ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮ್ಮ ಸಂಸದರಿಗೆ ಮಾನ ಮರ್ಯಾದೆ ಇಲ್ಲ'

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26 : ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವ ರಾಜ್ಯದ ಸಂಸದರ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಸಂಸದರಿಗೆ ಮಾನ ಮರ್ಯಾದೆ ಇಲ್ಲ' ಎಂದು ಅವರು ಟೀಕಿಸಿದ್ದಾರೆ.

ಟೌನ್‌ಹಾಲ್ ಬಳಿಯ ಪ್ರತಿಭಟನೆಗೆ ಎತ್ತಿನಗಾಡಿಯಯಲ್ಲಿ ಹೊರಡುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, 'ನಮ್ಮ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರಿಗೆ ಮಾನ ಮರ್ಯಾದೆ ಇಲ್ಲ. ಸಂಸದರು, ರಾಜ್ಯಸಭಾ ಸದಸ್ಯರು ರಾಜೀನಾಮೆ ಕೊಡಬೇಕು' ಎಂದು ಒತ್ತಾಯಿಸಿದರು. [ಬಂದ್ ಬಗ್ಗೆ ವಾಟಾಳ್ ನಾಗರಾಜ್ ಸಂದರ್ಶನ]

vatal nagaraj

'ನಮ್ಮ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದರೆ ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸಬಹುದು. ಆದರೆ, ನಮ್ಮ ಸಂಸದರು ಏನು ಮಾಡುತ್ತಿಲ್ಲ. ಮರ್ಯಾದೆ ಇದ್ದರೆ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರು ರಾಜೀನಾಮೆ ನೀಡಿ ಪಕ್ಷಾತೀತವಾಗಿ ಹೋರಾಟಕ್ಕೆ ಧುಮಕಬೇಕು' ಕರೆ ನೀಡಿದರು. [ಕರ್ನಾಟಕ ಬಂದ್ ಕ್ಷಣ-ಕ್ಷಣದ ಮಾಹಿತಿ]

ಕರ್ನಾಟಕ ಬಂದ್‌ಗೆ ಬೆಂಬಲ ನೀಡದ ಕರಾವಳಿ ಭಾಗದ ಜನರ ಬಗ್ಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, 'ಕರಾವಳಿ ಭಾಗದ ಜನರು ಹಿಂದಿನಿಂದಲೂ ಹಾಗೆಯೇ. ಅವರಿಗೆ ಕಣ್ಣೀರು ಗೊತ್ತಿಲ್ಲ, ಮಾನವೀಯತೆ ಇಲ್ಲ. ಉತ್ತರ ಕರ್ನಾಟಕದ ಜನರ ಕಷ್ಟ ಏನು ಎನ್ನುವುದು ಅವರಿಗೆ ತಿಳಿದಿಲ್ಲ. ಬಂದ್‍ಗೆ ಬೆಂಬಲ ಸೂಚಿಸಿದ್ದರೆ ಅವರಿಗೆ ಗೌರವ ಬರುತಿತ್ತು' ಎಂದರು.

ಗುದ್ದಲಿ ಪೂಜೆ ಮಾಡುತ್ತೇವೆ : 'ಕಳಸಾ-ಬಂಡೂರಿ ಯೋಜನೆಗಾಗಿ ಅಕ್ಟೋಬರ್ 10ರಂದು ಗುದ್ದಲಿ ಚಳವಳಿ ಆರಂಭಿಸಲಾಗುತ್ತದೆ. ಹುಬ್ಬಳ್ಳಿಯಿಂದ ಗೋವಾ ಗಡಿವರೆಗೆ ಗುದ್ದಲಿ ಚಳವಳಿ ನಡೆಸಲಾಗುತ್ತದೆ. ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ, ಮತ್ತೊಮ್ಮೆ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇವೆ' ಎಂದು ವಾಟಾಳ್ ಹೇಳಿದರು.

English summary
Kannada outfits have called for a karnataka bandh for Kalsa-Banduri drinking water project on September 26. Kannada Chalavali Vatal Paksha president Vatal Nagaraj demands for MPs resignation who are silent in the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X