ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜ್ ಇನ್ನು ನೆನಪು ಮಾತ್ರ

Subscribe to Oneindia Kannada

ಬೆಂಗಳೂರು, ಮೇ 14: ಹಿರಿಯ ಪತ್ರಕರ್ತ ಗರುಡನಗಿರಿ ನಾಗರಾಜ್ ತಮ್ಮ 85ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ನ್ಯುಮೋನಿಯ ಕಾಯಿಲೆಯಿಂದ ಬಳಲುತಿದ್ದ ಅವರು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಜೆಪಿ ನಗರದಲ್ಲಿರುವ ಅವರ ಸ್ವಗೃಹದಲ್ಲಿ ಭಾನುವಾರ ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆವರೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.

 Vetarn journalist Garudanagiri Nagaraj (85) no more

ಹಾಸನ ಜಿಲ್ಲೆ ಗರುಡನಗಿರಿ ಹಳ್ಳಿಯಲ್ಲಿ ಜನಿಸಿದ ನಾಗರಾಜ ಓದಿನ ನಂತರ ಸಮಾಜ ಸೇವೆ ಹಾಗು ಪತ್ರಿಕೋದ್ಯಮವನ್ನು ವೃತ್ತಿಯಾಗಿಸಿಕೊಂಡಿದ್ದರು .ಜನವಾಣಿ ಪತ್ರಿಕೆಯಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಅವರು ಪ್ರಜಾಮತ ಪತ್ರಿಕೆಗೆ ಒಂದಷ್ಟು ಅವಧಿಗೆ ವರದಿಗಾರರಾಗಿದ್ದರು. ನಂತರ ಮೂರು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಪ್ರಭ ಪತ್ರಿಕೆಯಲ್ಲಿ ವರದಿಗಾರ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ನಂತರ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ಪುಸ್ತಕ ಪ್ರಕಟಣೆ ಹಾಗೂ ಗ್ರಾಮೀಣ ಪತ್ರಿಕೋದ್ಯಮ ತರಬೇತಿಗೆ ಒತ್ತು ನೀಡಿದ್ದರು .

ಸಣ್ಣ ಅವಧಿಗೆ ಕರ್ಮವೀರ ವಾರಪತ್ರಿಕೆ ಹಾಗೂ ಕಸ್ತೂರಿ ಮಾಸ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು.
ಕರ್ಮವೀರದಲ್ಲಿ ಪ್ರಕಟವಾಗುತ್ತಿದ್ದ ಅವರ 'ಪಾತಾಳಗರುಡಿ' ಅಂಕಣ ಬಹಳ ಜನಪ್ರಿಯವಾಗಿತ್ತು. ಅದೇ ಹೆಸರಿನಲ್ಲಿ ಈ ಅಂಕಣಗಳು ಪುಸ್ತಕ ರೂಪದಲ್ಲಿಯೂ ಹೊರಬಂದಿವೆ.

ಅವರ 'ಕಂಡಿದ್ದು ಕೇಳಿದ್ದು' ಕೃತಿ ಪತ್ರಿಕೋದ್ಯಮಕ್ಕೆ ಕಾಲಿಡುವ ವಿದ್ಯಾರ್ಥಿಗಳಿಗೆ ಒಂದು ಕೈಪಿಡಿಯಾಗಿದೆ. ಹೀಗೆ ಪತ್ರಿಕೋದ್ಯಮದ ಹಲವು ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ ನಾಗರಾಜ್ ಗೆ ರಾಜ್ಯೋತ್ಸವ ಪ್ರಶಸ್ತಿ ಟಿಎಸ್ಆರ್ ಪ್ರಶಸ್ತಿಗಳೂ ಸಂದಿವೆ. ಪತ್ನಿ, ಪುತ್ರ ಹಾಗೂ ಅಪಾರ ಅಭಿಮಾನಿಗಳು, ಮಿತ್ರರನ್ನು ಅವರು ಅಗಲಿದ್ದಾರೆ.

ಇನ್ನು ಗರುಡನಗಿರಿ ನಾಗರಾಜ್ ಸಾವಿಗೆ ಹಲವರು ಸಂತಾಪ ಸೂಚಿಸಿದ್ದಾರೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ "ಗರುಡನಗಿರಿ ಯವರು 'ನೈಜ' ಪತ್ರಕರ್ತ ಹೇಗಿರಬೇಕು ಎಂಬುದಕ್ಕೆ ಒಂದು ಉದಾಹರಣೆಯಾಗಿದ್ದರು," ಎಂದು ತಮ್ಮ ಫೇಸ್ಬುಕ್ಕಿನ್ನಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Vetarn journalist and former chairman of Karnataka Pathrika Academy Garudanagiri Nagaraj (85) no more. Nagaraj from Hassan district was a role model journalist died today morning.
Please Wait while comments are loading...