ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾವಿದರ ಬಳಿಯೇ ಉಳಿಯಲಿದೆ ವೆಂಕಟಪ್ಪ ಚಿತ್ರಶಾಲೆ

|
Google Oneindia Kannada News

ಬೆಂಗಳೂರು, ಜುಲೈ, 21: ಅಂತಿಮವಾಗಿ ಕಲಾವಿದರಿಗೆ ಜಯ ಸಿಕ್ಕಿದೆ. ವೆಂಕಟಪ್ಪ ಚಿತ್ರಶಾಲೆಯನ್ನು ಖಾಸಗಿಯವರು ವಹಿಸಿಕೊಳ್ಳುವ ನಿರ್ಧಾರಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ.

ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅನ್ವಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಿದ್ದ ತಸ್ವೀರ್ ಫೌಂಡೇಷನ್ ಕಲಾವಿದರ ಹೋರಾಟಕ್ಕೆ ಮಣಿದಿದ್ದು ನಿರ್ಧಾರದಿಂದ ಹಿಂದೆ ಸರಿಯಲು ಮುಂದಾಗಿದೆ. ಇದನ್ನು ಕಲಾವಿದರ ಹೋರಾಟಕ್ಕೆ ಸಿಕ್ಕ ಜಯ ಎಂದೇ ವಿಶ್ಲೇಷಿಸಬಹುದಾಗಿದೆ.[ಏನಿದು ವೆಂಕಟಪ್ಪ ಆರ್ಟ್ ಗ್ಯಾಲರಿ ವಿವಾದ?]

Venkatappa Art Gallery issue: Tasveer Foundation to withdraw its bid

ವೆಂಕಟಪ್ಪ ಆರ್ಟ್‌ ಗ್ಯಾಲರಿಗೂ ಮುನ್ನ ಬೆಂಗಳೂರಿನಲ್ಲಿ ಕಲೆ ಬಿಂಬಿಸುವ ಯಾವ ಕಟ್ಟಡಗಳು ಇರಲಿಲ್ಲ. 1971ರಲ್ಲಿ ಕಲಾವಿದರಾದ ಜಿ.ಎಸ್‌. ಶೆಣೈ, ಭಾಸ್ಕರ್‌ ರಾವ್‌, ರಮೇಶ್‌ ರಾವ್‌ ಮತ್ತು ಕೆಲವು ಕಲಾವಿದರು ಸೇರಿಕೊಂಡು ಈಗಿನ ಕುಂಬ್ಳೆ ವೃತ್ತದ ಸಮೀಪದ ಬೈಬಲ್‌ ಸೊಸೈಟಿ ಎದುರಿಗೆ ತಮ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಿದ್ದು ಗ್ಯಾಲರಿ ಆರಂಭಕ್ಕೆ ನಾಂದಿ ಹಾಡಿತು.

ಗ್ಯಾಲರಿಯನ್ನಿ ಖಾಸಗಿಯವರಿಗೆ ನೀಡುತ್ತಿರುವುದು ಖಾಸಗೀಕರಣ ಅಲ್ಲ ಇದೊಂದು ಒಪ್ಪಂದ ಎಂದು ಸರ್ಕಾರ ಹೇಳಿಕೊಳ್ಳುತ್ತ ಬಂದಿತ್ತು. ಗ್ಯಾಲರಿಯನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ ಸೀಮಿತ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು.[ನಾನಾ ವರ್ಣದಲ್ಲಿ ಕಂಗೊಳಿಸಿದ ಕೃಷ್ಣ]

ಯಾವ ಕಾರಣಕ್ಕೂ ಗ್ಯಾಲರಿಯನ್ನು ಖಾಸಗಿಯವರ ಸುಪರ್ದಿಗೆ ನೀಡಬಾರದು. ಕಲಾವಿದರ ಹಿತವನ್ನು ಬಲಿಕೊಡಬಾರದು ಎಂದು ಆಗ್ರಹಿಸಿ ಕಲಾವಿದರು ಸರಣಿ ಪ್ರತಿಭಟನೆಗಳನ್ನು ನಡೆಸಿದ್ದರು.

English summary
After five months of uncertainty following protests by artists against the adoption of the Venkatappa Art Gallery (VAG) by his Tasveer Foundation, art collector Abhishek Poddar has decided to withdraw from the project. This is a victory for all Artists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X