ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಬದಲಾವಣೆ ಸುದ್ದಿ; ನಡೆಯಿತು ಮಹತ್ವದ ಸಭೆ!

|
Google Oneindia Kannada News

ಬೆಂಗಳೂರು, ನವೆಂಬರ್ 02: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬದಲಾವಣೆಯಾಗಲಿದೆಯೇ?. ಕರ್ನಾಟಕ ಬಿಜೆಪಿಯಲ್ಲಿ ಆಗಾಗ ಈ ಪ್ರಶ್ನೆ ಕೇಳಿ ಬರುತ್ತಿದೆ. ಇದನ್ನು ತಳ್ಳಿ ಹಾಕುವ ನಾಯಕರ ಸಂಖ್ಯೆಯೂ ಪಕ್ಷದಲ್ಲಿಯೇ ದೊಡ್ಡದಿದೆ.

ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಮುಂದೇನು?. ಭಾನುವಾರ ಬೆಂಗಳೂರಿನಲ್ಲಿ ಈ ಕುರಿತು ಮಹತ್ವದ ಸಭೆಯೊಂದು ನಡೆದಿದೆ. ಯಡಿಯೂರಪ್ಪ ಬಳಿಕ ಲಿಂಗಾಯತ-ವೀರಶೈವ ಸಮುದಾಯದವೇ ಸಿಎಂ ಆಗಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ.

ಚುನಾವಣೆ ಬಳಿಕ ಬಿಜೆಪಿಯಲ್ಲಿ ಏನಾಗಲಿದೆ? ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ!ಚುನಾವಣೆ ಬಳಿಕ ಬಿಜೆಪಿಯಲ್ಲಿ ಏನಾಗಲಿದೆ? ಸುಳಿವು ಕೊಟ್ಟ ಸಿಎಂ ಯಡಿಯೂರಪ್ಪ!

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅಧ್ಯಕ್ಷತೆಯಲ್ಲಿ ಲಿಂಗಾಯತ-ವೀರಶೈವ ಸಮಾಜದ ಮುಖಂಡರ ಸಭೆ ನಡೆಯಿತು. ಸರ್ವಭೂಷಣ ಮಠದ ಮಲ್ಲಿಕಾರ್ಜುನ ದೇವರು ಸೇರಿದಂತೆ ಸಮಾಜದ ವಿವಿಧ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿಯಲ್ಲೇ ಯಡಿಯೂರಪ್ಪ ಓಡಿಸುವ ಹುನ್ನಾರ! ಬಿಜೆಪಿಯಲ್ಲೇ ಯಡಿಯೂರಪ್ಪ ಓಡಿಸುವ ಹುನ್ನಾರ!

"ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಗನ ಉದ್ಧಾರಕ್ಕಾಗಿ ಸಮಾಜವನ್ನು ಬಲಿಕೊಡುತ್ತಿದ್ದಾರೆ. ಬಿ. ವೈ. ವಿಜಯೇಂದ್ರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ" ಎಂದು ಹೈಕೋರ್ಟ್‌ನ ಹಿರಿಯ ವಕೀಲ ಗಂಗಾಧರ ಅವರು ಹೇಳಿದರು.

'ನರೇಂದ್ರ ಮೋದಿ, ಯಡಿಯೂರಪ್ಪ ಏನು ಎಳೆ ಕಡಸುಗಳಾ?''ನರೇಂದ್ರ ಮೋದಿ, ಯಡಿಯೂರಪ್ಪ ಏನು ಎಳೆ ಕಡಸುಗಳಾ?'

ಸಮಾಜದ ಮೊತ್ತೊಬ್ಬರನ್ನು ಪರಿಗಣಿಸಿ

ಸಮಾಜದ ಮೊತ್ತೊಬ್ಬರನ್ನು ಪರಿಗಣಿಸಿ

ಕಾರಣಾಂತರದಿಂದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಆ ಸ್ಥಾನಕ್ಕೆ ಲಿಂಗಾಯತ-ವೀರಶೈವ ಸಮಾಜದ ಮತ್ತೊಬ್ಬ ಗಟ್ಟಿ ನಾಯಕನನ್ನು ಬಿಜೆಪಿ ಹೈಕಮಾಂಡ್ ಪರಿಗಣಿಸಬೇಕೆಂದು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಸಂವಾದದಲ್ಲಿ ಪಾಲ್ಗೊಂಡರು

ಸಂವಾದದಲ್ಲಿ ಪಾಲ್ಗೊಂಡರು

ಲಿಂಗಾಯತ-ವೀರಶೈವ ಸಮನ್ವಯ ವೇದಿಕೆ ವತಿಯಿಂದ 'ಲಿಂಗಾಯತ-ವೀರಶೈವರ ಭವಿಷ್ಯದ ರಾಜಕೀಯ ನಾಯಕರು ಯಾರು?" ಎಂಬ ಸಂವಾದದಲ್ಲಿ ಸಮಾಜದ ಅನೇಕ ಮುಖಂಡರು ಪಾಲ್ಗೊಂಡರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅಧ್ಯಕ್ಷತೆಯಲ್ಲಿ ಈ ಸಂವಾದ ನಡೆಯಿತು.

ಸಮುದಾಯ ಒಪ್ಪಿಕೊಂಡಿದ್ದು ಏಕೆ?

ಸಮುದಾಯ ಒಪ್ಪಿಕೊಂಡಿದ್ದು ಏಕೆ?

ಜೆಡಿಎಸ್ ದ್ರೋಹ ಬಗೆದಿದೆ ಎಂಬ ಕಾರಣಕ್ಕಾಗಿ ಅನುಕಂಪದ ಆಧಾರದಲ್ಲಿ ಯಡಿಯೂರಪ್ಪ ಅವರನ್ನು ಸಮುದಾಯದ ನಾಯಕ ಎಂದು ಒಪ್ಪಿಕೊಂಡಿತು. ಡಿಸೆಂಬರ್‌ನಲ್ಲಿ ಅವರ ನಾಯಕತ್ವ ಕೊನೆಯಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಸಂವಾದದಲ್ಲಿ ಚರ್ಚೆ ನಡೆಯಿತು.

ಹೈಕಮಾಂಡ್ ಚಿಂತನೆ ನಡೆಸಬೇಕು

ಹೈಕಮಾಂಡ್ ಚಿಂತನೆ ನಡೆಸಬೇಕು

ಮುಂದಿನ ದಿನಗಳಲ್ಲಿ ಮೌಲ್ಯಯುತ ಹಾಗೂ ಗಟ್ಟಿ ನಾಯಕರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಕೂಡ ಚಿಂತನೆ ನಡೆಸಬೇಕೆಂಬ ವಿಷಯ ಸಭೆಯಲ್ಲಿ ತೀರ್ಮಾನವಾಯಿತು.

Recommended Video

ಒಬ್ಬರೇ ಬಸ್ stand ಅಲ್ಲಿ ಇದ್ರೆ ಹುಷಾರು !!! | Oneindia Kannada
ಹೇಳಿಕೆ ನೀಡುವುದು ತಪ್ಪೇ

ಹೇಳಿಕೆ ನೀಡುವುದು ತಪ್ಪೇ

ಯತ್ನಾಳ್ ಅವರ ನೇರ, ನಿಷ್ಠುರ ಹೇಳಿಕೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಹೇಳಿಕೆಗಳು ಹೇಗೆ ವಿವಾದ ಆಗಲು ಸಾಧ್ಯ?. ವಿವಾದಗಳು ಇಲ್ಲದೆ ನಾಯಕನಾಗುವುದಾದರೂ ಹೇಗೆ? ಎಂದು ಸಭೆಯಲ್ಲಿ ಚರ್ಚಿಸಲಾಯಿತು.

English summary
Veerashaiva Lingayat community leaders meeting in Bengaluru to discuss about community next move if changing B. S. Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X