ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ನೀಡುವಿಕೆಯಲ್ಲಿ ಉತ್ತರ ಪ್ರದೇಶ ನಂಬರ್ 1: ಕರ್ನಾಟಕ?

|
Google Oneindia Kannada News

ಕೇರಳ ಹೊರತಾಗಿ ದೇಶದ ಇತರ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಕೇರಳದಲ್ಲಿ ದಿನಂಪ್ರತಿ ಹೊಸ ಕೇಸುಗಳ ಸಂಖ್ಯೆ ಹತ್ತು ಸಾವಿರದಿಂದ ಕಮ್ಮಿಗೆ ಇಳಿಯುತ್ತಿಲ್ಲ. ಸಕ್ರಿಯ ಪ್ರಕರಣದಲ್ಲೂ ಕೇರಳ ಮೊದಲ ಸ್ಥಾನದಲ್ಲಿದೆ. ಈ ಪೈಕಿ ಕರ್ನಾಟಕ ಐದನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಅಕ್ಟೋಬರ್ ಹನ್ನೊಂದರ ವರದಿಯ ಪ್ರಕಾರ 10,183 ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ 1,11,676, ಇದಾದ ನಂತರ ಮಹಾರಾಷ್ಟ್ರದಲ್ಲಿ 37,043, ತಮಿಳುನಾಡಿನಲ್ಲಿ 16,130 ಮತ್ತು ಮಿಜೋರಾಂನಲ್ಲಿ 14,295 ಸಕ್ರಿಯ ಪ್ರಕರಣಗಳಿವೆ.

 ಮಕ್ಕಳಿಗೆ ಕೊರೊನಾ ಲಸಿಕೆ; ಏಮ್ಸ್‌ ವೈದ್ಯರ ವಿಶ್ಲೇಷಣೆ ಮಕ್ಕಳಿಗೆ ಕೊರೊನಾ ಲಸಿಕೆ; ಏಮ್ಸ್‌ ವೈದ್ಯರ ವಿಶ್ಲೇಷಣೆ

ಕೊರೊನಾ ಲಸಿಕೆ ಅಭಿಯಾನವೂ ದೇಶಾದ್ಯಂತ ಚುರುಕಾಗಿ ಸಾಗುತ್ತಿದೆ. ಅತಿಹೆಚ್ಚು ಡೋಸ್ ನೀಡಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಇನ್ನು, ಒಟ್ಟಾರೆಯಾಗಿ, ವಿಶ್ವದಲ್ಲಿ 28.36 ಕೋಟಿ ಕೋವಿಡ್ ಕೇಸುಗಳು ವರದಿಯಾಗಿದ್ದು, 48.67 ಲಕ್ಷ ಜನ ಈ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ.

ಸುಮಾರು 96 ಕೋಟಿ (ಎರಡೂ ಡೋಸ್ ಸೇರಿ) ಲಸಿಕೆಯನ್ನು ಭಾರತದಲ್ಲಿ ಇದುವರೆಗೆ ನೀಡಲಾಗಿದೆ. ಲಕ್ಷದ್ವೀಪ, ಲಡಾಖ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಅತಿಕಮ್ಮಿ ಡೋಸ್ ಇದುವರೆಗೆ ನೀಡಲಾಗಿದೆ. ಲಸಿಕೆ ನೀಡುವಿಕೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?

 'ಉಚಿತ ಲಸಿಕೆಗೆ ಹಣ ಬರುವುದು ಎಲ್ಲಿಂದ, ಇಲ್ಲಿಂದಲೇ'!, ಪೆಟ್ರೋಲ್‌ ಬೆಲೆ ಬಗ್ಗೆ ಕೇಂದ್ರ ಸಚಿವರ ಹೇಳಿಕೆ 'ಉಚಿತ ಲಸಿಕೆಗೆ ಹಣ ಬರುವುದು ಎಲ್ಲಿಂದ, ಇಲ್ಲಿಂದಲೇ'!, ಪೆಟ್ರೋಲ್‌ ಬೆಲೆ ಬಗ್ಗೆ ಕೇಂದ್ರ ಸಚಿವರ ಹೇಳಿಕೆ

 ಲಸಿಕೆ ನೀಡುವಿಕೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿ - 11,50,88,781 ಲಸಿಕೆ

ಲಸಿಕೆ ನೀಡುವಿಕೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿ - 11,50,88,781 ಲಸಿಕೆ

ಲಸಿಕೆ ನೀಡುವಿಕೆಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಏಳನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ ಇದುವರೆಗೆ 11,50,88,781 ಲಸಿಕೆ ನೀಡಲಾಗಿದ್ದು, ಇದರ ನಂತರದ ಸ್ಥಾನ ಮಹಾರಾಷ್ಟ. ಅಲ್ಲಿ, 8,77,22,763 ಡೋಸ್ ನೀಡಲಾಗಿದೆ. ಮಧ್ಯ ಪ್ರದೇಶದಲ್ಲಿ 6,52,46,990 ಡೋಸ್ ನೀಡಲಾಗಿದ್ದು, ಇದು ಮೂರನೇ ಸ್ಥಾನದಲ್ಲಿದೆ. ಇದಾದ ನಂತರ ಗುಜರಾತ್, ಅಲ್ಲಿ 6,51,49,615 ಲಸಿಕೆ ನೀಡಲಾಗಿದೆ.

 ಕರ್ನಾಟಕದಲ್ಲಿ 5,90,31,393 ಲಸಿಕೆಯನ್ನು ಇದುವರೆಗೆ ನೀಡಲಾಗಿದೆ

ಕರ್ನಾಟಕದಲ್ಲಿ 5,90,31,393 ಲಸಿಕೆಯನ್ನು ಇದುವರೆಗೆ ನೀಡಲಾಗಿದೆ

ಪಶ್ಚಿಮ ಬಂಗಾಳದಲ್ಲಿ 6,44,11,444, ಬಿಹಾರದಲ್ಲಿ 6,05,65,684, ಕರ್ನಾಟಕದಲ್ಲಿ 5,90,31,393 ಲಸಿಕೆಯನ್ನು ಇದುವರೆಗೆ ನೀಡಲಾಗಿದೆ. ಆ ಮೂಲಕ, ಈ ಮೂರು ರಾಜ್ಯಗಳು ಕ್ರಮವಾಗಿ ಐದು, ಆರು ಮತ್ತು ಏಳನೇ ಸ್ಥಾನದಲ್ಲಿದೆ.

ಈ ಪೈಕಿ ಕರ್ನಾಟಕದಲ್ಲಿ ಮೊದಲನೇ ಡೋಸ್ ಪಡೆದವರ ಸಂಖ್ಯೆ ನಾಲ್ಕು ಕೋಟಿಗೂ ಹೆಚ್ಚು. ಇನ್ನು, 1.9 ಕೋಟಿ ಎರಡನೇ ಡೋಸ್ ಪಡೆದವರು. ಪೋಲಿಯೋ ಲಸಿಕೆ ಮಾದರಿಯಲ್ಲಿ ಮನೆಮನೆಗೂ ಹೋಗಿ ಲಸಿಕೆ ನೀಡುವ ಅಭಿಯಾನವನ್ನು ಆರೋಗ್ಯ ಇಲಾಖೆ ಸದ್ಯದಲ್ಲೇ ಆರಂಭಿಸಲಿದೆ. ಇಲಾಖೆಯ ಸತತ ಪ್ರಯತ್ನದ ನಂತರವೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿಕೊಳ್ಳುತ್ತಿರುವವರ ಸಂಖ್ಯೆ ಶೇ. 20ರಷ್ಟಿದೆ.

ಇವರ ಮನವೊಲಿಕೆಗೆ ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರೂ ಸೇರಿದಂತೆ ಮನೆಮನೆಗೆ ಹೋಗಿ, ಅವರ ಮನವೊಲಿಕೆಯ ಕೆಲಸವನ್ನು ಮಾಡುತ್ತಿದ್ದಾರೆ. ಲಸಿಕೆ ಜಾಗೃತಿ ಅಭಿಯಾನವನ್ನೂ ತಾಲೂಕು ಮಟ್ಟದಲ್ಲಿ ಆರಂಭಿಸುವ ಚಿಂತನೆಯನ್ನು ಆರೋಗ್ಯ ಇಲಾಖೆ ಮಾಡಿದೆ.

 ವಿಶ್ವದಲ್ಲಿ 1.79 ಕೋಟಿ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ ಶೇ. 55 ಅಮೆರಿಕಾದಲ್ಲಿ

ವಿಶ್ವದಲ್ಲಿ 1.79 ಕೋಟಿ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ ಶೇ. 55 ಅಮೆರಿಕಾದಲ್ಲಿ

ವಿಶ್ವದಲ್ಲಿ ಇನ್ನೂ 1.79 ಕೋಟಿ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ ಶೇ. 55 ಅಮೆರಿಕಾದಲ್ಲಿ ಇದ್ದರೆ, ಶೇ. 1.3 ಕೇಸು ಭಾರತದಲ್ಲಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಲಸಿಕೆ ಅಭಿಯಾನ ಅತ್ಯಂತ ಚುರುಕಿನಿಂದ ಸಾಗುತ್ತಿದೆ. ದೇಶದಲ್ಲಿ 58.36 ಕೋಟಿ ಸ್ಯಾಂಪಲ್ ಟೆಸ್ಟ್ ಅನ್ನು ಪಡೆದುಕೊಳ್ಳಲಾಗಿದೆ. ಕಳೆದ 209 ದಿನಗಳಲ್ಲಿ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ.

 ದೇಶದ ಇತರ ಕೆಲವು ರಾಜ್ಯಗಳಲ್ಲಿ ಲಸಿಕೆ ಪಡೆದುಕೊಂಡವರ ಸಂಖ್ಯೆ

ದೇಶದ ಇತರ ಕೆಲವು ರಾಜ್ಯಗಳಲ್ಲಿ ಲಸಿಕೆ ಪಡೆದುಕೊಂಡವರ ಸಂಖ್ಯೆ

ಇನ್ನು, ದೇಶದ ಇತರ ಕೆಲವು ರಾಜ್ಯಗಳಲ್ಲಿ ಲಸಿಕೆ ಪಡೆದುಕೊಂಡವರ ಸಂಖ್ಯೆ ಹೀಗಿದೆ:

ಆಂಧ್ರಪ್ರದೇಶ: 4,45,67,168
ಛತ್ತೀಸಗಢ: 1,95,47,767
ದೆಹಲಿ: 1,90,59,772
ಹರ್ಯಾಣ: 2,40,32,677
ಕೇರಳ: 3,66,19,059
ರಾಜಸ್ಥಾನ: 5,89,27,316
ತಮಿಳುನಾಡು: 5,19,43,998
ತೆಲಂಗಾಣ: 2,78,42,983

English summary
Covid-19 Vaccination in India: Uttar Pradesh Ranks No 1 by administering 11,50,88,781 doses, and Karnataka Ranks 7th by administering 5,90,31,393 doses. Here is the complete details. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X