ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UPSC Result: ಭಾರತೀಯ ನಾಗರಿಕ ಸೇವೆಗೆ ಕರ್ನಾಟಕದ 27 ಅಭ್ಯರ್ಥಿಗಳು ಆಯ್ಕೆ

|
Google Oneindia Kannada News

ಬೆಂಗಳೂರು, ಮೇ 30: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಕರ್ನಾಟಕದ 27 ಅಭ್ಯರ್ಥಿಗಳು ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ. ಈಮೂಲಕ 2021 ರಲ್ಲಿ ಕರ್ನಾಟಕದ ಅಭ್ಯರ್ಥಿಗಳು ಅದ್ವಿತೀಯ ಸಾಧನೆ ತೋರಿದ್ದಾರೆ.

ಯುಪಿಎಸ್‌ಸಿ ನಾಗರಿಕ ಸೇವೆಗಳ 2021ನೇ ಸಾಲಿನ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದೆ. ಶೃತಿ ಶರ್ಮಾ ದೇಶದಕ್ಕೆ ಮೊದಲ ರ್‍ಯಾಂಕ್ ಗಳಿಸಿದ್ದಾರೆ. ಅಂಕಿತಾ ಅಗರ್ ವಾಲ್ ದ್ವಿತೀಯ ಹಾಗೂ ಗಾಮಿನಿ ಸಿಂಗ್ಲಾ ತೃತೀಯ ರ್‍ಯಾಂಕ್ ಗಳಿಸಿದ್ದಾರೆ. ಕರ್ನಾಟಕದ ದಾವಣಗೆರೆಯ ಅವಿನಾಶ್ 31 ನೇ ರ್‍ಯಾಂಕ್ ಗಳಿಸುವ ಮೂಲಕ ಕರ್ನಾಟಕದ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಇನ್ನು ಬೆಂಗಳೂರಿನ ಇಂಡಿಯಾ ಫರ್ ಐಎಎಸ್ ಅಕಾಡೆಮಿಯ 18 ಅಭ್ಯರ್ಥಿಗಳು ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ. "ಈ ಭಾರಿ ನಮ್ಮ ಸಂಸ್ಥೆ ಅದ್ವಿತೀಯ ಸಾಧನೆ ತೋರಿದೆ. ನಮ್ಮ ವಿದ್ಯಾರ್ಥಿಗಳು ಅತಿ ಹೆಚ್ಚು ರ್‍ಯಾಂಕ್ ಗಳಿಸಿರುವುದು ಅತಿ ಸಂತಸ ತಂದಿದೆ," ಎಂದು ಇಂಡಿಯಾ4ಐಎಎಸ್ ಅಕಾಡೆಮಿಯ ಮುಖ್ಯಸ್ಥ ಶ್ರೀನಿವಾಸ್ 'ಒನ್‌ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.

UPSC Result 2021-22: Karnataka’s 27 Candidates Selected for Civil Service

"ಕೇಂದ್ರ ಸೇವೆಗೆ ಆಯ್ಕೆಯಾಗಿರುವ 685 ಅಭ್ಯರ್ಥಿಗಳ ಪೈಕಿ ಕರ್ನಾಟಕದ 27 ಮಂದಿ ಆಯ್ಕೆಯಾಗಿರುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಹೊರ ರಾಜ್ಯಗಳಲ್ಲಿ ಇದ್ದುಕೊಂಡು ಉತ್ತೀರ್ಣರಾದವರ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ," ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಇಂಡಿಯಾ ಫರ್ ಐಎಎಸ್ ಅಕಾಡೆಮಿ ನೀಡಿರುವ ಪ್ರಕಟಣೆ ಪ್ರಕಾರ ಈ ಅಕಾಡಮೆಯ 18 ಅಭ್ಯರ್ಥಿಗಳು ಯುಪಿಎಸ್ ಸಿ ಗೆ ಅಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

UPSC Result 2021-22: Karnataka’s 27 Candidates Selected for Civil Service

ಯುಪಿಎಸ್ ಸಿಯಲ್ಲಿ ಯಶಸ್ಸು ಗಳಿಸಿದ ವಿದ್ಯಾರ್ಥಿಗಳ ಪಟ್ಟಿ

ಹೆಸರು ರ್‍ಯಾಂಕ್

1.ಅವಿನಾಶ್ - 31

2. ಬೆನಕ ಪ್ರಸಾದ್ ಎನ್. ಜೆ.- 92

3. ನಿಖಿಲ್ ಬಸವರಾಜ ಪಟೀಲ್ -139

4. ವಿನಯ್ ಕುಮಾರ್ ಗಡ್ಗೆ - 151

5. ಚಿತ್‌ರಂಜನ್ ಎಸ್. -155

6. ಅಪೂರ್ವ ಬಾಸೂರು - 191

7. ಮನೋಜ್ ಆರ್. ಹೆಗ್ಡೆ - 213

8. ಮಂಜುನಾಥ್ ಆರ್. - 219

9. ರಾಜೇಶ್ ಪೊನ್ನಪ್ಪ ಎಂ.ಪಿ. - 222

10. ಕಲ್ಪಶ್ರೀ ಕೆ.ಆರ್. 291

11. ಹರ್ಷವರ್ಧನ್ ಬಿ.ಜೆ. - 318

12. ವಿನಯ್ ಕುಮಾರ್ ಡಿ.ಎಚ್‌. 352

13. ಎಂ.ಡಿ. ಕುಮರುದ್ದೀನ್ ಖಾನ್ - 414

14. ಮೇಘನಾ ಕೆ.ಟಿ.- 425,

15. ರವೀಂದ್ರನ್ ಬಿ.ಎನ್.- 455

16. ಸವಿತಾ ಗೋಟ್ಯಾಲ್ -479

17. ಮಹಮದ್ ಸಿದ್ದಕಿ ಷರೀಪ್ - 516,

18. ನಾಗರೋಜೆ, ಶುಭಂ ಭೂಸಹೇಬ್ 568

19. ಪ್ರಶಾಂತ್ ಕುಮಾರ್ ಬಿಓ - 641

English summary
UPSC Civil Services Final Result 2021-22: Karnataka achivers list, 27 Seven candidates selected for civil service from Karnataka now more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X