ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಜಾಹುಲಿ' ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದು ಯಾರು?

|
Google Oneindia Kannada News

ಬೆಂಗಳೂರು, ಆಗಸ್ಟ್‌ 01: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ಆಗಲಿವೆ ಎಂಬ ಚರ್ಚೆ ನಡೆದಿರುವಾಗಲೇ, ಸಿಎಂ ಯಡಿಯೂರಪ್ಪ ಅವರ ಬೆಂಬಲಿಗ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಇಡೀ ಬಿಜೆಪಿಯ ಚಿತ್ರಣವನ್ನು ಕೊಟ್ಟಿರುವಂತೆ ಮಾಡಿರುವ ವಿಡಿಯೋದಲ್ಲಿ, ರಾಜ್ಯ ಹಾಗೂ ಕೇಂದ್ರ ಬಿಜೆಪಿಯ ಹಲವು ನಾಯಕರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಎಂಬ ಚರ್ಚೆಗಳು ನಡೆದಿರುವಾಗಲೇ, ರಾಜ್ಯ ಬಿಜೆಪಿಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಈ ಎಲ್ಲವುಗಳ ಹಿನ್ನೆಲೆಯಲ್ಲಿ ವಿಡಿಯೋ ಕೂಡ ಮಹತ್ವ ಪಡೆದುಕೊಂಡಿದೆ. ರಾಜ್ಯ ಬಿಜೆಪಿ ನಾಯಕರು, ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡಲು ಪ್ರಯತ್ನ ನಡೆಸಿರುವುದು, ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಉಳಿದ ನಾಯಕರಿಗೆ ಇರುವ ಜನ ಬೆಂಬಲ, ಗೆಲ್ಲಿಸಿ ಕೊಡುವ ಸೀಟ್‌ಗಳು, ಹೀಗೆ ಅನೇಕ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.

ರಾಜ್ಯ ಬಿಜೆಪಿ ಉಪಾಧ್ಯಕ್ಷರ ಪಟ್ಟಕ್ಕೆ ಬಿಎಸ್ ವೈ ಪುತ್ರ ವಿಜಯೇಂದ್ರರಾಜ್ಯ ಬಿಜೆಪಿ ಉಪಾಧ್ಯಕ್ಷರ ಪಟ್ಟಕ್ಕೆ ಬಿಎಸ್ ವೈ ಪುತ್ರ ವಿಜಯೇಂದ್ರ

ಜೊತೆಗೆ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಿದರೆ ಮುಂದಾಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದಿರುವ ಅವರು, ನಾಲ್ಕು ಎಚ್ಚರಿಕೆಗಳನ್ನೂ ಕೊಟ್ಟಿದ್ದಾರೆ. ಇಡೀ ವಿಡಿಯೋ ಸಾರಾಂಶ ಇಲ್ಲಿದೆ.

ಯಡಿಯೂರಪ್ಪ ಅವರ ತಪ್ಪು!

ಯಡಿಯೂರಪ್ಪ ಅವರ ತಪ್ಪು!

ಡಿಸಿಎಂ ಲಕ್ಷ್ಮಣ ಸವದಿ ಯಾರು? ಎಂದು ವಿಡಿಯೋದಲ್ಲಿ ಪ್ರಶ್ನೆ ಮಾಡಿರುವ ನಂಜುಂಡಸ್ವಾಮಿ ಎಂಬುವರು ಮುಖ್ಯಮಂತ್ರಿಗಳ ಆಪ್ತ ಎಂದು ಹೇಳಿಕೊಂಡಿದ್ದಾರೆ. ಆಗಾಗ ಅವರು ಸಿಎಂ ಯಡಿಯೂರಪ್ಪ ಅವರ ಡಾಲರ್ಸ್ ಕಾಲನಿ ನಿವಾಸದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಮೊದಲು ಬಿಜೆಪಿ ಕಚೇರಿಯಲ್ಲಿಯೂ ನಂಜುಂಡಸ್ವಾಮಿ ಅವರು ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದರು.

ಅಖಂಡ ಕನ್ನಡಿಗರಿಗೆ ಮುಖ್ಯಮಂತ್ರಿ ಬಿಎಸ್‌ವೈ ಅವರ ಆಪ್ತ ನಂಜುಂಡಸ್ವಾಮಿ ಮಾಡುವ ನಮಸ್ಕಾರಗಳು, ಸೋತು ಸುಣ್ಣವಾಗಿದ್ದ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಸ್ಥಾನ ಕೊಡಲಾಗಿದೆ. ಹೀಗೆ ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಅವರನ್ನು ಎಂಎಲ್‌ಸಿ ಮಾಡಿರುವುದೇ ಸಿಎಂ ಯಡಿಯೂರಪ್ಪ ಅವರ ಮೊದಲನೇ ತಪ್ಪು ಎಂದು ನಂಜುಂಡಸ್ವಾಮಿ ಅವರು ವಿಡಿಯೋದಲ್ಲಿ ಮಾತನಾಡಿದ್ದಾರೆ.

ಒಂದು ಸೀಟ್ ಗೆಲ್ಲಿಸಿ

ಒಂದು ಸೀಟ್ ಗೆಲ್ಲಿಸಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಮೇಲೆಯೂ ನಂಜುಂಡಸ್ವಾಮಿ ಹರಿಹಾಯ್ದಿದ್ದಾರೆ. ಸಂತೋಷ್‌ಜೀ ಅವರಿಗೆ ಕರ್ನಾಟಕದ ಜನರ ಮೇಲೆ ಒಂದು ಚೂರು ಪ್ರೀತಿ ಇದ್ದರೆ ಇಂತಹ ಕೆಲಸಕ್ಕೆ ಕೈಹಾಕುವುದನ್ನು ಮೊದಲು ಬಿಡಬೇಕು. ಒಳಗೊಳಗೆ ಸ್ಕೆಚ್ ಹಾಕಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನ ಮಾಡುತ್ತಿರುವುದು ನೀವೇ ಅಂತಾ ನಮಗೆ ಗೊತ್ತು ಎಂದಿದ್ದಾರೆ.

ಸಂತೋಷ್‌ ಜೀ ಅವರೇ, ನಿಮಗೆ ತಾಕತ್ತಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಒಂದು ಸೀಟನ್ನು ಗೆಲ್ಲಿಸಿಕೊಂಡು ಬನ್ನಿ. ಸುಮ್ಮನೆ ಹೋಗಿ ಹೈಕಮಾಂಡ್‌ಗೆ ಚಾಡಿ ಹೇಳಿದರೆ ಇಲ್ಲಿ ಯಾರೂ ಕೇಳುವುದಿಲ್ಲ. ರಾಜ್ಯದ ಜನರು ಮುಠ್ಠಾಳರಲ್ಲ. ಯಡಿಯೂರಪ್ಪ ಅವರನ್ನು ಮೀರಿಸುವ ವ್ಯಕ್ತಿ-ಶಕ್ತಿ ರಾಜ್ಯ ಬಿಜೆಪಿಯಲ್ಲಿ ಯಾರೂ ಇಲ್ಲ, ಮುಂದೆ ಬರುವ ಲಕ್ಷಣಗಳೂ ಇಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸರ್ವಜನಾಂಗದ ನಾಯಕ. ಎಲ್ಲ ಸಮುದಾಯದ ಜನರಿಗೆ ಯಡಿಯೂರಪ್ಪ ಅವರು ಸಹಾಯ ಮಾಡಿದ್ದಾರೆ. ಅಂಥ ಯಡಿಯೂರಪ್ಪ ಅವರಿಗೆ ತೊಂದರೆ ಕೊಡಲು ಪ್ರಯತ್ನಿಸಿದರೆ, ಒಂದು ಗಜ ಪಡೆ ಅವರ ಹಿಂದಿದೆ ಎಂಬುದನ್ನು ಮರೆಯಬೇಡಿ ಎಂದು ನಂಜುಂಡಸ್ವಾಮಿ ಎಚ್ಚರಿಸಿದ್ದಾರೆ.

ಕೋವಿಡ್‌ ಸಂಕಷ್ಟದಲ್ಲಿ

ಕೋವಿಡ್‌ ಸಂಕಷ್ಟದಲ್ಲಿ

ಇಡೀ ರಾಜ್ಯ ಕೋವಿಡ್ ಸಂಕಷ್ಟವನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಕೋವಿಡ್‌ಗೆ ತುತ್ತಾಗಿ ಜನರು ಸಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರೇ ದೆಹಲಿಗೆ ಹೋಗಿ ಅಮಿತ್ ಶಾ ಜೀ, ನಡ್ಡಾ ಜೀ, ಜಾವಡೇಕರ್ ಹಾಗೂ ಮೋದಿ ಜೀ ಅವರ ತಮ್ಮ(ಸಹೋದರ)ನನ್ನು ಭೇಟಿ ಮಾಡಿ ಮಾತನಾಡಿಕೊಂಡು ಬಂದಿದ್ದೀರಿ ಎಂದಿದ್ದಾರೆ.

ನಿಮ್ಮ ಕ್ಷೇತ್ರವನ್ನೇ ಗೆಲ್ಲುವ ಯೋಗ್ಯತೆ ನಿಮಗಿಲ್ಲ. ನೀವು ಕರ್ನಾಟಕದ ಮುಖ್ಯಮಂತ್ರಿಯಾಗಿ ಜನಗಳ ಸೇವೆ ಮಾಡ್ತೀರಾ? ನಿಮ್ಮಿಂದ ಅದು ಆಗುತ್ತಾ? ಆ ತಾಕತ್ತು ನಿಮಗಿದೆಯಾ? ಯಾರೋ ಹೇಳ್ತಾರೆ ಅಂತಾ ಮೀಟಿಂಗ್ ಮಾಡುವುದು. ದೆಹಲಿಗೆ ಹೋಗುವುದು, ಮಾಡಿ ನೋಡೋಣ.

ರಾಜಾ ಹುಲಿ

ರಾಜಾ ಹುಲಿ

ಸಿಎಂ ಯಡಿಯೂರಪ್ಪಾ ಜೀ ಅವರು ರಾಜಾ ಹುಲಿ. ಅವರ ತಂಟೆಗೆ ಬಂದರೆ ನಿಮ್ಮ ಮರ್ಯಾದೆ ಮೂರು ಕಾಸಿಗೆ ಉಳಿಯಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪಾಜೀ ಇದ್ದರೆ ಮಾತ್ರ ಬಿಜೆಪಿ. ಗೆಲ್ಲೋದಕ್ಕೂ ಮುಂಚೆ ಯಡಿಯೂರಪ್ಪ ಬೇಕು. ಅವರಿಲ್ಲ ಅಂದರೆ ಆಗಲ್ಲ. ಈಗ ಗೆದ್ಮೇಲೆ ಯಡಿಯೂರಪ್ಪ ಬೇಡ ಅಂತಾ ಮೀಟಿಂಗ್ ಮಾಡ್ತೀರಾ? ನನಗೆ ಮಂತ್ರಿಸ್ಥಾನ ಕೊಟ್ಟಿಲ್ಲ ಅಂತಾ ಮೀಟಿಂಗ್ ಮಾಡ್ತೀರಾ? ಮಾಡಿ, ಮುಂದೆ ಅದ್ಹೇಗೆ ಗೆದ್ದು ಬರ್ತಿರೋ ಬನ್ನಿ ನೋಡೋಣ ಎಂದು ನಂಜುಂಡಸ್ವಾಮಿ ಹೇಳಿದ್ದಾರೆ.

ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು ಅಂತ ಸುಳ್ಳು ಹೇಳೋದು. ವಯಸ್ಸಾದರೂ ಮಂಡ್ಯದ ಹುಲಿಯದು. ಕಾವೇರಿ ನೀರು ಕುಡಿದಿರುವ ಗಂಡದು. ಛಾರ್ಮ್ ಹಂಗಿದೆ, ಶಕ್ತಿ, ಯುಕ್ತಿ, ಹಂಗಿದೆ. ನಿಮ್ಮ ಯಾರ ಕೈಯಲ್ಲಿ, ಏನೂ ಮಾಡಿಕೊಳ್ಳೋದಕ್ಕೆ ಆಗುವುದಿಲ್ಲ ಎಂದಿದ್ದಾರೆ.

ನಾಲ್ಕು ಸೀಟು ಗೆಲ್ಲಿಸಿ

ನಾಲ್ಕು ಸೀಟು ಗೆಲ್ಲಿಸಿ

ಸಂತೋಷ್ ಜೀ ಅವರೇ, ನೀವು ಹಿಂದುಗಡೆ ಏನೇನೊ ಫಿಟ್ಟಿಂಗ್ ಇಟ್ಟರೂ ಕರ್ನಾಟಕದ ಜನ ನಿಮ್ಮ ಮಾತಿಗೆ ಮರುಳಾಗಲ್ಲ. ನೀವು ಏನೇ ಮಾಡಿದರೂ ಯಡಿಯೂರಪ್ಪ ಅವರಿಗೆ ಏನೂ ಮಾಡ್ಕೊಳ್ಳೋಕೆ ಆಗಲ್ಲ. ಅದಿರಲಿ, ನೀವೂ ಎಷ್ಟು ದಿನಾ ಸಂಘಟನಾ ಕಾರ್ಯದರ್ಶಿಯಾಗಿ ಅಲ್ಲಿ ಇರ್ತಿರಿ ನೋಡೋಣ. ಕರ್ನಾಟಕದವರಿಗೆ ಎಲ್ಲರಿಗೂ ಗೊತ್ತಾಗಿದೆ. ಇಂತಹ ಕೋವಿಡ್ ಕಷ್ಟದಲ್ಲಿಯೂ ಯಡಿಯೂರಪ್ಪ ಅವರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದು.

ಆದರೆ ಕೇಂದ್ರದ ನಾಯಕರು ಬೇರೆ ರಾಜ್ಯಗಳಿಗೆ ಒಂದು ರೀತಿಯ ಅನುದಾನ ಕೊಡುವುದು, ನಮ್ಮ ರಾಜ್ಯಕ್ಕೆ ಅನುದಾನ ಸರಿಯಾಗಿ ಕೊಡುವುದಿಲ್ಲ. ಅಲ್ಲಿಯೇ ತಾರತಮ್ಯ ಮಾಡ್ತಾರೆ. ನಿಮಗೆ ಗೊತ್ತಾಗಿರಬೇಕಲ್ಲ?


ಆಮೇಲೆ ಯಡಿಯೂರಪ್ಪ ಸರಿಯಿಲ್ಲ ಅಂತೀರಲ್ಲಾ ಒಂದ್ ಸೀಟ್ ಗೆಲ್ಲಿಸಿಕೊಂಡು ಬನ್ನಿ ನೋಡೋಣ. ಲಕ್ಷ್ಮಣ ಸವದಿ ಅವರು ನಾಲ್ಕು ಸೀಟ್ ಗೆಲ್ಲಿಸಿಕೊಂಡು ಬರಲಿ, ಪ್ರಲ್ಹಾದ್ ಜೋಶಿ ನಾಲ್ಕು ಸೀಟ್ ಗೆಲ್ಲಿಸಿಕೊಂಡು ಬರಲಿ ಹಾಗೇ ನೀವು ಒಂದ್ ನಾಲ್ಕು ಸೀಟ್ ಗೆಲ್ಲಿಸಿಕೊಂಡು ಬನ್ನಿ. ಬರೀ ಪಿನ್ ಚುಚ್ಚೋದಲ್ಲ. ಆ ಪಿನ್‌ ಅನ್ನೇ ಮುರಿದು ಹಾಕ್ತೇವೆ ನಾವು. ಅಂತಹ ಗಜ ಪಡೆ ಇದೆ. ಇದು ಬಿಜೆಪಿ ಕಾರ್ಯಕರ್ತ ನಂಜುಂಡಸ್ವಾಮಿಯ ಎಚ್ಚರಿಕೆ ಎಂದು ಮಾತು ಮುಗಿಸಿದ್ದಾರೆ.

English summary
While there has been talk of significant developments in state politics, the video of a man claiming to be a supporter of CM Yeddyurappa has gone viral. In the video, which depicts the entire BJP, he has taken down many leaders of the state and central BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X