ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಮೇ 22ರಿಂದ 18-44 ವರ್ಷದವರಿಗೆ ಲಸಿಕೆ

|
Google Oneindia Kannada News

ಬೆಂಗಳೂರು, ಮೇ 21; ಕರ್ನಾಟಕ ಸರ್ಕಾರ 18-44 ವಯೋಮಿತಿಯ ಜನರಿಗೆ ಮೇ 22ರಿಂದ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದೆ. ಲಸಿಕೆ ಕೊರತೆ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಲಸಿಕಾಕರಣ ಸ್ಥಗಿತಗೊಳಿಸಲಾಗಿತ್ತು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್‌ ಮಾಡಿದ್ದಾರೆ. ಮೇ 15ರಂದು ನಡೆದ ರಾಜ್ಯಮಟ್ಟದ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿದಂತೆ ಲಸಿಕೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

ದೇಶಾದ್ಯಂತ ಇಲ್ಲಿಯವರೆಗೆ 21 ಕೋಟಿ ಕೊರೊನಾ ಲಸಿಕೆ ವಿತರಣೆದೇಶಾದ್ಯಂತ ಇಲ್ಲಿಯವರೆಗೆ 21 ಕೋಟಿ ಕೊರೊನಾ ಲಸಿಕೆ ವಿತರಣೆ

ಮೇ 22ರ ಶನಿವಾರದಿಂದಲೇ 18-44 ವರ್ಷದೊಳಗಿನ ವಯೋಮಾನದವರಿಗೆ ಕೊರೊನಾ ಲಸಿಕೆ ವಿತರಣೆ ಪುನರಾರಂಭಲಿದೆ. ಮೊದಲಿಗೆ ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಮುಂದಿನ ದಿನಗಳಲ್ಲಿ ಆದ್ಯತೆ ಗುಂಪುಗಳಿಗೆ ಲಸಿಕೆ ನೀಡಲಾಗುವುದು.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು 3 ತಿಂಗಳ ಬಳಿಕ ಲಸಿಕೆ: ಕೇಂದ್ರ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು 3 ತಿಂಗಳ ಬಳಿಕ ಲಸಿಕೆ: ಕೇಂದ್ರ

18-44 ವರ್ಷದವರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದ್ದರು. ಆದರೆ ಲಸಿಕೆ ಕೊರತೆ ಎದುರಾದ ಕಾರಣ ಮೇ 14ರಿಂದ ಲಸಿಕೆ ನೀಡುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.

2ನೇ ಹಂತದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಹೈದರಾಬಾದ್‌ಗೆ ಆಗಮನ2ನೇ ಹಂತದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಹೈದರಾಬಾದ್‌ಗೆ ಆಗಮನ

ಮುಂಚೂಣಿ ಕಾರ್ಯಕರ್ತರು

ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಸರ್ಕಾರಿ ಸಾರಿಗೆ ಸಿಬ್ಬಂದಿಗಳು, ಆಟೋ ಮತ್ತು ಕ್ಯಾಬ್ ಚಾಲಕರು, ಅಂಚೆ ಇಲಾಖೆ ಸಿಬ್ಭಂದಿಗಳು, ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ ಮುಂಚೂಣಿ ಕಾರ್ಯಕರ್ತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಆದ್ಯತೆಯ ಗುಂಪು ಯಾವುದು

ಆದ್ಯತೆಯ ಗುಂಪು ಯಾವುದು

ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಮುಂದಿನ ದಿನಗಳಲ್ಲಿ ಆದ್ಯತೆ ಗುಂಪುಗಳಿಗೆ ಲಸಿಕೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಆದ್ಯತೆಯ ಗುಂಪುಗಳಲ್ಲಿ ಆರ್‌ಎಸ್‌ಕೆ ಕೆಲಸಗಾರರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು, ಸ್ವಧಾರ್ ಗೃಹ ವಾಸಿಗಳು ಮತ್ತು ರಾಜ್ಯ ಮಹಿಳಾ ನಿಲಯವಾಸಿಗಳು (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ), ಎಚ್‌ಎಎಲ್ ಸಂಸ್ಥೆಯ ಸಿಬ್ಬಂದಿಗಳು ಸೇರಿದ್ದಾರೆ.

ಉಚಿತವಾಗಿ ಲಸಿಕೆ ನೀಡಿಕೆ

ಉಚಿತವಾಗಿ ಲಸಿಕೆ ನೀಡಿಕೆ

ಕರ್ನಾಟಕ ಸರ್ಕಾರ 18-44 ವಯೋಮಿತಿ ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಈಗಾಗಲೇ ಘೋಷಣೆ ಮಾಡಿದೆ. ಇದಕ್ಕಾಗಿ ಲಸಿಕೆ ಉತ್ಪಾದಕ ಕಂಪನಿಗಳಿಂದ ಸರ್ಕಾರ ನೇರವಾಗಿ ಲಸಿಕೆಯನ್ನು ಖರೀದಿ ಮಾಡುತ್ತಿದೆ. ಕೋವಿನ್, ಆರೋಗ್ಯ ಸೇತು ಅಪ್ಲಿಕೇಶನ್‌ ಮೂಲಕ ಜನರು ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಬಹುದಾಗಿದೆ.

Recommended Video

MIG 21 Crashed, ಪಂಜಾಬ್ ನಲ್ಲಿ ಭಾರತೀಯ ವಾಯುಪಡೆ ಯುದ್ದ ವಿಮಾನ ಅಪಘಾತಕ್ಕೀಡಾಗಿದೆ! | Oneindia Kannada
2 ಲಕ್ಷ ಡೋಸ್ ಲಸಿಕೆ ಆಗಮನ

2 ಲಕ್ಷ ಡೋಸ್ ಲಸಿಕೆ ಆಗಮನ

ಕರ್ನಾಟಕ ಸರ್ಕಾರ ನೇರವಾಗಿ ಉತ್ಪಾದಕರಿಂದ ಖರೀದಿಸುತ್ತಿರುವ ಲಸಿಕೆಗಳ ಪೈಕಿ2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯ ಮತ್ತೊಂದು ಕಂತು ರಾಜ್ಯಕ್ಕೆ ಲಭ್ಯವಾಗಿದೆ. ಈವರೆಗೂ 9,50,000 ಕೋವಿಶೀಲ್ಡ್, 1,44,000 ಕೋವ್ಯಾಕ್ಸಿನ್ ಸೇರಿ ಒಟ್ಟು 10,94,000 ಡೋಸ್ ಕಂಪನಿಗಳಿಂದ ಪೂರೈಕೆಯಾಗಿದೆ. ಕೇಂದ್ರ ಸರ್ಕಾರದಿಂದ ಒಟ್ಟು 1,11,24,470 ಡೋಸ್ ಪೂರೈಕೆಯಾಗಿದೆ.

English summary
Karnataka government announced that it will resume the process of vaccination for people in the 18-44 age group from May 22, 2021. Identified frontline workers and priority groups will be vaccinated first.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X