ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮ್ಮ ಮೆಟ್ರೋ'ದಲ್ಲಿ ಕನ್ನಡ ಕಡ್ಡಾಯಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೂಚನೆ!

|
Google Oneindia Kannada News

ಬೆಂಗಳೂರು, ಫೆ. 10: ರಾಜ್ಯದ ಆಡಳಿತದಲ್ಲಿ ಕನ್ನಡವನ್ನು ನಿರ್ಲಕ್ಷ ಮಾಡಲಾಗುತ್ತಿದೆ ಎಂಬ ಆರೋಪದ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಹತ್ವದ ಆದೇಶ ಮಾಡಿದ್ದಾರೆ. ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ವೆಂಕಯ್ಯ ನಾಯ್ಡು ಅವರು ಸೂಚಿಸಿದ್ದಾರೆ. ಕನ್ನಡವನ್ನು ಕರ್ನಾಟಕದಲ್ಲಿಯೇ ನಿರ್ಲಕ್ಷ ಮಾಡುತ್ತಿರುವುದು ಜನ ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ತ್ರಿಭಾಷಾ ಸೂತ್ರವನ್ನು ರಾಜ್ಯ ಅಳವಡಿಸಿಕೊಂಡಿದ್ದರೂ ಆಡಳಿತದಲ್ಲಿ ಕನ್ನಡವನ್ನು ನಿರ್ಲಕ್ಷ ಮಾಡಲಾಗುತ್ತಿದೆ. ಇದೇ ಪ್ರಶ್ನೆಯನ್ನು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಜಿ.ಸಿ. ಚಂದ್ರಶೇಖರ್ ಪ್ರಸ್ತಾಸಿದ್ದಾರೆ.

ತ್ರಿಭಾಷಾ ಸೂತ್ರದಂತೆ ಬೆಂಗಳೂರು ಮೆಟ್ರೋದಲ್ಲಿ ಕನ್ನಡವನ್ನು ಕಡ್ಡಾಯ ಮಾಡುವಂತೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಆಗ್ರಹಿಸಿದ್ದಾರೆ. ಇಂದು (ಫೆ.10) ರಾಜ್ಯಸಭಾ ಕಲಾಪದಲ್ಲಿ ಭಾವವಹಿಸಿ ಮಾತನಾಡುತ್ತಿದ್ದ ಚಂದ್ರಶೇಖರ್ ಅವರು ಬೆಂಗಳೂರಿನಲ್ಲಿ ಕನ್ನಡವನ್ನು ನಿರ್ಲಕ್ಷ ಮಾಡಲಾಗುತ್ತಿದೆ. ತ್ರಿಭಾಷಾ ಸೂತ್ರದಂತೆ ಬೆಂಗಳೂರು ಮೆಟ್ರೋದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಕೊಡಬೇಕು ಎಂದು ಮಾತನಾಡಿದರು.

Venkaiah Naidu has suggested that Kannada should be used in Bangalores Namma Metro

Recommended Video

'ನಾನೊಬ್ಬ ಭಾರತೀಯ ಮುಸಲ್ಮಾನ ಎನ್ನಲು ಹೆಮ್ಮೆಯಾಗುತ್ತದೆ'- ಗುಲಾಂ ನಬಿ ಆಜಾದ್‌ | Oneindia Kannada

ಜಿ.ಸಿ. ಚಂದ್ರಶೇಖರ್ ಅವರ ಪ್ರಸ್ತಾಪವನ್ನು ಒಪ್ಪಿದ ರಾಜ್ಯಸಭೆ ಸ್ಪೀಕರ್ ವೆಂಕಯ್ಯ ನಾಯ್ಡು ಅವರು, ತ್ರಿಭಾಷಾ ಸೂತ್ರದಂತೆ ಕನ್ನಡವನ್ನು ಕಡ್ಡಾಯಮಾಡಿ. ಬೇರೆ ರಾಜ್ಯಗಳಲ್ಲೂ ಅಯಾ ಭಾಷೆಗಳಲ್ಲೇ ಆಡಳಿತವಿರಲಿ ಎಂದು ಸ್ಪೀಕರ್ ವೆಂಕಯ್ಯ ನಾಯ್ಡು ಅವರು ಸೂಚನೆ ನೀಡಿದರು.

English summary
Rajya Sabha Speaker Venkaiah Naidu has suggested that Kannada should be used in Bangalore's 'Namma Metro'. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X