ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್‌ಸಿ: ಸಿವಿಲ್ ಸರ್ವೀಸ್ 'ಶಿಖರ'ವೇರಿದ 'ಶಿರಾ' ಯುವತಿ!

|
Google Oneindia Kannada News

ಬೆಂಗಳೂರು, ಮೇ. 30: "ನಾನು ನವೋದಯ ಶಾಲೆಯ ವಿದ್ಯಾರ್ಥಿ. ನನ್ನ ಶಿಕ್ಷಣಕ್ಕಾಗಿ ನನ್ನ ದೇಶ ನನಗಾಗಿ ಎಷ್ಟೆಲ್ಲಾ ಕೊಟ್ಟಿದೆ. ನಾನು ನನ್ನ ದೇಶಕ್ಕೆ ಏನಾದರೂ ಕೊಡಲೇಬೇಕು ಎಂದು ತೀರ್ಮಾನಿಸಿದೆ. ಇಂಜಿನಿಯರಿಂಗ್ ಪದವಿ ಮುಗಿಸಿ ವಿಪ್ರೋದಲ್ಲಿ ಕೆಲಸ ಸಿಕ್ಕರೂ ಹೋಗಲಿಲ್ಲ. ಸಿವಿಲ್ ಸರ್ವೀಸ್ ಆಯ್ಕೆ ಮಾಡಿಕೊಂಡೆ. ನಾಲ್ಕು ವರ್ಷದ ಪರಿಶ್ರಮದಿಂದ ನಾನು ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾದೆ. ನಾನು ಈ ಸಮಾಜಕ್ಕಾಗಿ ಏನಾದರೂ ಮಾಡಿಯೇ ತೀರುತ್ತೇನೆ,''.

ಸೋಮವಾರ ಪ್ರಕಟವಾದ ಯುಪಿಎಸ್ ಸಿ ಫಲಿತಾಂಶದಲ್ಲಿ 291 ನೇ ರ್‍ಯಾಂಕ್ ಗಳಿಸಿರುವ ತುಮಕೂರು ಜಿಲ್ಲೆಯ ಶಿರಾದ ಕಲ್ಪಶ್ರೀ ಅವರ ಅಂತರಾಳದ ಮಾತು. ಸಿವಿಲ್ ಸರ್ವೀಸ್ ಗೆ ಆಯ್ಕೆಯಾಗಿರುವ ಬಯಲು ಸೀಮೆಯ ಹೆಣ್ಣು ಮಕ್ಕಳು ಸಿವಿಲ್ ಸರ್ವೀಸ್ ಗೆ ಆಯ್ಕೆಯಾದ ಯಶೋಗಾಥೆಯನ್ನು 'ಒನ್‌ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

ಅಪ್ಪ 'ಡಿ' ಗ್ರೂಪ್ ನೌಕರ ಆಗಿದ್ದರು. ಸೇವೆ ಹಿರಿತನ ಆಧಾರದ ಮೇಲೆ ಈಗ ರೆವಿನ್ಯೂ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಣ್ಣ ಲಕ್ಷ್ಮೀಕಾಂತ್ ಆರ್ಮಿಗೆ ಸೇರಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಮ್ಮ ಮನೆಯಲ್ಲಿಯೇ ಇರುತ್ತಾರೆ. ನಮ್ಮ ಅಪ್ಪ ತುರುವೇಕೆರೆಯಲ್ಲಿ ಕೆಲಸ ಮಾಡುತ್ತಿದ್ದರು.

UPSC Success Story: Kalpashree from Tumakuru: All India Rank 291, Civil Service Exam

ನಾನು ಓದಿದ್ದೆಲ್ಲಾ ನವೋದಯ ಶಾಲೆಯಲ್ಲಿ. ನಾನು ನವೋದಯ ಶಾಲೆಯಲ್ಲಿ ಓದುವಾಗಲೇ ನನಗೆ ಸಿವಿಲ್ ಸರ್ವೀಸ್ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ವಾಸ್ತವದಲ್ಲಿ ಒಬ್ಬ ಜಿಲ್ಲಾಧಿಕಾರಿ ಏನೆಲ್ಲಾ ಸೇವೆ ಮಾಡುತ್ತಾರೆ ಅನ್ನೋದನ್ನು ನೋಡುತ್ತಿದ್ದೆ. ಆ ತರ ನಾನು ಆಗಬೇಕು ಎಂದು ಕನಸು ಕಾಣುತ್ತಿದ್ದೆ. ನಾನು ನವೋದಯ ಶಾಲೆಯಲ್ಲಿ ಓದುವಾಗ ನನ್ನ ಶಿಕ್ಷಣಕ್ಕೆ ನನ್ನ ದೇಶ ಎಷ್ಟೆಲ್ಲಾ ಕೊಟ್ಟಿದೆ. ನಾನು ನನ್ನ ದೇಶಕ್ಕೆ ಏನಾದರೂ ಕೊಡಬೇಕು ಎಂಬ ಆಸೆ ಆಗುತ್ತಿತ್ತು.

ಪಿಯುಸಿ ಮುಗಿಸಿ ಇಂಜಿನಿಯರಿಂಗ್ ಆಯ್ಕೆಮಾಡಿಕೊಂಡೆ. ಬೆಂಗಳೂರಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದೆ. ಆನಂತರ ವಿಪ್ರೊದಲ್ಲಿ ನನಗೆ ಕೆಲಸ ಸಿಕ್ಕಿತು. ಹೋಗುವ ಆಲೋಚನೆಯಲ್ಲಿದ್ದರೂ ನಾನು ಏನಾದರೂ ಸಾಧನೆ ಮಾಡಬೇಕು ಎಂಬ ನನ್ನ ಬಾಲ್ಯದ ಆಸೆ ನೆನಪಿಗೆ ಬರುತ್ತಿತ್ತು. ಕೆಲಸಕ್ಕೆ ಹೋಗದೇ ಧೈರ್ಯ ಮಾಡಿ ಸಿವಿಲ್ ಸರ್ವೀಸ್ ಪರೀಕ್ಷೆ ತೆಗೆದುಕೊಳ್ಳಲು ನಿರ್ಣಯಿಸಿ ಅಧ್ಯಯನದಲ್ಲಿ ತೊಡಗಿಸಿಕೊಂಡೆ ಎಂದು ಸಿವಿಲ್ ಸರ್ವೀಸ್ ಮಾಡುವ ದೃಢ ನಿರ್ಧಾರದ ಬಗ್ಗೆ ಕಲ್ಪಶ್ರೀ ತನ್ನ ಅಂತರಾಳದ ಮಾತನ್ನು ಹಂಚಿಕೊಂಡರು.

UPSC Success Story: Kalpashree from Tumakuru: All India Rank 291, Civil Service Exam

ದೆಹಲಿಗೆ ತೆರಳಿ ತರಬೇತಿ ಪಡೆದುಕೊಂಡೆ

ನಾನು ಸಿವಿಲ್ ಸರ್ವೀಸ್ ಗೆ ಸರ್ಕಾರದಿಂದ ಉಚಿತ ತರಬೇತಿ ಕೊಡುವ ಯೋಜನೆಯಡಿ ಆಯ್ಕೆಯಾಗಿ ಒಂದು ವರ್ಷ ದೆಹಲಿಗೆ ತೆರಳಿ ತರಬೇತಿ ಪಡೆದುಕೊಂಡೆ. ಅಲ್ಲಿಂದ ಓದು ಶುರು ಮಾಡಿದೆ. ಆನಂತರ ವಾಪಸು ಬೆಂಗಳೂರಿನಲ್ಲಿ ಅಧ್ಯಯನದಲ್ಲಿ ತೊಡಗಿದೆ. 2017 ರಿಂದ ನಿರಂತರ ಅಧ್ಯಯನ ಮಾಡತೊಡಗಿದೆ. ಇನ್‌ಸೈಟ್ಸ್ ನಲ್ಲಿ ಟೆಸ್ಟ್ ಗಳನ್ನು ತೆಗೆದುಕೊಳ್ಳುತ್ತಿದ್ದೆ. ಕಳೆದ ವರ್ಷ ಸಂದರ್ಶನ ವರೆಗೂ ಹೋಗಿ ವಿಫಲವಾಗಿದ್ದೆ. ಆದರೂ ದೃತಿಗೆಡಲಿಲ್ಲ. ಈ ಭಾರಿ ಮತ್ತಷ್ಟು ಪರಿಶ್ರಮ ಹಾಕಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಮುಖ್ಯ ಪರೀಕ್ಷೆಗೂ ತಯಾರಿ ನಡೆಸಿದೆ. ಸಂದರ್ಶನ ಎದುರಿಸುವ ಬಗ್ಗೆ ನಾನು ಐಎಎಸ್ ಫಾರ್ ಇಂಡಿಯಾ ಅಕಾಡೆಮಿಯಲ್ಲಿ ತರಬೇತಿ ಪಡೆದೆ. ನನಗೆ ಐಎಎಸ್ ಫರ್ ಇಂಡಿಯಾ ಶ್ರೀನಿವಾಸ್ ಸರ್ ಮತ್ತು ಕೇದಾರ್ ಸರ್ ತುಂಬಾ ನೆರವು ನೀಡಿದರು. ಹೀಗಾಗಿ ನಾನು ಈ ಬಾರಿಯ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಯಶಸ್ಸು ಆದೆ ಎಂದು ತನ್ನ ಸಿವಿಲ್ ಸರ್ವೀಸ್ ಯಶಸ್ಸಿನ ಗುಟ್ಟನ್ನು ವಿವರಿಸಿದರು.

ನಾನು ಭಾರತೀಯ ನಾಗರಿಕ ಸೇವೆ ಪರೀಕ್ಷೆ ತೆಗೆದುಕೊಳ್ಳಲು ಸ್ಫೂರ್ತಿ ತುಂಬಿದವರು ನನ್ನ ತಂದೆ ಕಾಂತಪ್ಪ ಮತ್ತು ತಾಯಿ ಮತ್ತು ನನ್ನ ಆರ್ಮಿ ಸಹೋದರ ಕಾಂತರಾಜ್. ಇದರ ಜತೆಗೆ ನನಗೆ ಐಎಎಸ್ ಫರ್ ಇಂಡಿಯಾ ಶ್ರೀನಿವಾಸ್ ಸರ್ ಸಂದರ್ಶನ ಎದುರಿಸಲು ತುಂಬಾ ಮಾರ್ಗದರ್ಶನ ನೀಡಿದರು. ಎಂದು ಕಲ್ಪಶ್ರೀ ಸ್ಮರಿಸಿದರು.

UPSC Success Story: Kalpashree from Tumakuru: All India Rank 291, Civil Service Exam

Recommended Video

IPL ಫೈನಲ್ ಪಂದ್ಯಕ್ಕೂ ಮುಂಚೆ ಸೈಲೆಂಟಾಗಿದ್ದ ಸಂಜು ಸ್ಯಾಮ್ಸನ್ ಪತ್ನಿ ನಿನ್ನೆ ಫುಲ್ ವೈಲೆಂಟ್ | Oneindia Kannada

ತಾಳ್ಮೆ ನಂಬಿಕೆ ಎರಡೇ ಸಿವಿಲ್ ಸರ್ವೀಸ್ :
ನಾನು ಸಿವಿಲ್ ಸರ್ವೀಸ್ ನಲ್ಲಿ ಯಶಸ್ಸು ಗಳಿಸುತ್ತೇನೆ ಎಂಬ ದೃಢವಾದ ನಂಬಿಕೆ ಇರಬೇಕು. ಫೇಲ್ ಆದರೂ ನಾನು ಜಯ ಗಳಿಸುತ್ತೇನೆ ಎಂಬ ನಂಬಿಕೆ ಜತೆಗೆ ತಾಳ್ಮೆ ಕಳೆದುಕೊಳ್ಳದೇ ಸತತ ಪ್ರಯತ್ನ ಮಾಡಿದರೆ ಸಿವಿಲ್ ಸರ್ವೀಸ್ ಪರೀಕ್ಷೆ ಎದುರಿಸುವುದು ದೊಡ್ಡ ಕಷ್ಟವೇನಲ್ಲ. ಆದರೆ ತುಂಬಾ ಪ್ರಾಮಾಣಿಕತೆಯಿಂದ ಓದಬೇಕು. ಆಗ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಕಲ್ಪಶ್ರೀ ಸಿವಿಲ್ ಸರ್ವೀಸ್ ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿದ್ದಾರೆ.

English summary
Here is the UPSC success story of Kalpasree from Tumkuru : she secured All India Rank 291 ,Kalpasree interview with one India kannda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X