• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲಬುರಗಿಯಲ್ಲಿ ಕೊರೋನಾಗೆ ಸಾವನ್ನಪ್ಪಿರುವುದು ದುರ್ದೈವ

|

ಬೆಂಗಳೂರು, ಮಾ. 11: ಕಲಬುರಗಿಯಲ್ಲಿ ಕೊರೋನಾ ವೈರಸ್‌ನಿಂದ ಸಾವನ್ನಪ್ಪಿರುವುದು ದುರ್ದೈವದ ಸಂಗತಿ ಎಂದು ಮಾಜಿ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಕಲ್ಬುರ್ಗಿಯಲ್ಲಿ ಕೊರೋನಾಗೆ ವ್ಯಕ್ತಿ ಮೃತವಾಗಿರೋದು ಅತ್ಯಂತ ಗಂಭೀರ ವಿಚಾರ. ಸೋಂಕು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅರಿವು ಮೂಡಿಸುವ ಕಾರ್ಯಕ್ರಮದಲ್ಲಿಯೂ ವಿಫಲವಾಗಿದೆ. ದೇಶದಾದ್ಯಂತ ಕೊರೊನಾ ವೈರಸ್ ಹೆಚ್ಚುತ್ತಿದೆ. ರಾಜ್ಯದಲ್ಲೂ ಕೊರೋನಾ ವೈರಸ್ ಹಬ್ಬಿದೆ. ರಾಜ್ಯದಲ್ಲಿ ಗಂಭೀರವಾದ ಸನ್ನಿವೇಶ ಉಂಟಾಗಿದೆ ಎಂದಿದ್ದಾರೆ. ಕೆಮ್ಮು, ಜ್ವರ ಬಂದಾಗ ಆ ವ್ಯಕ್ತಿ ಎಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬುದರ ಬಗ್ಗೆಯ ಗೊಂದಲವಿದೆ. ಈ ಬಗ್ಗೆ ಜನರಿಗೆ ಸರ್ಕಾರ ಸೂಕ್ತ ಮಾಹಿತಿ, ಸೂಚನೆ ನೀಡಬೇಕು. ವಿಪರೀತ ಶೀತ, ರ್ಯಾಪಿಡ್ ಫೋರ್ಸ್‌ ಟೀಂ ರಚನೆ ಮಾಡಬೇಕು ಎಂದು ಖಾದರ್ ಆಗ್ರಹಿಸಿದ್ದಾರೆ.

ದುಪ್ಪಟ್ಟು ಬೆಲೆಯಲ್ಲಿ ಮಾಸ್ಕ್‌ ಮಾರಾಟ, ತನ್ನದೆ ಗೊಂದಲದಲ್ಲಿ ಸರ್ಕಾರ: ಕೊರೋನಾ ವೈಸರ್ ಭೀತಿಯಿಂದ ಜನರು ಮಾಸ್ಕ್‌ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಮಾಸ್ಕ್‌ಗೆ ನಾಲ್ಕು ಪಟ್ಟು ಹೆಚ್ಚು ಹಣ ವಸೂಲಿ ಮಾಮಾಡುತ್ತಿದ್ದಾರೆ. 4 ರೂ.ಗಳ ಮಾಸ್ಕ್‌ನ್ನು 50 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಈ ಮಧ್ಯೆ ತನ್ನದೇ ಆದ ಗೊಂದಲಗಳಲ್ಲಿ ಮುಳುಗಿರುವ ಸರ್ಕಾರ ತನ್ನ ಗೊಂದಲಗಳನ್ನು ಸರಿ ಮಾಡಿಕೊಳ್ಳುವುದರತ್ತ ಒತ್ತು ಕೊಟ್ಟಿದೆ. ಹೀಗಾಗಿ ಕೊರೋನಾ ತಡೆಗಟ್ಟುವಲ್ಲಿ ವಿಫಲವಾಗಿದೆ.

ಸಾರ್ವಜನಿಕ ಸಭೆಗಳನ್ನು ನಿಷೇಧಿಸಬೇಕು. ಬರಿ ಶಾಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಿದ್ದಾರೆ. ಕಾಲೇಜ್‌ಗಳಿಗೆ ಯಾಕೆ ರಜೆಯನ್ನು ಕೊಟ್ಟಿಲ್ಲ? ಅಲ್ಲಿ ಸೋಂಕು ಹರಡುವ ಸಾಧ್ಯತೆ ಇಲ್ಲವಾ? ಆ ಬಗ್ಗೆ ಗಮನ ಹರಿಸದೆ ಸರ್ಕಾರ ಅಸಡ್ಡೆ ವಹಿಸಿದೆ ಎಂದು ಮಾಜಿ ಆರೋಗ್ಯ ಸಚಿವ ಖಾದರ್ ಆರೋಪಿಸಿದ್ದಾರೆ.

English summary
It is unfortunate that a man was died by COVID-19 in Kalaburagi Khadar has said. Former health minister U T Khader alleges the government failed to prevent the corona virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X