ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಪಿ ಸಮೀಕ್ಷೆ ಬಿಜೆಪಿಗೆ 17 ಸೀಟು, ಮಂಡ್ಯದಲ್ಲಿ ಸುಮಲತಾಗೆ ಜಯ!

|
Google Oneindia Kannada News

Recommended Video

Lok Sabha Elections 2019 : ವಿಡಿಪಿ ಸಮೀಕ್ಷೆ ಬಿಜೆಪಿಗೆ 17 ಸೀಟು

ಬೆಂಗಳೂರು, ಮಾರ್ಚ್ 31 : ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಬಿಜೆಪಿ ರಾಜ್ಯದಲ್ಲಿ 17 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದೆ.

ವಿಡಿಪಿ ಅಸೋಸಿಯೇಟ್ಸ್‌ #NationalTrackerPoll ಹೆಸರಿನಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಬಿಜೆಪಿ 232 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಉತ್ತರ ಪ್ರದೇಶದಲ್ಲಿ ಮತ್ತಷ್ಟು ಪರಿಶ್ರಮ ಹಾಕಿದರೆ ಬಿಜೆಪಿ ದೇಶದಲ್ಲಿ 250 ಸ್ಥಾನಗಳಿಸಬಹುದು ಎಂದು ಸಮೀಕ್ಷಾ ವರದಿ ತಿಳಿಸಿದೆ.

ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಜೆಡಿಎಸ್‌ಗೆ 1 ಸ್ಥಾನ!ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಜೆಡಿಎಸ್‌ಗೆ 1 ಸ್ಥಾನ!

ಕರ್ನಾಟಕದ ಈ ಬಾರಿಯ ಚುನಾವಣೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದು, ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ. ಕಾಂಗ್ರೆಸ್‌ 21, ಜೆಡಿಎಸ್ 7 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ.

ಟುಡೇಸ್ ಚಾಣಕ್ಯ ಚುನಾವಣಾ ಸಮೀಕ್ಷೆ ನಡೆಸಿಲ್ಲ : ಸುಳ್ಳು ಸುದ್ದಿ ನಂಬಬೇಡಿಟುಡೇಸ್ ಚಾಣಕ್ಯ ಚುನಾವಣಾ ಸಮೀಕ್ಷೆ ನಡೆಸಿಲ್ಲ : ಸುಳ್ಳು ಸುದ್ದಿ ನಂಬಬೇಡಿ

ಸಮೀಕ್ಷೆಗಳ ಪ್ರಕಾರ ಬಿಜೆಪಿ ರಾಜ್ಯದಲ್ಲಿ 17 ಸ್ಥಾನಗಳಲ್ಲಿ ಜಯಗಳಿಸಲಿದೆ. ಮಂಡ್ಯ ಕ್ಷೇತ್ರದ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಸಮೀಕ್ಷೆಯ ಪ್ರಕಾರ ಸುಮಲತಾ ಅಂಬರೀಶ್ ಅವರು ಜಯಗಳಿಸಲಿದ್ದಾರೆ.

ಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿ

ಯಾರಿಗೆ ಎಷ್ಟು ಸೀಟು?

ಯಾರಿಗೆ ಎಷ್ಟು ಸೀಟು?

ವಿಡಿಪಿ ಅಸೋಸಿಯೇಟ್ಸ್‌ #NationalTrackerPoll ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 8, ಜೆಡಿಎಸ್ 2 ಮತ್ತು ಇತರ ಅಭ್ಯರ್ಥಿ 1 ಕ್ಷೇತ್ರ (ಮಂಡ್ಯ)ದಲ್ಲಿ ಜಯಗಳಿಸಲಿದ್ದಾರೆ.

ಯಾರಿಗೆ ಎಷ್ಟು ಮತ?

ಯಾರಿಗೆ ಎಷ್ಟು ಮತ?

ವಿಡಿಪಿ ಅಸೋಸಿಯೇಟ್ಸ್‌ ಸಮೀಕ್ಷೆ ಪ್ರಕಾರ ಬಿಜೆಪಿ ಶೇ 45.2, ಕಾಂಗ್ರೆಸ್ 39.9 ಮತ್ತು ಜೆಡಿಎಸ್ 14.1ರಷ್ಟು ಮತಗಳನ್ನು ಪಡೆಯಲಿವೆ. ಇತರರು ಶೇ 7.8ರಷ್ಟು ಮತಗಳನ್ನು ಪಡೆಯಲಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಇಬ್ಬರ ಮತಗಳಿಕೆ ಶೇ 47ರಷ್ಟಾಗಲಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ, ಜೆಡಿಎಸ್‌ 7 ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. 28 ಕ್ಷೇತ್ರಗಳ ಪೈಕಿ ಮೈತ್ರಿಕೂಟ 10 ಸ್ಥಾನಗಳಲ್ಲಿ ಜಯಗಳಿಸದೆ.

ಸುಮಲತಾಗೆ ಜಯ

ಸುಮಲತಾಗೆ ಜಯ

ಮಂಡ್ಯ ಕ್ಷೇತ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಮಾಜಿ ಸಚಿವ ದಿ.ಅಂಬರೀಶ್ ಪತ್ನಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಜೆಪಿಯೂ ಅವರಿಗೆ ಬೆಂಬಲ ನೀಡಿದೆ. ಅವರು ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ರಾಜ್ಯದಲ್ಲಿ ಯಾರಿಗೆ ಎಷ್ಟು ಸೀಟು?

ವಿಡಿಪಿ ಅಸೋಸಿಯೇಟ್ಸ್‌ #NationalTrackerPoll ಸಮೀಕ್ಷೆಯ ಫಲಿತಾಂಶವನ್ನು ಟ್ವಿಟರ್‌ನಲ್ಲಿಯೂ ಹಾಕಿದೆ.

English summary
VDPAssociates NationalTrackerPoll survey predicted that BJP will get 17 seats in Karnataka out of 28 seat. BJP supported independent candidate Sumalatha will won in Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X