ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕತ್ತೆಗೆ ರಾಷ್ಟ್ರಪ್ರಾಣಿ ಗೌರವ, ಪ್ರೇಮಿಗಳಿಗೆ ರಜೆ': ವಾಟಾಳ್ ನಾಗರಾಜ್ ಪ್ರಣಾಳಿಕೆ

By Manjunatha
|
Google Oneindia Kannada News

ಬೆಂಗಳೂರು, ಮೇ 02: ವಿಕಟ ರಾಜಕಾರಣಿ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಚಿತ್ರ ವಿಚಿತ್ರ ಭರವಸೆಗಳನ್ನು ಅವರು ನೀಡಿದ್ದಾರೆ.

ಚಾಮರಾಜನಗರದಿಂದ ತಮ್ಮ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ಚುನಾವಣೆಗೆ ನಿಂತಿರುವ ವಾಟಾಳ್ ನಾಗರಾಜ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಚಿತ್ರ ವಿಚಿತ್ರ ಭರವಸೆಗಳೇ ತುಂಬಿವೆ.

ಚಾಮರಾಜನಗರದಿಂದಲೇ ಸ್ಪರ್ಧಿಸುವೆ: ವಾಟಾಳ್ ನಾಗರಾಜ್ಚಾಮರಾಜನಗರದಿಂದಲೇ ಸ್ಪರ್ಧಿಸುವೆ: ವಾಟಾಳ್ ನಾಗರಾಜ್

ವಾಟಾಳ್ ನಾಗರಾಜ್ ಅವರು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಇಂತಿವೆ ನೋಡಿ

Vatal Nagaraj releases his party manifesto

* ಕತ್ತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿಸುತ್ತೇವೆಮ ಕತ್ತೆ ಅಭಿವೃದ್ಧಿಗೆ ಮಂಡಳಿ ರಚಿಸುತ್ತೇವೆ.
* ಪ್ರೇಮಿಗಳ ದಿನದಂದು ರಜೆ ಘೋಷಿಸುತ್ತೇವೆ, ಪ್ರೇಮ ವಿವಾಹಕ್ಕೆ 50000 ಪ್ರೋತ್ಸಾಹ ಧನ ನೀಡುತ್ತೇವೆ.
* ಕನ್ನಡ ಬಾವುಟವನ್ನು ಕೆಂಪು ಕೋಟೆ ಮೇಲೆ ಹಾರಿಸುವುದು
* ಎಮ್ಮೆಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವುದು
* ಹೆಲ್ಮೆಟ್ ಕಡ್ಡಾಯ ನಿಯಮವನ್ನು ತೆಗೆದು ಹಾಕುವುದು

ಹೀಗೆ ಇನ್ನೂ ಹಲವು ಚಿತ್ರ ವಿಚಿತ್ರ ಭರವಸೆಗಳು ವಾಟಾಳ್ ಅವರ ಪ್ರಣಾಳಿಕೆಯಲ್ಲಿವೆ.

English summary
Vatal Nagaraj released his party kannada Chaluvali Vatal Paksha's manifesto today. He assured to give holiday on valentines day, will make Donkey as national animal and many other strange assurence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X