• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪೇಂದ್ರ ಹೊಸ ಪಕ್ಷಕ್ಕೆ ಸಿಕ್ತು ಕೇಂದ್ರ ಚುನಾವಣಾ ಆಯೋಗದ ಗ್ರೀನ್‌ ಸಿಗ್ನಲ್

By Manjunatha
|

ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನೂ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿರುವಾಗ ನಟ ಉಪೇಂದ್ರ ಅವರ ಹೊಸ ಪಕ್ಷ 'ಉತ್ತಮ ಪ್ರಜಾಕೀಯ ಪಕ್ಷ'ಕ್ಕೆ ಕೇಂದ್ರ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ.

ಈ ಮುಂಚೆ ಉಪೇಂದ್ರ ಅವರೇ ಸ್ಥಾಪಿಸಿದ್ದ ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ)ದಿಂದ ಉಪೇಂದ್ರ ಅವರು ಹೊರ ಬಂದ ನಂತರ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದರು ಅಂತೆಯೇ ಇಂದು ಅವರ ಹೊಸ ಪಕ್ಷ 'ಉತ್ತಮ ಪ್ರಜಾಕೀಯ ಪಕ್ಷ' ಕೇಂದ್ರ ಚುನಾವಣಾ ಆಯೋಗಕ್ಕೆ ನೊಂದಾವಣಿ ಆಗಿದೆ.

ಕೆಪಿಜೆಪಿಯಲ್ಲಿ ಕಿರಿಕ್, ರಿಯಲ್ ಸ್ಟಾರ್ ಉಪೇಂದ್ರ ಉಚ್ಚಾಟನೆ?

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಹಾಕಿರುವ ಉಪೇಂದ್ರ ಅವರು, ನಮ್ಮ 'ಉತ್ತಮ ಪ್ರಜಾಕೀಯ ಪಕ್ಷ ಚುನಾವಣಾ ಆಯೋಗದಲ್ಲಿ ನೊಂದಾವಣಿ ಆಗಿದೆ. ನಾವೆಲ್ಲರೂ ಸೇರಿ ಈಗಿಂದಲೇ ಈ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆದು " ಪ್ರಜಾಕೀಯ " ಸ್ಥಾಪಿಸಲು ಮುಂದಾಗೋಣ' ಎಂದಿದ್ದಾರೆ.

ಚುನಾವಣೆ ನಂತರ ಸಕ್ರಿಯ ರಾಜಕಾರಣಕ್ಕೆ

ಚುನಾವಣೆ ನಂತರ ಸಕ್ರಿಯ ರಾಜಕಾರಣಕ್ಕೆ

ಕರ್ನಾಟಕದ ಚುನಾವಣೆ ಇನ್ನು ವಾರದಲ್ಲಿ ಮುಗಿಯುವ ಹಂತದಲ್ಲಿರುವ ಕಾರಣ ಪ್ರಜಾಕೀಯ ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಭಾಗಿಯಾಗುವಂತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಉಪೇಂದ್ರ ಅವರು ತಮ್ಮ ಹೊಸ ಪಕ್ಷದ ಮೂಲಕ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಲಿದ್ದಾರೆ.

ಉಪ್ಪಿ ಭಾಗ 3: ಕೆಪಿಜೆಪಿಗೆ ರಾಜೀನಾಮೆ, ಪ್ರಜಾಕೀಯ ಉದಯ

ಕೆಪಿಜೆಪಿ ಪದಾಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ

ಕೆಪಿಜೆಪಿ ಪದಾಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ

ಈ ಮುಂಚೆ ಸ್ಥಾಪಿಸಿದ್ದ ಕೆಪಿಜೆಪಿಯ ಸಹ ಸಂಸ್ಥಾಪಕ ಮಹೇಶ್‌ ಗೌಡ ಹಾಗೂ ಇತರ ಸದಸ್ಯರಿಗೂ ಉಪೇಂದ್ರ ಅವರಿಗೂ ಟಿಕೆಟ್ ಹಂಚಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾದ ಕಾರಣ ಉಪೇಂದ್ರ ಅವರು ಕೆಪಿಜೆಪಿಯಿಂದ ಹೊರಬಂದಿದ್ದರು. ಅಂದೇ ಹೊಸ ಪಕ್ಷ ಸ್ಥಾಪಿಸುವುದಾಗಿ ಉಪೇಂದ್ರ ಅವರು ಘೋಷಿಸಿದ್ದರು.

ಉಪೇಂದ್ರ ರಾಜಕೀಯ ಪ್ರವೇಶವೇ ಓಳು ಬರೀ ಓಳು!

ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ

ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ

ಹೇಳಿದಂತೆ ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ ಆದರೆ ಈ ವಿಧಾನಸಭೆ ಚುನಾವಣೆಯಿಂದ ಅವರು ದೂರವೇ ಉಳಿಯಬೇಕಿದೆ ಆದರೆ ಮೂಲಗಳ ಪ್ರಕಾರ ಉಪೇಂದ್ರ ಅವರ ಹೊಸ ಪಕ್ಷದ ಸದಸ್ಯರು ಮುಂಬರುವ ಕಾರ್ಪೊರೇಟ್ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಶ್ರೀರಾಮುಲು ಬಿಜೆಪಿಗೆ ಕರೆದಿದ್ದರು

ಶ್ರೀರಾಮುಲು ಬಿಜೆಪಿಗೆ ಕರೆದಿದ್ದರು

ಕೆಪಿಜೆಪಿ ಪಕ್ಷವನ್ನು ತೊರೆದಿದ್ದ ಉಪೇಂದ್ರ ಅವರನ್ನು ಬಿಜೆಪಿ ಸಂಸದ ಶ್ರೀರಾಮುಲು ಅವರು ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದರು. ಜೊತೆಗೆ ಇನ್ನಿತರ ಪಕ್ಷಗಳೂ ಉಪೇಂದ್ರ ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದವು ಆದರೆ ಉಪೇಂದ್ರ ಅವರು ತಮ್ಮದೇ ಪಕ್ಷವನ್ನು ಕಟ್ಟುವ ಆಸೆಯಿಂದಾಗಿ ಬೇರೆ ಪಕ್ಷಗಳತ್ತ ಮುಖ ಮಾಡಿರಲಿಲ್ಲ.

ಕೆಪಿಜೆಪಿ ಕಿತ್ತಾಟ ಏಕೆ?

ಕೆಪಿಜೆಪಿ ಕಿತ್ತಾಟ ಏಕೆ?

ಈ ಹಿಂದೆ ಉಪೇಂದ್ರ ಅವರು ನೇತೃತ್ವ ವಹಿಸಿದ್ದ ಉಪೇಂದ್ರ ಅವರ ಕೆಪಿಜೆಪಿ ಪಕ್ಷದಲ್ಲಿ ಸಹ ಸಂಸ್ಥಾಪಕ ಮಹೇಶ್ ಗೌಡ ಸೇರಿದಂತೆ ಇನ್ನಿತರ ಪದಾಧಿಕಾರಿಗಳ ಜೊತೆ ಉಪೇಂದ್ರ ಭಿನ್ನಾಭಿಪ್ರಾಯ ಹೊಂದಿದ್ದರು. ವಿಶೇಷವಾಗಿ ಟಿಕೆಟ್ ವಿತರಣೆ ಕುರಿತಂತೆ ಉಪೇಂದ್ರ ಅವರು ತೀವ್ರ ಅಸಮಾಧಾನಗೊಂಡಿದ್ದರು. ಟಿಕೆಟ್‌ ಅನ್ನು ಸಂದರ್ಶನದ ಆಧಾರದಲ್ಲಿಯೇ ನೀಡಬೇಕು ಎಂದು ಉಪೇಂದ್ರ ಪಟ್ಟು ಹಿಡಿದಿದ್ದರು ಆದರೆ ಇತರ ಪದಾಧಿಕಾರಿಗಳು ಇದಕ್ಕೆ ವಿರುದ್ಧವಾಗಿದ್ದರು ಹಾಗಾಗಿ ಭಿನ್ನಾಭಿಪ್ರಾಯ ಹೆಚ್ಚಾಗಿ ಉಪೇಂದ್ರ ಕೆಪಿಜೆಪಿಯಿಂದ ಹೊರ ಬಂದಿದ್ದರು.

ಸರ್ವಾಧಿಕಾರಿ ವರ್ತನೆ

ಸರ್ವಾಧಿಕಾರಿ ವರ್ತನೆ

ಉಪೇಂದ್ರ ಅವರು ಎಲ್ಲಾ ಸೈನಿಂಗ್ ಅಥಾರಿಟಿ ನನಗೊಬ್ಬನಿಗೇ ಕೊಡಬೇಕು ಎಂದು ಒತ್ತಾಯ ಮಾಡಿದ್ದರು. ಅಲ್ಲದೆ ಅವರು ಕಾಂಗ್ರೆಸ್‌ ಪಕ್ಷದ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಕೆಪಿಜೆಪಿ ಉಪಾಧ್ಯಕ್ಷ ಶಿವಕುಮಾರ್ ಆರೋಪ ಮಾಡಿದ್ದರು. ಆದರೆ ಉಪೇಂದ್ರ ಅವರು ಇವನ್ನು ತಳ್ಳಿ ಹಾಕಿದ್ದರು.

English summary
Actor Upendra's new political party 'Uttama Prajakeeya Party' has registered to election commission of India today. Upendra left out his own old party KPJP for few disagreement with other party fellows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X