ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ನಲ್ಲಿ ನಡುಕ ಹುಟ್ಟಿಸಿದ ವೀರಪ್ಪ ಮೊಯ್ಲಿ ಟ್ವೀಟ್!

|
Google Oneindia Kannada News

Recommended Video

ವೀರಪ್ಪ ಮೊಯ್ಲಿ ಕಾಂಗ್ರೆಸ್ ಮೇಲೆ ಮಾಡಿದ ವಿವಾದಾತ್ಮಕ ಟ್ವೀಟ್ | Oneindia Kannada

ಬೆಂಗಳೂರು, ಮಾರ್ಚ್ 16: ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ಸಿಗ ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಹಣಬಲ ಬಳಸಲಾಗುತ್ತಿದೆ ಎಂದು ಮಾಡಿರುವ ಟ್ವೀಟ್ ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ!

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

"ರಾಜಕೀಯದಲ್ಲಿ ಹಣಬಲ ಬಳಕೆಯಾಗುತ್ತಿರುವುದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಬೇಕಿದೆ" ಎಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಮೊಯ್ಲಿ, ತಮ್ಮ ಟ್ವೀಟ್ ಅನ್ನು ರಾಹುಲ್ ಗಾಂಧಿ, ಐಎನ್ ಸಿ ಇಂಡಿಯಾ, ಐಎನ್ ಸಿ ಕರ್ನಾಟಕ ಟ್ವಿಟ್ಟರ್ ಖಾತೆಗಳಿಗೂ ಟ್ಯಾಗ್ ಮಾಡಿದ್ದಾರೆ.

ರಾಜ್ಯದಲ್ಲಿ ಲೋಕೋಪಯೋಗಿ ಸಚಿವ(ಎಚ್ ಸಿ ಮಹದೇವಪ್ಪ)ರು ಮತ್ತು ರಸ್ತೆ ಗುತ್ತಿಗೆದಾರರ ನಡುವೆ ಹೊಂದಾಣಿಕೆ ನಡೆಯುತ್ತಿದೆ ಎಂದು ನೇರವಾಗಿ ಆರೋಪಿಸಿರುವ ಮೊಯ್ಲಿ, ಈ ಕುರಿತು ಗಮನ ಹರಿಸುವಂತೆ ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದಾರೆ.

ಟಿ.ನರಸಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಸಿ. ಮಹದೇವಪ್ಪ ಈ ಬಾರಿ ತಮ್ಮ ಕ್ಷೇತ್ರವನ್ನು ಮಗ ಸುನಿಲ್ ಬೋಸ್ ಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ. ಇತ್ತ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ ಅವರೂ ಟಿಕೇಟ್ ಆಕಾಂಕ್ಷಿ. ಆದರೆ ಹೈಕಮಾಂಡ್ ಮೊಯ್ಲಿ ಅವರ ಪುತ್ರನಿಗೆ ಟಿಕೇಟ್ ನೀಡಲು ಹಿಂದೇಟು ಹಾಕುತ್ತಿದೆ ಎಂಬ ವದಂತಿಯೂ ಇರುವುದರಿಂದ ಮೊಯ್ಲಿ ಮುನಿಸಿಕೊಂಡಂತಿದೆ.

ಯಥಾವತ್ ಟ್ವೀಟ್ ಅನ್ನು ಅವರ ಪುತ್ರ ಹರ್ಷ ಮೋಯ್ಲಿ ಸಹ ಮಾಡಿದ್ದರು.

ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಮೋಯ್ಲಿ, 'ನನಗೂ ಆ ಟ್ವೀಟ್ ಗೂ ಯಾವುದೇ ಸಂಬಂಧವಿಲ್ಲ. ನನ್ನ ಮಗನೂ ಆ ರೀತಿ ಟ್ವೀಟ್ ಮಾಡಿಲ್ಲ. ಆ ಟ್ವೀಟ್ ಅನ್ನು ತಕ್ಷಣವೇ ತೆಗೆದುಹಾಕಲಾಗುವುದು' ಎಂದಿದ್ದಾರೆ.

English summary
A tweet by senior Congressman, Veerappa Moily has raised eyebrows. While slamming the process in which candidates are selected, he came down heavily on the role of money power in politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X