ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು 'ಉಪ್ಪಿ 2' ಉತ್ತಮ ಪ್ರಜಾಕೀಯ, ಯಾರಿಗಾದರೂ ಅರ್ಥವಾಗತ್ತ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16 : ನಟ, ನಿರ್ದೇಶಕ ಉಪೇಂದ್ರ ಮತ್ತೆ ರಾಜಕೀಯಕ್ಕೆ ವಾಪಸ್ ಆಗಲಿದ್ದಾರೆ. ಸೆ.18ರಂದು ಉಪೇಂದ್ರ ನೇತೃತ್ವದ ಹೊಸ ಪಕ್ಷದ ಘೋಷಣೆಯಾಗಲಿದೆ. ಕೆಪಿಜೆಪಿ ಪಕ್ಷ ಸ್ಥಾಪನೆ ಮಾಡಿದ್ದ ಅವರು ನಂತರ ಪಕ್ಷದಿಂದ ಹೊರ ಬಂದಿದ್ದರು.

ಸೆ.18ರಂದು ನಟ ಉಪೇಂದ್ರ ಅವರು ಹುಟ್ಟು ಹಬ್ಬ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ನಿವಾಸದಲ್ಲಿ ಅವರು ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಂದು ಹೊಸ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಉಪೇಂದ್ರ ಹೊಸ ಪಕ್ಷಕ್ಕೆ ಸಿಕ್ತು ಕೇಂದ್ರ ಚುನಾವಣಾ ಆಯೋಗದ ಗ್ರೀನ್‌ ಸಿಗ್ನಲ್ಉಪೇಂದ್ರ ಹೊಸ ಪಕ್ಷಕ್ಕೆ ಸಿಕ್ತು ಕೇಂದ್ರ ಚುನಾವಣಾ ಆಯೋಗದ ಗ್ರೀನ್‌ ಸಿಗ್ನಲ್

'ಜನತಂತ್ರ ವ್ಯವಸ್ಥೆಗೆ ಮಾರಕವಾಗಿರುವ ಹಣಬಲ, ಜಾತಿಬಲ, ಖ್ಯಾತಿಬಲಗಳನ್ನು ಅಳಿಸಿ ಹಾಕಿ, ಸಂಪೂರ್ಣ ಪಾರದರ್ಶಕ ಆಡಳಿತ ನೀಡುವುದು ಪಕ್ಷದ ಉದ್ದೇಶ. ಉತ್ತಮ ಪ್ರಜಾಕೀಯ ವ್ಯವಸ್ಥೆಯನ್ನು ರೂಪಿಸುವುದು ನನ್ನ ಮುಂದಿನ ಗುರಿ ಎಂದು ಉಪೇಂದ್ರ ಹೇಳಿದ್ದಾರೆ.

ಉಪ್ಪಿ ಶುರು ಮಾಡುತ್ತಿದ್ದಾರೆ 'ಉತ್ತಮ ಪ್ರಜಾಕೀಯ ಪಾರ್ಟಿ'ಉಪ್ಪಿ ಶುರು ಮಾಡುತ್ತಿದ್ದಾರೆ 'ಉತ್ತಮ ಪ್ರಜಾಕೀಯ ಪಾರ್ಟಿ'

ಹೊಸ ಪಕ್ಷ ಘೋಷಣೆ ಮಾಡುವ ಉಪೇಂದ್ರ ಅವರು 2019ರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಪಕ್ಷದ ಹೆಸರನ್ನು ಘೋಷಣೆ ಮಾಡಿದ ದಿನವೇ ಉಪೇಂದ್ರ ಅವರು ಈ ಕುರಿತು ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಪ್ರಜಾಕೀಯಕ್ಕೆ ಬೆನ್ನು ತೋರಿಸಿದ್ರಾ ಉಪೇಂದ್ರ?ಪ್ರಜಾಕೀಯಕ್ಕೆ ಬೆನ್ನು ತೋರಿಸಿದ್ರಾ ಉಪೇಂದ್ರ?

ಉಪೇಂದ್ರ ಟ್ವೀಟ್

ನಟ ಉಪೇಂದ್ರ ಅವರು ಹೊಸ ಪಕ್ಷ 'ಉತ್ತಮ ಪ್ರಜಾಕೀಯ ಪಾರ್ಟಿ' ಸ್ಥಾಪನೆ ಮಾಡುವ ಕುರಿತು ಟ್ವೀಟ್ ಮಾಡಿದ್ದಾರೆ. ಹುಟ್ಟು ಹಬ್ಬದ ದಿನವೇ ಪಕ್ಷ ಸ್ಥಾಪನೆಯಾಗಲಿದೆ.

ಪಕ್ಷ ನೋಂದಣಿಯಾಗಿದೆ

ಪಕ್ಷ ನೋಂದಣಿಯಾಗಿದೆ

'ಉತ್ತಮ ಪ್ರಜಾಕೀಯ ಪಾರ್ಟಿ'ಯನ್ನು ಉಪೇಂದ್ರ ಅವರು ಈಗಾಗಲೇ ನೋಂದಣಿ ಮಾಡಿಸಿದ್ದಾರೆ. ಮೇ 10ರಂದು ದೆಹಲಿಗೆ ಭೇಟಿ ನೀಡಿದ್ದ ಅವರು ಚುನಾವಣಾ ಆಯೋಗದಲ್ಲಿ ಹೊಸ ಪಕ್ಷದ ಹೆಸರನ್ನು ನೋಂದಣಿ ಮಾಡಿಸಿದ್ದರು. ಈಗ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಾರೆ.

ಕೆಪಿಜೆಪಿ ಕಟ್ಟಿದ್ದರು

ಕೆಪಿಜೆಪಿ ಕಟ್ಟಿದ್ದರು

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಉಪೇಂದ್ರ ಅವರು ಕೆಪಿಜೆಪಿ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಆದರೆ, ಚುನಾವಣೆ ದಿನಾಂಕ ಘೋಷಣೆಯಾಗುವ ಸಂದರ್ಭದಲ್ಲಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದ್ದರಿಂದ, ಉಪೇಂದ್ರ ಪಕ್ಷದಿಂದ ಹೊರಬಂದಿದ್ದರು. ಈಗ ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದಾರೆ.

ಪಕ್ಷದ ಕಾರ್ಯಸೂಚಿ ಘೋಷಣೆ

ಪಕ್ಷದ ಕಾರ್ಯಸೂಚಿ ಘೋಷಣೆ

'ಉತ್ತಮ ಪ್ರಜಾಕೀಯ ವ್ಯವಸ್ಥೆಯನ್ನು ರೂಪಿಸುವುದು ನನ್ನ ಮುಂದಿನ ಗುರಿ' ಎಂದು ಉಪೇಂದ್ರ ಹೇಳಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ಮುನ್ನ ಉಪೇಂದ್ರ ಅವರು 'ಉತ್ತಮ ಪ್ರಜಾಕೀಯ ಪಾರ್ಟಿ'ಯ ಕಾರ್ಯಸೂಚಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.

English summary
The Kannada actor and director Upendra to announce a new party on September 18, 2018. Uttama Prajaakeeya Party (UPP) party will announced on his birthday September 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X