ರಿ ಅಲ್ಲಿಂದ ತೆರಳಿದ್ದಾರೆ.[ರಾಸಲೀಲೆ ಪ್ರಕರಣ, ಸಿಡಿ ಬಹಿರಂಗ ಪಡಿಸಿದರೆ ತಕ್ಷಣ ಕ್ರಮ: ಸಿಎಂ]

ಇಂಥದ್ದೊಂದು ವಿಡಿಯೋ ಇಡೀ ರಾಜ್ಯ ನೋಡುವುದು ಬೇಡ ಎಂದು ನನ್ನ ಉದ್ದೇಶವಾಗಿತ್ತು. ಆದರೆ ಈಗ ಅದನ್ನು ಜನರು ನೋಡಲೇ ಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಈ ಪ್ರಕರಣದಲ್ಲಿ ನನ್ನ ಹೆಸರು ಚಾಲ್ತಿಗೆ ಬರಬೇಕು ಎಂಬ ಉದ್ದೇಶ ಇಲ್ಲ. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು, ಅವರ ಬಂಡವಾಳ ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಅವರು ಹೇಳಿದರು.

English summary
Minister HY Meti Video scandal reached Delhi on Wednesday. RTI worker Rajashekhar went to Delhi to show the video to AICC vice president Rahul Gandhi. There is a possibility of video release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X