ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಗೆದ್ದರೂ ಪ್ರಧಾನಿಯಂತ ಒಪ್ಪಲ್ಲ, ಅನಂತಮೂರ್ತಿ

|
Google Oneindia Kannada News

ಬರಗೂರು ರಾಮಚಂದ್ರಪ್ಪ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನಿರಲ್ಲ ಎನ್ನುವ ತನ್ನ ಹೇಳಿಕೆಗೆ ಸಾಹಿತಿ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು ಆರ್ ಅನಂತಮೂರ್ತಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದರೂ ನಾನು ಅದನ್ನು ಒಪ್ಪಿಕೊಳ್ಳಲಾರೆ ಎಂದಿದ್ದಾರೆ.

ನರೇಂದ್ರ ಮೋದಿ ಭ್ರಷ್ಟರಲ್ಲದೇ ಇರಬಹುದು. ಅಭಿವೃದ್ದಿ ಎಲ್ಲರೂ ಮಾಡುವ ಕೆಲಸ, ಕೋಮು ಗಲಭೆಯಲ್ಲಿ ಮನ ಮಿಡಿಯದೇ ಇರುವುದು ಪರಮ ಪಾಪದ ಕೆಲಸ. ಪ್ರಜಾಪ್ರಭುತ್ವದ ಅಭಿಪ್ರಾಯ ಸ್ವಾತಂತ್ರ್ಯದಲ್ಲಿ ಮೋದಿಗೆ ನಂಬಿಕೆಯಿಲ್ಲ. ಆದರೂ ಪ್ರಜಾಪ್ರಭುತ್ವದ ರೀತಿಯಲ್ಲಿ ಮೋದಿ ಪ್ರಧಾನಿಯಾದರೆ ಅದನ್ನು ಒಪ್ಪಿಕೊಳ್ಳುವ ಸೌಜನ್ಯ ನನಗಿಲ್ಲ ಎಂದು ಡಾ. ಅನಂತಮೂರ್ತಿ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

ಪಬ್ಲಿಕ್ ಟಿವಿಯ ಎಚ್ ಆರ್ ರಂಗನಾಥ್ ಮತ್ತು ಉದಯವಾಣಿ ದೈನಿಕದ ಪುರವಣಿ ವಿಭಾಗದ ಸಂಪಾದಕ ಗಿರೀಶ್ ರಾವ್ (ಜೋಗಿ) ಅವರಿಗೆ ಅನಂತಮೂರ್ತಿ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಈ ಸಂದರ್ಶನ ಉದಯವಾಣಿ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ ಇಂದು (ಸೆ19) ಪ್ರಕಟವಾಗಿದೆ. ಉದಯವಾಣಿ ಲಿಂಕಿಗೆ ಇಲ್ಲಿ ಕ್ಲಿಕ್ಕಿಸಿ

ಪ್ರ: ನೀವು ಪ್ರಜಾಪ್ರಭುತ್ವವಾದಿ, ಗುಜರಾತ್ ಜನತೆ ಆರಿಸಿ ಕಳುಹಿಸಿದ ನಾಯಕನನ್ನು ನೀವು ಹೇಗೆ ತಿರಸ್ಕರಿಸುತ್ತೀರಿ?
URA: ಪ್ರಭಾಪ್ರಭುತ್ವವನ್ನು ಸಂಶಯದಿಂದ ನೋಡುವ ಶಕ್ತಿ ಇರಬೇಕು. ಪ್ರಜೆಗಳನ್ನು ಮರಳು ಮಾಡಿ ಅಧಿಕಾರಕ್ಕೆ ಬರುವವರನ್ನು ವಿರೋಧಿಸಬೇಕು. ನಿಮ್ಮ ಪ್ರಶ್ನೆಯನ್ನು ಒಪ್ಪಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ.

ಸಂದರ್ಶನದ ಆಯ್ದ ಭಾಗ ಸ್ಲೈಡಿನಲ್ಲಿ..

ಅನಂತಮೂರ್ತಿ ಸಂದರ್ಶನ

ಅನಂತಮೂರ್ತಿ ಸಂದರ್ಶನ

ಪ್ರ: ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದೀರಿ. ಈಗ ನಿಮ್ಮ ನಿಲುವೇನು?
URA: ದೇಶ ಬಿಟ್ಟು ಹೋಗಲು ಸಾಧ್ಯವಿಲ್ಲ ಮತ್ತು ನನಗದೂ ಇಷ್ಟವೂ ಇಲ್ಲ. ನಾನು ಅವರನ್ನು ಪ್ರಧಾನಿ ಎಂದು ಒಪ್ಪಿಕೊಳ್ಳುವುದಿಲ್ಲ. ಯಾರ ಮೇಲೆ ಕಳಂಕವಿದೆಯೋ ಅಂಥವರನ್ನು ನಾನು ಒಪ್ಪಿಕೊಳ್ಳಲಾರೆ. ಫೇಕ್ ಎನ್ ಕೌಂಟರ್ ಹೆಸರಿನಲ್ಲಿ ಎಷ್ಟು ಜನರನ್ನು ಸಾಯಿಸಿದರು. ಮೋದಿ ಸರ್ಕಾರದಲ್ಲಿ ಇದು ಆಗಿರೋದು.

ಮೋದಿ ಭ್ರಷ್ಟರಲ್ಲ

ಮೋದಿ ಭ್ರಷ್ಟರಲ್ಲ

ಪ್ರ: ಮೋದಿ ಭಷ್ಟರಲ್ಲ, ದಕ್ಷ ಆಡಳಿತಗಾರ. ಈಗಿನ ರಾಜಕೀಯದಲ್ಲಿ ಭಷ್ಟರೇ ತುಂಬಿದ್ದಾರಲ್ಲಾ?
URA: ನನಗೆ ಮೋದಿ ಭ್ರಷ್ಟ ಎಂದು ಅನಿಸುವುದಿಲ್ಲ. ಇದು ಸಜವಾಗಿ ಇರಬೇಕಾದ ಗುಣ. ಹಾಗಂತ ಭ್ರಷ್ಟರಲ್ಲದೇ ಇರುವುದು ದೊಡ್ಡ ಸಾಧನೆ ಏನೂ ಅಲ್ಲ. ನಮ್ಮ ರಾಜಕೀಯದಲ್ಲಿ ಭ್ರಷ್ಟರೇ ತುಂಬಿರುವಾಗ ಭ್ರಷ್ಟರಲ್ಲದೇ ಇರುವುದು ದೊಡ್ಡ ಸಾಧನೆಯಾಗಿದೆ. ಮಾಧ್ಯಮಗಳ ಜಾಯಮಾನಕ್ಕೆ ಹೊಂದಿಕೊಳ್ಳುವ ಗುಣ ಮೋದಿಯಲ್ಲಿದೆ.

ಮೋದಿ ಅಪಾಯಕಾರಿ

ಮೋದಿ ಅಪಾಯಕಾರಿ

ಪ್ರ: ಮೋದಿ ಅಪಾಯಕಾರಿ ಎನ್ನುವುದು ನಿಮ್ಮ ನಿಲುವು. ಆದರೂ ಅವರು ಯಾಕೆ ಅಷ್ಟು ಜನಪ್ರಿಯರಾದರು?
URA: ಪ್ರಚಾರಕ್ಕಾಗಿ ಏನೂ ಬೇಕಾದರೂ ಮಾಡುವವರು ಅಪಾಯಕಾರಿ. ಅದರ ಹಿಂದೆ ದುಡ್ಡಿದೆ, ಕ್ಯಾಪಿಟಲಿಸಂಗೆ ಮೋದಿ ಬೇಕಾಗಿದ್ದಾರೆ. ಹಾಗಾಗಿ ಎಲ್ಲರಿಗೂ ಮೋದಿ ಪ್ರೀತಿಗೆ ಪಾತ್ರರಾಗಿದ್ದಾರೆ. ಮೋದಿ ಬೆಳೆಯುವುದಕ್ಕೆ ಅವಕಾಶ ನೀಡಿದವರು ಕಾಂಗ್ರೆಸ್ ನವರು. ಹಗರಣ, ವಿವಾದಗಳಿಂದ ಅವರೇ ಮೋದಿಗೆ ದಾರಿ ಮಾಡಿಕೊಟ್ಟರು.

ಯಾರು ಪ್ರಧಾನಿಯಾಗಬೇಕು?

ಯಾರು ಪ್ರಧಾನಿಯಾಗಬೇಕು?

ಪ್ರ: ನಿಮ್ಮ ಪ್ರಕಾರ ಯಾರು ಪ್ರಧಾನಿಯಾಗ ಬೇಕು? ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲವೇ?
URA: ಕಾಂಗ್ರೆಸ್ ಅಥವಾ ಬಿಜೆಪಿ ಇಬ್ಬರಿಗೂ ಬಹುಮತ ಸಿಗುವುದಿಲ್ಲ. ಸಮ್ಮಿಶ್ರ ಸರಕಾರ ಆಗುತ್ತದೆ. ಪ್ರಧಾನಿ ಆಗುವುದಕ್ಕೆ ಯೋಗ್ಯರಾದವರು ಬಹಳಷ್ಟು ಜನರಿದ್ದಾರೆ. ನಿತೀಶ್ ಕುಮಾರ್, ಶರದ್ ಪವಾರ್ ಆಗಬಹುದು.

ನೀವು ಕಾಂಗ್ರೆಸ್ ಪಕ್ಷದ ಪರ ಎನ್ನುವ ಮಾತಿದೆ?

ನೀವು ಕಾಂಗ್ರೆಸ್ ಪಕ್ಷದ ಪರ ಎನ್ನುವ ಮಾತಿದೆ?

ಪ್ರ: ನೀವು ಕಾಂಗ್ರೆಸ್ ಪಕ್ಷದ ಪರ ಎನ್ನುವ ಮಾತಿದೆ?
URA: ನಾನು ಕಾಂಗ್ರೆಸ್ ಪರ ಅಲ್ಲ. ಕರ್ನಾಟಕ ಕಾಂಗ್ರೆಸ್ ಪರ. ಸಿದ್ದರಾಮಯ್ಯ ಗೆದ್ದು ಬಂದಿರುವುದು ನನಗೆ ಸಂತೋಷವಾಗಿದೆ. ಯಡಿಯೂರಪ್ಪನವರ ಭ್ರಷ್ಟಾಚಾರದಿಂದ ಬೇಸತ್ತು ಕಾಂಗ್ರೆಸ್ ಬೆಂಬಲಿಸಿದೆ. ಇಂದಿರಾ ಗಾಂಧಿ ಕಾಲದಲ್ಲಿ ಒಬ್ಬ ಸಾಮಾನ್ಯ ಮೆಟ್ಟು ಹೊಲಿಯುವವನೂ ಬ್ಯಾಂಕ್ ವ್ಯವಹಾರ ಮಾಡುವಂಥ ಬದಲಾವಣೆಗಳು ಆಗಿದ್ದವು. ರಾಹುಲ್ ಗಾಂಧಿ ಒಬ್ಬ ಮುಗ್ದ. ಮುಗ್ದನೊಬ್ಬನು ದೇಶದ ಪ್ರಧಾನಿಯಾದರೆ ತಪ್ಪಿಲ್ಲ.

English summary
Dr. UR Ananthamurthy interview to Public TV channel editor H R Ranganath and writer, Journalist, Editor of Udayavani daily Girish Rao (Jogi).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X